
ಬೆಳಗಾವಿ, ಮೇ 23: ಬೆಳಗಾವಿಯ (Belagavi) ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ (Medical College Student) ಮೇಲೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಮಂಗಳವಾರ ಮೇ. 20 ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತರ ಜೊತೆ ಸಿನಿಮಾ ನೋಡಲು ಹೋಗಿದ್ದಾಗ ಕೃತ್ಯ ಎಸಗಲಾಗಿದೆ. ಯುವತಿ ಸಿನಿಮಾ ನೋಡಿ ವಾಪಾಸ್ ಸ್ನೇಹಿತರ ಪ್ಲ್ಯಾಟ್ಗೆ ಹೋಗಿದ್ದಳು.
ಈ ವೇಳೆ ಯುವತಿಗೆ ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿದ್ದಾರೆ. ಬಳಿಕ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬೆಳಗ್ಗೆ ಎದ್ದ ಬಳಿಕ ಅತ್ಯಾಚಾರ ಆಗಿದ್ದರ ಬಗ್ಗೆ ಯುವತಿಗೆ ತಿಳಿದಿದೆ. ಕೂಡಲೇ ಯುವತಿ ಕುಟುಂಬಸ್ಥರ ಗಮನಕ್ಕೆ ತಂದಿದ್ದಾಳೆ. ನಂತರ, ಸಾಂಗ್ಲಿಯ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಇದನ್ನೂ ಓದಿ: ಶೆಡ್ನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿ ಚರಂಡಿಗೆ ಎಸೆದ ಆರೋಪಿಗಳು ಅರೆಸ್ಟ್
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಸೊಲ್ಲಾಪುರದ ವಿನಯ್ ಪಾಟೀಲ್ (22), ಪುಣೆಯ ಸರ್ವಜ್ಞ ಗಾಯಕವಾಡ (22), ಸಾಂಗ್ಲಿಯ ತನ್ಮಯ್ ಪೇಡ್ನೆಕರ್ (21) ಬಂಧಿತರು. ಪೊಲೀಸರು ಆರೋಪಿಗಳನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:11 pm, Fri, 23 May 25