Dalit: ದಲಿತ ನಾಯಕರ ಬೆಳವಣಿಗೆ ಹತ್ತಿಕ್ಕಿರುವ ಸಿದ್ದರಾಮಯ್ಯಗೆ ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಹೇಳುವ ನೈತಿಕತೆ ಇಲ್ಲ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Pralhad Joshi: ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಹೋದ ಕಡೆಯಲೆಲ್ಲಾ ಮಾತಾಡ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ದಲಿತ ನಾಯಕರ ಬೆಳವಣಿಗೆಯನ್ನ ಹತ್ತಿಕ್ಕುತ್ತಿರುವವರು ಇದೇ ಸಿದ್ದರಾಮಯ್ಯ ಎಂದು ಟೀಕಿಸಿದ ಜೋಶಿಯವರು, ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ (Siddaramaiah) ಮನೆಗೆ ಹೋಗುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬೈಲಹೊಂಗಲ, ಸವದತ್ತಿಯಲ್ಲಿ ಇಂದು ಬಿಎಸ್ ಯಡಿಯೂರಪ್ಪ (BS Yediyurappa) ಜೊತೆ ಬಿಜೆಪಿ (BJP) ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಮಾತನಾಡಿದರು. ಕಾಂಗ್ರೆಸ್ ನಾಯಕರು ಎಲ್ಲೆಡೆ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಅಂತಾ ಹೇಳಿಕೊಂಡು ತಿರುಗಾಡ್ತಿದ್ದಾರೆ, ಅದು ಕಾಂಗ್ರೆಸ್ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದು ಜೋಶಿಯವರು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಹೋದ ಕಡೆಯಲೆಲ್ಲಾ ಮಾತಾಡ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ದಲಿತ ನಾಯಕರ ಬೆಳವಣಿಗೆಯನ್ನ ಹತ್ತಿಕ್ಕುತ್ತಿರುವವರು ಇದೇ ಸಿದ್ದರಾಮಯ್ಯ ಎಂದು ಟೀಕಿಸಿದ ಜೋಶಿಯವರು, ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮೊದಲು ಮಲ್ಲಿಕಾರ್ಜುನ ಖರ್ಗೆ ಅವರನ್ನ ರಾಜ್ಯ ರಾಜಕಾರಣದಿಂದ ದೂರ ಸರಿಸಿದರು. ನಂತರ ಜಿ. ಪರಮೇಶ್ವರ್ ಅವರನ್ನ ಹತ್ತಿಕ್ಕಿದರು. ಇದೀಗ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಹೋಗಿ ಕೆ.ಎಚ್. ಮುನಿಯಪ್ಪ ಅವರನ್ನ ಮುಗಿಸಲು ಹೊರಟಿದ್ದಾರೆ. ಮೂವರು ದಲಿತ ನಾಯಕರನ್ನ ಹತ್ತಿಕ್ಕಿರುವ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡ್ತಿರೋದು ವಿಪರ್ಯಾಸ ಅಂತಾ ಪ್ರಲ್ಹಾದ್ ಜೋಶಿ ಟೀಕಿಸಿದರು.
58 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಏನೂ ಮಾಡಲಿಲ್ಲ. ರೈತರ ಸಾಲ ಮನ್ನಾ ಮಾಡ್ತೀವಿ, ರೈತರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಮಾಡ್ತಿವಿ ಅಂತಾ ಸುಳ್ಳು ಹೇಳಿದ್ರು. ಆದ್ರೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆ 6 ಸಾವಿರ ಮೋದಿ ಅವರು ಕೊಟ್ರು. ಅಲ್ಲದೇ ರೈತ ನಾಯಕ ಬಿಎಸ್ ವೈ 4 ಸಾವಿರ ಹೆಚ್ಚಿಗೆ ಸೇರಿಸಿ ಒಟ್ಟು 10 ಸಾವಿರ ರೈತರ ಖಾತೆಗೆ ಜಮಾ ಮಾಡಿಸಿದ್ದಾರೆ.
ಸವದತ್ತಿಯಿಂದ ರಾಮದುರ್ಗಕ್ಕೆ ಬಂದು ತಲುಪಿದ ಸನ್ಮಾನ್ಯ ಶ್ರೀ @BSYBJP ಅವರ ನೇತೃತ್ವದ ಭವ್ಯ "ವಿಜಯ ಸಂಕಲ್ಪ ಯಾತ್ರೆ." ನಮ್ಮ ಭರವಸೆ ರಥಕ್ಕೆ ಸಿಕ್ಕ ಸ್ವಾಗತ ಹಾಗೂ ಪ್ರೀತಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ#VijayaSankalpaYatre #BJPYeBharavase (1/5) pic.twitter.com/SWUa0xP5ue
— Pralhad Joshi (@JoshiPralhad) March 4, 2023
ಈಗ ಕಾಂಗ್ರೆಸ್ ನವರು ಫ್ರೀ ಕರೆಂಟ್ ಕೊಡ್ತೇವೆ ಅಂತಾ ಬುರುಡೆ ಬಿಡ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಕರೆಂಟೇ ಕೊಡ್ತಿರಲಿಲ್ಲ. ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ 24 ಗಂಟೆ ಕರೆಂಟ್ ಕೊಡ್ತಿದ್ದೇವೆ. ಫ್ರೀ ಕರೆಂಟ್ ಕೊಡಲು ಸಾಧ್ಯವಿಲ್ಲ. ಬಿಜೆಪಿ ಕ್ವಾಲಿಟಿ ಕರೆಂಟ್ ಕೊಡುವ ನೀತಿ ಅನುಸರಿಸುತ್ತಿದೆ. ಜನರು ಕಾಂಗ್ರೆಸ್ ಸುಳ್ಳುಗಳಿಗೆ ಮರುಳಾಗಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮನವಿ ಮಾಡಿದರು.
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೇವಲ ರಾಜಕೀಯ ಮಾಡಿತು. ಗೋವಾಗೆ ಹೋಗಿ ಹನಿ ನೀರು ಕೊಡಲ್ಲ ಎಂದವರು ಸೋನಿಯಾ ಗಾಂಧಿಯವರು. ಆದರೆ, ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ದಿಟ್ಟಹೆಜ್ಜೆಯಿಟ್ಟಿದೆ. ಮಹದಾಯಿ ನೀರು ಬೈಲಹೊಂಗಲ, ಸವದತ್ತಿಗೆ ತರುತ್ತಿದ್ದರೆ ಅದು ಬಿಜೆಪಿ ಅನ್ನೋದನ್ನ ಜನ ಮರೆಯಬಾರದು ಎಂದು ಇದೇ ವೇಳೆ ಪ್ರಲ್ಹಾದ ಜೋಶಿಯವರು ಹೇಳಿದರು.
Published On - 9:23 pm, Sat, 4 March 23