ಬೆಳಗಾವಿ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಪೊಲೀಸ್ ತರಬೇತಿ ಶಾಲೆ ಬಳಿಯ ಸೇತುವೆಯನ್ನು ವೀಕ್ಷಣೆ ಮಾಡಿ, ದುರ್ಗಾನಗರದಲ್ಲಿ ನೆರೆಯಿಂದ ಮುಳಗಡೆಯಾಗಿದ್ದ ಮನೆಗಳನ್ನು ವೀಕ್ಷಿಸಿದರು. ಈ ನಡುವೆ ನೆರೆ ಸಂತ್ರಸ್ತರ ಅಳಲನ್ನು ಆಲಿಸಿದರು. ಅಲ್ಲದೇ ಮಲಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಗೂ ಭೇಟಿ ನೀಡಿದರು.
ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸಿದ್ದರಾಮಯ್ಯಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದರು.
ಭೇಟಿ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, 2019ರಲ್ಲಿ ಪ್ರವಾಹ ಬಂದಾಗ ಪರಿಹಾರ ಕೊಡಲಿಲ್ಲ. ಆಗ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲೇ ಇಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್ನಿಂದ ತಂಡಗಳನ್ನು ರಚನೆ ಮಾಡಲಾಗಿದೆ. ಹೀಗಾಗಿ ನಾನು ಕೂಡ ಬೆಳಗಾವಿ ಜಿಲ್ಲೆಗೆ ಬಂದಿದ್ದೇನೆ. ಆಗಸ್ಟ್ 1ರಂದು ಕಾರವಾರಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ನ ಟೀಂಗಳು ಜಿಲ್ಲೆಗೆ ಹೋಗಿ ಪರಿಶೀಲಿಸುತ್ತೆ. ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡುತ್ತಾರೆ. ಎಷ್ಟು ಪರಿಹಾರ ನೀಡಬೇಕೆಂದು ವರದಿಯನ್ನ ನೀಡುತ್ತೇವೆ. ಅಧಿವೇಶನ ಕರೆದು ಪ್ರವಾಹ ಬಗ್ಗೆ ಚರ್ಚೆಗೆ ಆಗ್ರಹಿಸುತ್ತೇವೆ. ಅನಗತ್ಯ ಖರ್ಚು ಕಡಿಮೆ ಮಾಡಿ ಪರಿಹಾರ ನೀಡಬೇಕು. ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಅಂತ ಅಭಿಪ್ರಾಯಪಟ್ಟರು.
ಇದನ್ನೂ ಓದಿ
Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?
ಕಾಲಿಲ್ಲದವ ಮಂಡಿಯ ಮೇಲೆ ಕುಳಿತು ಐ ಲವ್ ಯೂ ಹೇಳಿದ! ಪ್ರೇಯಸಿಯ ಖುಷಿಗೆ ಮಿತಿಯೇ ಇಲ್ಲ