ಪ್ರವಚನ ಆಲಿಸಿ ತೆರಳುತ್ತಿದ್ದ ಅಣ್ಣ-ತಂಗಿಯ ಬೈಕ್ಗೆ ಕಾರು ಡಿಕ್ಕಿ, ತಂಗಿ ಸ್ಥಳದಲ್ಲೇ ಸಾವು; ವಿದ್ಯುತ್ ಪ್ರವಹಿಸಿ ವೆಲ್ಡರ್ ಸಾವು
ಅಪಘಾತದಲ್ಲಿ ಭಾರತಿ ಕರೋಶಿ ಕೊನೆಯುಸಿರೆಳೆದ ನತದೃಷ್ಟ ಯುವತಿ. ಬೈಕ್ ಚಲಾಯಿಸುತ್ತಿದ್ದ ಅಣ್ಣ ಶಿವಾನಂದ ಗಾಯಗೊಂಡಿದ್ದು, ಗೋಕಾಕ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ.
ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದಲ್ಲಿ ಮಡ್ಡಿ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಶುಕ್ರವಾರ ರಾತ್ರಿ 11 ಗಂಟೆಯಲ್ಲಿ ಅಣ್ಣ-ತಂಗಿ ತೆರಳುತ್ತಿದ್ದ ಬೈಕ್ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ತಂಗಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಅಪಘಾತದಲ್ಲಿ ಭಾರತಿ ಕರೋಶಿ (19) ಕೊನೆಯುಸಿರೆಳೆದ ನತದೃಷ್ಟ ಯುವತಿ. ಬೈಕ್ ಚಲಾಯಿಸುತ್ತಿದ್ದ ಅಣ್ಣ ಶಿವಾನಂದ ಗಾಯಗೊಂಡಿದ್ದು, ಗೋಕಾಕ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವ ಜಯಂತಿ, ಮಲ್ಲಿಕಾರ್ಜುನ ದೇವರ ಜಾತ್ರೆ ಅಂಗವಾಗಿ ಅಣ್ಣ ತಂಗಿ ಪ್ರವಚನ ಆಲಿಸಿ ಮನೆಗೆ ಬರುತ್ತಿದ್ದರು.
ಹೊಸನಿಜಗಲ್ ಗ್ರಾಮದಲ್ಲಿ ವಿದ್ಯುತ್ ಪ್ರವಹಿಸಿ ವೆಲ್ಡರ್ ಸಾವು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸನಿಜಗಲ್ ಗ್ರಾಮ ಗ್ರಾಮದ ಅಂಜನೇಯ ದೇವಾಲಯ ಬಳಿ ವಿದ್ಯುತ್ ಪ್ರವಹಿಸಿ ವೆಲ್ಡರ್, ಕೂತಘಟ್ಟದ ಫೈರೋಜ್ (35) ಮೃತಪಟ್ಟಿದ್ದಾರೆ. ಚಾವಣಿಗೆ ಪೈಪ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿದೆ. ಹೈ ವೋಲ್ಟೇಜ್ ಲೈನ್ ನಿಂದ ಸಂಪರ್ಕ ಪಡೆದು ಕೆಲಸ ಮಾಡುವ ವೇಳೆ ವೆಲ್ಡರ್ ಅಸುನೀಗಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಕರ್ನಾಟಕ ಕುರಿತಾದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Also Read: ಉತ್ತರ ಕರ್ನಾಟಕದ ಬಹುತೇಕ ರಾಜಕಾರಣಿಗಳು ಬೆಂಗಳೂರಿನಲ್ಲಿ ವೈಭವದ ಜೀವನ ನಡೆಸ್ತಿದಾರೆ -ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್