ಬೆಳಗಾವಿ ಗಡಿ ಪ್ರವೇಶಕ್ಕೆ ಶಿವಸೇನೆ ಉದ್ಧವ್ ಠಾಕ್ರೆ ಬಣ ಯತ್ನ; ಪೊಲೀಸರ ವಶಕ್ಕೆ

ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಹೊರವಲಯದಲ್ಲಿ ಶಿವಸೇನೆ ಪುಂಡರು ಇಂದು ಅರ್ಧಗಂಟೆ ಕಾಲ ಕರ್ನಾಟಕ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಘೋಷಣೆ ಹಾಕಿದರು.

ಬೆಳಗಾವಿ ಗಡಿ ಪ್ರವೇಶಕ್ಕೆ ಶಿವಸೇನೆ ಉದ್ಧವ್ ಠಾಕ್ರೆ ಬಣ ಯತ್ನ; ಪೊಲೀಸರ ವಶಕ್ಕೆ
ಪೊಲೀಸರ ವಶಕ್ಕೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ವಿವೇಕ ಬಿರಾದಾರ

Updated on:Nov 01, 2023 | 1:05 PM

ಚಿಕ್ಕೋಡಿ ನ.1: ಕನ್ನಡ ರಾಜ್ಯೋತ್ಸವ (Kannada Rajyotsava) ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ (Shivasene) ಉದ್ಧವ್ ಠಾಕ್ರೆ ಬಣದ ಪುಂಡರನ್ನು ಮಹಾರಾಷ್ಟ್ರ (Maharashtra) ಪೊಲೀಸರು ವಶಕ್ಕೆ ಪಡೆದರು. ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಹಾರಾಷ್ಟ್ರದ ಗಡಿಯಲ್ಲೇ ತಡೆಯಲಾಯಿತು. ಪೊಲೀಸರು ವಾಹನದಲ್ಲಿ ವಾಪಸ್ ಕಾಗಲ್‌ಗೆ ಕರೆದುಕೊಂಡು ಹೋದರು.

ಶಿವಸೇನೆ ಉದ್ಧವ್ ಠಾಕ್ರೆ ಬಣ ಗಡಿ ವಿವಾದದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಶಿವಸೇನೆ ಪುಂಡರು ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಅರ್ಧ ಗಂಟೆ ಹೈಡ್ರಾಮಾ ಸೃಷ್ಟಿಸುತ್ತಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಹೊರವಲಯದಲ್ಲಿ ಶಿವಸೇನೆ ಪುಂಡರು ಇಂದು ಅರ್ಧಗಂಟೆ ಕಾಲ ಕರ್ನಾಟಕ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಘೋಷಣೆ ಹಾಕಿದರು.

ನಾಯಕರು ಗಡಿ ಪ್ರವೇಶಕ್ಕೆ ಯತ್ನಿಸಿದರೇ ಕಾನೂನು ಕ್ರಮ: ನಗರ ಪೊಲೀಸ್ ಆಯುಕ್ತ

ನಿಷೇಧದ ನಡುವೆಯೂ ಬುಧವಾರ ಬೆಳಗ್ಗೆ 9 ಗಂಟೆಗೆ ಮರಾಠಾ ಭವನ ಬಳಿ ಎಂಇಎಸ್ ಕಾರ್ಯಕರ್ತರು ಜಮಾವಣೆಗೊಳ್ಳಲಿದ್ದಾರೆ. ಮಹಾರಾಷ್ಟ್ರದ ಮೂರು ಜನ ಸಚಿವರು ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಾಯಕರನ್ನು ತಡೆಯಲು ಗಡಿ ಭಾಗದಲ್ಲಿ 18 ಚೆಕ್ ಪೋಸ್ಟ್​​ಗಳನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: MES ಕರಾಳ ದಿನಾಚರಣೆ: ನಿಷೇಧದ ನಡುವೆಯೂ ಉದ್ಧವ್ ಠಾಕ್ರೆ ಶಿವಸೇನೆ ಬಣದಿಂದ ಬೆಳಗಾವಿ ಚಲೋ ಕರೆ

ಮಹಾರಾಷ್ಟ್ರದ ನಾಯಕರು ಗಡಿ ಪ್ರವೇಶಕ್ಕೆ ಯತ್ನಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರಾಳ ದಿನ ಆಚರಣೆ ಹೆಸರಲ್ಲಿ ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

ಕರಾಳ‌ ದಿನಾಚರಣೆಗೆ ಅವಕಾಶವಿಲ್ಲ: ನಿತೇಶ್​ ಪಾಟೀಲ್​

ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದೇವೆ. ಕರಾಳ‌ ದಿನಾಚರಣೆಗೆ ಅವಕಾಶವಿಲ್ಲ. ಅಧಿವೇಶನ ವೇಳೆಯೂ ಮಹಾಮೇಳಾವಗೆ ಅವಕಾಶ ಕೊಡುವುದಿಲ್ಲ. ಕಳೆದ ವರ್ಷವೂ ಅವಕಾಶ ಕೊಟ್ಟಿಲ್ಲ. ಈ ವರ್ಷವೂ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮಹಾರಾಷ್ಟ್ರ ನಾಯಕರು ಬೆಳಗಾವಿ ಜಿಲ್ಲೆಯ ಪ್ರವೇಶಿಸದಂತೆ ಎಸ್ಪಿ ಮತ್ತು ಪೊಲೀಸ್ ಕಮೀಷನರ್ ಕ್ರಮವಹಿಸುತ್ತಾರೆ‌ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:46 am, Wed, 1 November 23