Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾಗಿ 12 ವರ್ಷದ ಬಳಿಕ ಗರ್ಭವತಿ: ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ ಬಾಣಂತಿ!

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ ಸಾವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿ ಬೆಳಗಿನ ಜಾವ ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. 12 ವರ್ಷಗಳ ಬಳಿಕ ಗರ್ಭವತಿಯಾಗಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ ಮರುದಿನವೇ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಷ್ಟಕ್ಕೂ ಬಾಣಂತಿಗೆ ಆಗಿದ್ದೇನು? ಕುಟುಂಬಸ್ಥರ ಆರೋಪವೇನು? ಈ ಬಗ್ಗೆ ವೈದ್ಯರು ಹೇಳುವುದೇನು ಎನ್ನುವ ವಿವರ ಇಲ್ಲಿದೆ.

ಮದ್ವೆಯಾಗಿ 12 ವರ್ಷದ ಬಳಿಕ ಗರ್ಭವತಿ: ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ ಬಾಣಂತಿ!
Belagavi Anjali Patil
Follow us
Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on:Jan 28, 2025 | 6:05 PM

ಬೆಳಗಾವಿ, (ಜನವರಿ 28): ಕರ್ನಾಟಕದಲ್ಲಿ ಬಾಣಂತಿಯರ ಸಾವು ಮುಂದುವರೆದಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಹೆಣ್ಣು ಮಗುವಿನ ಜನ್ಮ ನೀಡಿದ ಮರು ದಿನವೇ ಸಾವನ್ನಪ್ಪಿದ್ದಾರೆ. ಮದುವೆಯಾಗಿ 12 ವರ್ಷಗಳ ಬಳಿಕ ಹಿಂದೆ ನಿಂಗಾಣಿ ಜೊತೆಗೆ ಅಂಜಲಿ ವಿವಾಹವಾಗಿತ್ತು. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಅಂಜಲಿ ಗರ್ಭವತಿಯಾಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಆದ್ರೆ, ದುರದೃಷ್ಟವಶಾತ್​ ನಿನ್ನೆ(ಜನವರಿ 27) ಹೆಣ್ಣು ಮಗುವಿಗೆ ಜನ್ಮ ನೀಡಿ ಇಂದು (ಜನವರಿ 28) ಸಾವನ್ನಪ್ಪಿದ್ದಾರೆ.

ಮದ್ವೆಯಾಗಿ 12 ವರ್ಷಗಳ ಬಳಿಕ ಗರ್ಭವತಿ

ನಿನ್ನೆ ಸಂಜೆ ಬಿಮ್ಸ್ ಆಸ್ಪತ್ರೆಗೆದಾಖಲಾಗಿದ್ದ ಅಂಜಲಿ ಪಾಟೀಲ್‌ ಅವರಿಗೆ ರಾತ್ರಿ ಸಿಜರಿನ್ ಮಾಡಲಾಗಿತ್ತು.. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್‌ ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಅಂಜಲಿಗೆ ನಿಲಜಿ ಗ್ರಾಮದ ನಿಂಗಾಣಿ ಪಾಟೀಲ್ ಜೊತೆಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದ್ರೆ, ಮಕ್ಕಳಾಗಿರಲಿಲ್ಲ. ಹನ್ನೆರಡು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಅಂಜಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಸಿಜರಿನ್ ಮಾಡಿ ಹೆರಿಗೆ ಮಾಡಿದ್ದು ಹೆಣ್ಣು ಮಗು ಜನನವಾಗಿದೆ.

ಇದನ್ನೂ ಓದಿ: ಸರ್ಕಾರಿ ವೈದ್ಯರ ನಿರ್ಲಕ್ಷ್ಯ: ಒಂದುವರೆ ವರ್ಷದಿಂದಷ್ಟೇ ಮದ್ವೆಯಾಗಿದ್ದ ಗೋಲ್ಡ್ ಮೆಡಲಿಸ್ಟ್ ದುರಂತ ಸಾವು

ವೈದ್ಯರು ಹೇಳಿದ್ದೇನು?

ಆದ್ರೆ ಚೆನ್ನಾಗಿದ್ದ ಅಂಜಲಿ ಪಿಡ್ಸ್ ಬಂದು ಬಿಪಿಯಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಅಂಜಲಿ ಪಾಟೀಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 12 ವರ್ಷಗಳ ಬಳಿಕ ಮಗುವಾದ ಖುಷಿಯಲ್ಲಿದ್ದ ಕುಟುಂಬಸ್ಥರು ಈಗ ಅಂಜಲಿ ಸಾವು ಬರಸಿಡಿಲು ಬಡಿದಂತಾಗಿದ್ದು. ಬಿಮ್ಸ್ ಆಸ್ಪತ್ರೆಯ ಹರಿಗೆ ವಾರ್ಡ್ ಎದುರು ಆಕ್ರಂದನ ಮುಗಿಲುಮುಟ್ಟಿದೆ.

ಅಂಜಲಿ ಸಂಬಂಧಿಕರ ಆರೋಪವೇನು?

ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಬಾಣಂತಿ ಅಂಜಲಿ ಪಾಟೀಲ್ ಸಂಬಂಧಿ ರಾಹುಲ್, ನಿನ್ನೆ ಅಂಜಲಿ ಪಾಟೀಲ್ ನಡೆದುಕೊಂಡು ಬಂದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇವತ್ತು ಹೆರಿಗೆ ಮಾಡಲ್ಲ ಎಂದು ವೈದ್ಯರು ಹೇಳಿದಾಗ ಅವರ ಪತಿ ಮನೆಗೆ ಹೋಗಿದ್ದರು. ಬಳಿಕ ಅವರ ಪತಿ ಮನೆಯಿಂದ ಬರುವ ಮುಂಚೆಯೇ ಸೀಜರಿನ್ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಪತಿಯ ಬಳಿ ಖಾಲಿ ಪೇಪರ್ ಮೇಲೆ ಸಹಿ ತಗೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಪೇಷಂಟ್ ಕಂಡೀಷನ್ ಕ್ರಿಟಿಕಲ್ ಇದೆ ಎಂದು ಹೇಳಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಹೇಳಿದಾಗ ಅವರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ‌‌.

ಇನ್ನೂ ಸಂಬಂಧಿಕರ ಆಕ್ರೋಶದ ಮಧ್ಯೆಯೇ ಶವವನ್ನ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಶಿಪ್ಟ್ ಮಾಡಿದರು. ಈ ವೇಳೆ ಶವಾಗಾರದ ಮುಂದೆ ಜಮಾವಣೆಗೊಂಡ ಕುಟುಂಬಸ್ಥರು ವೈದ್ಯರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ದಿಢೀರ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಎಪಿಎಂಸಿ ಠಾಣೆ ಪೊಲೀಸರು ಹಾಗೂ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಅಶೋಕ ಶೆಟ್ಟಿ ಸಂಬಂಧಿರಕ ಮನವೊಲಿಸುವ ಪ್ರಯತ್ನ ಮಾಡಿದರು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಹಾಗೂ ದೂರು ದಾಖಲಿಸಿಕೊಂಡು ತನಿಖೆ ಮಾಡ್ತೇವಿ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನ ವಾಪಾಸ್ ಪಡೆದರು. ಇದಾದ ಬಳಿಕ ಬಾಣಂತಿ ಶವದ ಮರಣೋತ್ತರ ಪರೀಕ್ಷೆಯನ್ನ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯ್ತು.

ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ನಿನ್ನೆ ಗರ್ಭಿಣಿ ಆಸ್ಪತ್ರೆಗೆ ಅಡ್ಮಿಟ್ ಆದಾಗ ಪರಿಶೀಲಿಸಿದಾಗ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಗೊತ್ತಾಗಿದೆ. ತಕ್ಷಣವೇ ‌ಸಿಜರಿನ್ ಮಾಡಲು ಆಪರೇಷನ್ ಥೇಟರ್‌ಗೆ ಕರೆದೊಯ್ಯಲಾಗಿದೆ.‌ ಆಗ ದಿಢೀರ್ ಅಂಜಲಿ ಪಾಟೀಲ್‌ಗೆ ಪಿಟ್ಸ್ (ಮೂರ್ಛೆರೋಗ) ಕಾಣಿಸಿಕೊಂಡು ರಕ್ತದೊತ್ತಡ ಕಡಿಮೆಯಾಗಿದೆ. ಇನ್ನು ಆಮ್ನಿಯೊಟಿಕ್ ಫ್ಲ್ಯೂಡ್ ಓಪನ್ ಆದಾಗ ಸ್ವಲ್ಪ ವಾಸನೆ ಬರುತ್ತಿತ್ತು. ಆಗ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸಂ ಆಗಿರಬಹುದು ಎಂದು ಶಂಕಿಸಲಾಗಿದೆ. ಇದರಲ್ಲಿ ಯಾರಾದ್ರೂ ತಪ್ಪು ಕಂಡು ಬಂದರೆ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಬಾಣಂತಿ ಸಾವಿನ ಪ್ರಕರಣ ದಿನದಿಂದ ದಿ‌ನಕ್ಕೆ ಏರಿಕೆಯಾಗುತ್ತಿದ್ದು ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ವೈದ್ಯರ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೂಡ ಇನ್ನಷ್ಟು ಗಮನ ಹರಿಸಿ ಸಾವಿಗೆ ಕಡಿವಾಣ ಹಾಕುವ ಕೆಲಸ ಮಾಡಲಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Tue, 28 January 25

ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ
ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ
ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು
ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ