ಆರ್ಥಿಕತೆ ಉತ್ತಮವಾಗಿದೆ, ಬಿಸಿಲು ಭಯಂಕರವಾಗಿದೆ; ಹಾಗಾಗಿ ವಿದ್ಯುತ್​ ಬೇಡಿಕೆ ಅಗಾಧವಾಗಿದೆ- ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ

ಆರ್ಥಿಕತೆ ಉತ್ತಮವಾಗಿದೆ, ಬಿಸಿಲು ಭಯಂಕರವಾಗಿದೆ; ಹಾಗಾಗಿ ವಿದ್ಯುತ್​ ಬೇಡಿಕೆ ಅಗಾಧವಾಗಿದೆ- ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಥರ್ಮಲ್ ಪವರ್ ಪ್ಲಾಂಟ್​ಗಳಲ್ಲಿ ಕಲ್ಲಿದ್ದಲು ಕೊರತೆಯಿಲ್ಲ. ಈಗಾಗಲೇ 21.55 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಟನ್​ ಕಲ್ಲಿದ್ದಲು ಇದೆ. ಈ ತಿಂಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ನಿರ್ಮಾಣವಾಗಿದೆ. ಆರ್ಥಿಕತೆ ಉತ್ತಮವಾಗಿರುವುದೂ ಸಹ ಇದಕ್ಕೊಂದು ಕಾರಣವಾಗಿದೆ. ಈ ಬಾರಿ ಬಿಸಿಲು ಭಯಂಕರ ಬಂದಿದ್ದು ಕೂಡ ಇದಕ್ಕೆ ಕಾರಣವಾಗಿದೆ.

TV9kannada Web Team

| Edited By: sadhu srinath

Apr 30, 2022 | 3:59 PM


ಹುಬ್ಬಳ್ಳಿ: ದೇಶದಲ್ಲಿ ವಿದ್ಯುತ್​​ ಕ್ಷಾಮ ಎದುರಾಗಿದ್ದು, ಅದರನ್ನು ಸರಿದೂಗಿಸಲು ಮೊಟ್ಟಮೊದಲ ಬಾರಿಗೆ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕ ರೈಲುಗಳನ್ನು ಬಳಸಿ ಕಲ್ಲಿದ್ದು ಸಾಗಿಸುವಂತಹ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿಯೂ ಅನಿಯಮಿತವಾಗಿ ಲೋಡ್​ ಶೆಡ್ಡಿಂಗ್​ ಸಾಮಾನ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದವರೇ ಆದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ (Union Coal Minister Pralhad Joshi) ಅವರು ತಮ್ಮೂರಿಗೆ ಬಂದಿದ್ದು (Hubli), ದೇಶದಲ್ಲಿ ಕಲ್ಲಿದ್ದಲು ಅಭಾವ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಥರ್ಮಲ್ ಪವರ್ ಪ್ಲಾಂಟ್​ಗಳಲ್ಲಿ ಕಲ್ಲಿದ್ದಲು ಕೊರತೆಯಿಲ್ಲ. ಈಗಾಗಲೇ 21.55 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಟನ್​ ಕಲ್ಲಿದ್ದಲು ಇದೆ. ಈ ತಿಂಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ನಿರ್ಮಾಣವಾಗಿದೆ. ಆರ್ಥಿಕತೆ ಉತ್ತಮವಾಗಿರುವುದೂ ಸಹ ಇದಕ್ಕೊಂದು ಕಾರಣವಾಗಿದೆ. ಈ ಬಾರಿ ಬಿಸಿಲು ಭಯಂಕರ ಬಂದಿದ್ದು ಕೂಡ ಇದಕ್ಕೆ ಕಾರಣವಾಗಿದೆ. 10 ದಿನಗಳಲ್ಲಿ ಕತ್ತಲೆ ಆವರಿಸಲಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಕಲ್ಲಿದ್ದಲು ಸ್ಟಾಕ್ ಇದೆ, ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ (load shedding). ಪ್ರತಿ ದಿನ 1.7 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿರುವುದರಿಂದ ಸಾಗಣೆಗೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿ:
ಇನ್ನು ವಿದ್ಯುತ್​ ಅಭಾವದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳನ್ನು ಪ್ರಸ್ತಾಪಿಸುತ್ತಾ, ರಾಹುಲ್ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿಕಾರಿದರು. ಸತ್ಯಾಂಶವನ್ನು ತಿಳಿಯದೆ ರಾಹುಲ್ ಗಾಂಧಿ ಮಾತನಾಡಬಾರದು. ನಾನು ಅವರನ್ನು ನಕಲಿ ಜ್ಯೋತಿಷಿ ಎಂದು ಕರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

PSI ಹುದ್ದೆಗಳ ನೇಮಕಾತಿ ಅಕ್ರಮ ಕೇಸ್ ಗಂಭೀರವಾಗಿದೆ:
545 PSI ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸಮರ್ಥಿಸಿ ಮಾತನಾಡಿದ ಸಚಿವ ಜೋಶಿ ಅವರು ಸರ್ಕಾರ ಆ ಬಗ್ಗೆ ಸಾರಾಸಗಟಾಗಿ ನಿರ್ಧಾರವನ್ನ ಕೈಗೊಂಡಿದೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವೆಸಗಿದ್ದಾರೆ. ಹೀಗಾಗಿ ಕೇಸ್ ಗಂಭೀರವಾಗಿ ಪರಿಗಣಿಸಿ ಆ ಕ್ರಮ ಕೈಗೊಂಡಿದ್ದಾರೆ. ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ಮುಂದೆ ಈ ರೀತಿ ಆಗದಂತೆ ಸಿಎಂ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಕರ್ನಾಟಕ ಕುರಿತಾದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

Smart City: ಮಕ್ಕಳ ರೈಲು ಉದ್ಘಾಟನೆ ವೇಳೆ ಅವಘಡ

ಇದೂ ಓದಿ: Akshaya Trutheeya: ಅನ್ನಪೂರ್ಣೇಶ್ವರಿ ಜನಿಸಿದ ದಿನ -ಅನಂತ ಶುಭವನ್ನು ತರುವ ಅಕ್ಷಯ ತದಿಗೆ ದಿನದ ನಾನಾ ಮಹತ್ವ, ವಿವರ

ಇದೂ ಓದಿ:
ಸಬ್​​ ಇನ್ಸ್​​​ಪೆಕ್ಟರ್​​​ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿರುವ ಗೃಹ ಸಚಿವರೇ ಈ ಅಭ್ಯರ್ಥಿಯ ಅಳಲನ್ನು ಒಮ್ಮೆ ಆಲಿಸಿ!

 

Follow us on

Related Stories

Most Read Stories

Click on your DTH Provider to Add TV9 Kannada