Deceber 31 Karnataka Bandh: MES ವಿರುದ್ಧ ಪ್ರತಿಭಟನೆ, ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು

Deceber 31 Karnataka Bandh: MES ವಿರುದ್ಧ ಪ್ರತಿಭಟನೆ, ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು
ವಾಟಾಳ್ ನಾಗರಾಜ್

ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. 31 ಕರ್ನಾಟಕ ಬಂದ್ ಎಂದೂ ಪ್ರತಿಭಟನಾಕಾರರು ಘೋಷಣೆ ಹಾಕಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

TV9kannada Web Team

| Edited By: sadhu srinath

Dec 29, 2021 | 1:45 PM

ಬೆಳಗಾವಿ: ಎಂಇಎಸ್ ಸಂಘಟನೆ ನಿಷೇಧ ಆಗ್ರಹಿಸಿ MES ವಿರುದ್ಧ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಚನ್ನಮ್ಮ ವೃತ್ತದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಹೂಹಾರ ಹಾಕಿ ಪೂಜೆ ಸಲ್ಲಿಸಿ ವಾಟಾಳ್ ನಾಗರಾಜ್ ಪ್ರತಿಭಟನೆಗೆ ಚಾಲನೆ ನೀಡಿದರು. ಆ ವೇಳೆ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. 31 ಕರ್ನಾಟಕ ಬಂದ್ (Deceber 31 Karnataka Bandh) ಎಂದೂ ಪ್ರತಿಭಟನಾಕಾರರು ಘೋಷಣೆ ಹಾಕಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

ಡಿ. 31 ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಶತಸಿದ್ದ-ವಾಟಾಳ್
ಇನ್ನು ಡಿಸೆಂಬರ್ 31ರಂದು ಕರ್ನಾಟಕ ಬಂದ್‌ ಬಗ್ಗೆ ಎದ್ದಿರುವ ಗೊಂದಲದ ವಿಚಾರವಾಗಿ ಬೆಳಗಾವಿಯಲ್ಲಿ ಟಿವಿ9 ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಹೇಳಿಕೆ ಕೊಡಲು ಎಲ್ಲರೂ ಸ್ವತಂತ್ರರೂ, ಅದರ ಬಗ್ಗೆ ಚಿಂತೆ ಇಲ್ಲ. 10 ದಿನಗಳ ಹಿಂದೆಯೇ ನಾವು ಬಂದ್‌ಗೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟ ಎಂಇಎಸ್ ಬ್ಯಾನ್ ಮಾಡಲು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ. ಡಿ. 31 ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಶತಸಿದ್ದ. ಬೆಳಗಾವಿಯ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಾನು ಬೆಳಗಾವಿಯಲ್ಲಿದ್ದೇನೆ, ಪ್ರವೀಣ್ ಶೆಟ್ಟಿ ಅವರ ಪತ್ರ ಬಂದಿರೋದು ಗೊತ್ತಿಲ್ಲ. ನಾಳೆ ಸಭೆ ಸೇರಿ ಚರ್ಚೆ ಮಾಡ್ತೇವಿ ಅಂತಾ ಸಾರಾ ಗೋವಿಂದ್ ನೀಡಿರುವ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ವಾಟಾಳ್ ನಾಗರಾಜ್, ಈಗಾಗಲೇ ಬಂದ್‌ಗೆ ಕರೆ ಕೊಟ್ಟಿದ್ದೇವೆ ಯಾವುದೇ ಬದಲಾವಣೆ ಇಲ್ಲ. ಸೂರ್ಯ ಈ ಕಡೆ ಬರಲಿ -ಚಂದ್ರ ಆ ಕಡೆ ಹೋಗಲಿ ಬಂದ್ ಮಾತ್ರ ಶತಸಿದ್ಧ. ಇಡೀ ದೇಶದಲ್ಲಿ ಎಲ್ಲಾ ಹೋರಾಟಗಳು ಒಂದಲ್ಲಾ ಒಂದು ರೀತಿಯಲ್ಲಿ ಸ್ವಲ್ಪ ವ್ಯತ್ಯಾಸ ಇರ್ತವೆ. ಇದೆಲ್ಲವನ್ನೂ ದೊಡ್ಡದು ಮಾಡಲು ಆಗಲ್ಲಾ. ಎಂಇಎಸ್ ಬ್ಯಾನ್ ಆದ್ರೇ ಗಡಿಯಲ್ಲಿ ಪುಂಡಾಟಿಕೆ‌ ನಿಲ್ಲುತ್ತೆ. ನಾನಂತೂ ನನ್ನ ಉಸಿರಿರುವವರೆಗೂ ಎಂಇಎಸ್ ನಿಷೇಧಕ್ಕೆ ಹೋರಾಟ ಮಾಡ್ತೇನಿ. 31ರಂದು ಬಂದ್ ಯಾವ ಯಾವ ರೀತಿ ಆಗುತ್ತೆ ಕನ್ನಡಿಗರಿಗೆ ಬಿಟ್ಟಿದ್ದು ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ.

ಬಂದ್​ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಬೆಂಬಲ: ಕೋಡಿಹಳ್ಳಿ ಚಂದ್ರಶೇಖರ್
ಡಿಸೆಂಬರ್ 31ರ ಬಂದ್​ಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲ ನೀಡಲಿದೆ ಎಂದು ಬೆಂಗಳೂರಿನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಸರಿಯಾದ ಸೂಕ್ತ ಸಿದ್ಧತ ಮಾಡಿಕೊಂಡು ಬಂದ್ ಗೆ ಕರೆ ಕೊಡಬೇಕಿತ್ತು. ಸಿನಿಮಾ ಲಾಸ್ ಆಗುತ್ತೆ ಅನ್ನೋದು, ವ್ಯಾಪಾರಸ್ಥರು ನಷ್ಟ ಆಗುತ್ತೆ ಅನ್ನೋದು ಸರಿಯಾದ ಉತ್ತರ ಅಲ್ಲ. ಸಾ.ರಾ. ಗೋವಿಂದ್ ಅವರು ಸೂಕ್ತ ಉತ್ತರ ನೀಡಬೇಕು. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ತೇವೆ. ಬಂದ್ ಗೆ ನೀಡಿರುವ ಕರೆಗೆ ಸಂಪೂರ್ಣ ಬೆಂಬಲ ಇದೆ. ಮಹಾಜನ್ ವರದಿಯನ್ನ ಎಲ್ಲರೂ ಫಾಲೊ ಮಾಡಬೇಕು. ನಮಗೆ ಬದ್ಧರಾಗಿ ನಾವು ಮುಂದುವರೆಯಬೇಕು. ರಾಜ್ಯದೊಳಗೆ ಬೇರೆ ಯಾವ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. MES ಸಂಪೂರ್ಣ ನಿಷೇಧ ಮಾಡಬೇಕು ಎಂದು ಕೋಡಿಹಳ್ಳಿ ಇದೇ ವೇಳೆ ಹೇಳಿದರು.

Karnataka Bund On Dec-13: ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್ ವಶಕ್ಕೆ|Tv9kannada

Karnataka Bund On Dec-13: ಬಂದ್ ಮಾಡೇ ಮಾಡ್ತೀವಿ ಎಂದ ವಾಟಾಳ್​ ನಾಗರಾಜ್|Tv9kannada

Follow us on

Related Stories

Most Read Stories

Click on your DTH Provider to Add TV9 Kannada