ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ; ಸುವರ್ಣಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಅಧಿವೇಶನ ಹಿನ್ನೆಲೆ ಡಿ.30ರವರೆಗೆ ಸುವರ್ಣಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ; ಸುವರ್ಣಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಬೆಳಗಾವಿ ಸುವರ್ಣಸೌಧ
Follow us
TV9 Web
| Updated By: ಆಯೇಷಾ ಬಾನು

Updated on: Dec 17, 2022 | 9:05 AM

ಬೆಳಗಾವಿ: ಡಿಸೆಂಬರ್ 19ರಿಂದ ಡಿ.30ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ 10ನೇ ಚಳಿಗಾಲದ ಅಧಿವೇಶನಕ್ಕೆ(Belagavi Winter Session) ಸಿದ್ಧತೆಗಳು ಶುರುವಾಗಿವೆ. ಅಧಿವೇಶನ ಹಿನ್ನೆಲೆ ಡಿ.30ರವರೆಗೆ ಸುವರ್ಣಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಯಾವುದೇ ಪ್ರತಿಭಟನೆ, ಗುಂಪು ಕಟ್ಟಿಕೊಂಡು ಓಡಾಡಲು ನಿಷೇಧ ಹೇರಲಾಗಿದೆ. 10 ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಅಧಿವೇಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಇಡೀ ಸರ್ಕಾರವೇ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿರುವ ಹಿನ್ನೆಲೆ ಅಧಿಕಾರಿಗಳು ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತಿದ್ದಾರೆ. ಶಾಸಕರು, ಪರಿಷತ್ ಸದಸ್ಯರು, ಅಧಿಕಾರಿಗಳು ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ನಗರಕ್ಕೆ 10 ಸಾವಿರ ಮಂದಿ ಆಗಮಿಸುತ್ತಿರುವ ಹಿನ್ನೆಲೆ ನಗರದ ಬಹುತೇಕ ಲಾಡ್ಜ್​ಗಳು ಸಂಪೂರ್ಣ ಭರ್ತಿಯಾಗಿವೆ.

ಇದನ್ನೂ ಓದಿ: ಇದು ನೆಹರೂ ಭಾರತವಲ್ಲ: ರಾಹುಲ್ ಗಾಂಧಿಯ ಚೀನಾ ಬೆದರಿಕೆ ಕುರಿತ ಹೇಳಿಕೆಗೆ ಬಿಜೆಪಿ ತಿರುಗೇಟು

ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ

ಈ ಬಾರಿ ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ ತಟ್ಟುವ ಸಾಧ್ಯತೆ ಇದೆ. ಹಲವು ಸಮುದಾಯಗಳಿಂದ ಮೀಸಲಾತಿ ಹೋರಾಟಕ್ಕೆ ಪ್ಲ್ಯಾನ್ ನಡೆದಿದೆ. ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೆಲ ಸಮೀತಿಗಳು ಪ್ಲಾನ್ ಮಾಡಿಕೊಂಡಿವೆ. ಅಧಿವೇಶನ ಸಮಯದಲ್ಲಿ ಪ್ರತಿಭಟನೆ ನಡೆಸಲು ಈಗಾಗಲೇ 62 ಸಂಘಟನೆಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿವೆ. ಒಂಬತ್ತು ಸಂಘಟನೆಗಳಿಂದ ಕೇವಲ ಮನವಿ ನೀಡುವುದಾಗಿ ಅರ್ಜಿ. ಸಂಘಟನೆಗಳು ಪ್ರತಿಭಟನೆ ನಡೆಸಲು ಸುವರ್ಣಸೌಧದ ಬಳಿ ಟೆಂಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ನಗರ ಪೊಲೀಸರು 10 ಟೆಂಟ್​​ಗಳನ್ನು ನಿರ್ಮಾಣ ಮಾಡಿದ್ದಾರೆ. ಡಿ.19ರಂದು ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ನಡೆಸಲಿದ್ದಾರೆ. ಡಿ.21ರಂದು ಮಾದಿಗ ದಂಡೋರ ಸಮಿತಿಯಿಂದ ಹೋರಾಟ. ಡಿ.22ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಹೋರಾಟ ನಡೆಯಲಿದೆ. ಹೋರಾಟಕ್ಕೆ 100 ಎಕರೆ ಪ್ರದೇಶದ ಬೃಹತ್ ಜಾಗ ನಿಗದಿ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ