ಟಿವಿ9 ವರದಿ ಬೆನ್ನಲ್ಲೇ 22 ವರ್ಷಗಳ ಕಾಲ ಆಗದ ಕೆಲಸ ಒಂದೇ ಗಂಟೆಯಲ್ಲಿ: ನಿಂಗಾಪುರ ಫುಲ್ ಖುಷ್

ಕಿತ್ತೂರಿನ ನಿಂಗಾಪುರ ಗ್ರಾಮದ ಜನರು ಸುಮಾರು 22 ವರ್ಷಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸುತ್ತಿದ್ದರು. ಮಕ್ಕಳು ಕಲಿಕೆಗಾಗಿ ಜೀವವನ್ನೇ ಪಣಕ್ಕಿಟ್ಟು ಸಂಚರಿಸುತ್ತಿದ್ದರು. ಸ್ಥಳೀಯ ಶಾಸಕರಿಗೆ ಗೊತ್ತಿರದ ವಿಚಾರ ಟಿವಿ9 ಒಂದು ವರದಿ ಕಣ್ಣು ತೆರೆಯುವಂತೆ ಮಾಡಿದೆ. 22 ವರ್ಷಗಳ ಕಾಲ ಆಗದ ಕೆಲಸ ಟಿವಿ9 ವರದಿಯ ಒಂದು ಗಂಟೆಯಲ್ಲಿ ಆಗಿದೆ. ಅಷ್ಟಕ್ಕೂ ಅಲ್ಲಿ ಇದ್ದಂತ ಸಮಸ್ಯೆ ಎಂತಹದ್ದು? ಟಿವಿ9 ವರದಿ ಬೆನ್ನಲ್ಲೇ ಶಾಸಕರು, ಆಡಳಿತ ವರ್ಗ ಗ್ರಾಮಕ್ಕೆ ಬಂದು ಮಾಡಿದ್ದೇನೂ ಅಂತೀರಾ? ಈ ಸ್ಟೋರಿ ಓದಿ.

ಟಿವಿ9 ವರದಿ ಬೆನ್ನಲ್ಲೇ 22 ವರ್ಷಗಳ ಕಾಲ ಆಗದ ಕೆಲಸ ಒಂದೇ ಗಂಟೆಯಲ್ಲಿ: ನಿಂಗಾಪುರ ಫುಲ್ ಖುಷ್
ನಿಂಗಾಪುರ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 06, 2024 | 10:43 PM

ಬೆಳಗಾವಿ, ಆ.06: ಬೆಳಗಾವಿ ಜಿಲ್ಲೆಯ ಕಿತ್ತೂರು(Kittur) ತಾಲೂಕಿನ ನಿಂಗಾಪುರ ಗ್ರಾಮದ ನಿವಾಸಿಗಳು ರಬ್ಬರ್ ಟ್ಯೂಬ್​ಗಳ ಮೇಲೆ ವಿದ್ಯಾರ್ಥಿಗಳು, ಮಹಿಳೆಯರು ಸಂಚಾರ ಮಾಡುತ್ತಿದ್ದರು. ಕಳೆದ 22 ವರ್ಷಗಳಿಂದ ಇಲ್ಲಿರುವ ಸುಮಾರು ಮೂವತ್ತಕ್ಕೂ ಅಧಿಕ ಕುಟುಂಬಗಳು ಪರಿತಪ್ಪಿಸುತ್ತಿದ್ದವು. ಅದರಲ್ಲೂ ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ದಿನ ಬೆಳಗಾದರೆ ಇದೇ ಟ್ಯೂಬ್​ಗಳ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾರ ಹಿಡಿದುಕೊಂಡು ಓಡಾಡುತ್ತಿದ್ದರು. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟಿದ್ದರೂ ಅನಿವಾರ್ಯವಾಗಿ ಇವರೆಲ್ಲರೂ ಕೆರೆಯ ಹಿನ್ನೀರು ದಾಟಲು ಇದೇ ರಬ್ಬರ್ ಟ್ಯೂಬ್​ಗಳ ಮೇಲೆಯೇ ಓಡಾಟ ನಡೆಸುತ್ತಿದ್ದರು. ಈ ಕುರಿತು ಟಿವಿ9 ತಂಡ ಸ್ಥಳಕ್ಕೆ ಭೇಟಿ ನೀಡಿ ಗ್ರೌಂಡ್ ರಿಪೋರ್ಟ್ ಮೂಲಕ ವಿಸ್ತೃತ ವರದಿಯನ್ನ ಬಿತ್ತಿರಿಸಿತ್ತು. ಇದನ್ನ ಗಮನಿಸಿದ ಸ್ಥಳೀಯ ಶಾಸಕ ಬಾಬಾಸಾಹೇಬ್ ಪಾಟೀಲ್ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ.

ತುರ್ತಾಗಿ ಬೋಟ್ ವ್ಯವಸ್ಥೆ ಜೊತೆಗೆ ಸೇತುವೆ ನಿರ್ಮಾಣದ ಭರವಸೆ

ಟಿವಿ9, ಬೆಳಗ್ಗೆ 9 ಗಂಟೆಗೆ ಸುದ್ದಿ ಬಿತ್ತರ ಮಾಡಿದ್ದು, ಹತ್ತೂವರೆಗೆ ಶಾಸಕರು ಬಂದಿದ್ದಾರೆ. ಇತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸ್ಥಳೀಯ ತಹಶೀಲ್ದಾರ್​ ರವೀಂದ್ರ ಹಾದಿಮನಿಗೆ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸುತ್ತಾರೆ. ಇದೇ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿ ತಹಶೀಲ್ದಾರ್​ ಜೊತೆಗೆ ಸ್ಥಳಕ್ಕೆ ಬಂದ ಶಾಸಕ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಜೊತೆಗೆ ತುರ್ತಾಗಿ ಬೋಟ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಡಿಸಿ ಅವರ ಜೊತೆಗೆ ಮಾತನಾಡಿದರು. ಇತ್ತ ಎರಡು ಕೋಟಿ ವೆಚ್ಚದಲ್ಲಿ ಸೇತುವೆ ಎಸ್ಟಿಮೆಟ್ ಮಾಡಿ ಸರ್ಕಾರಕ್ಕೆ ಸಲ್ಲಿಸಿ ಸೇತುವೆ ನಿರ್ಮಾಣದ ಭರವಸೆಯನ್ನ ಶಾಸಕರು ನೀಡಿದರು.

ಇದನ್ನೂ ಓದಿ:ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ, ಜೀವ ಭಯದಲ್ಲೇ ಶಾಲೆಗೆ ಹೋಗುವ ಅನಿವಾರ್ಯತೆ

ಟಿವಿ9ಗೆ ಧನ್ಯವಾದ ತಿಳಿಸಿದ ಗ್ರಾಮಸ್ಥರು

ಇನ್ನು ಟಿವಿ9 ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಇಂದೇ ಬೋಟ್ ವ್ಯವಸ್ಥೆ ಮಾಡಲು ತಹಶೀಲ್ದಾರ್ ಅವರಿಗೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು ಅದರಂತೆ ಎಸ್ ಡಿ ಆರ್ ಎಫ್ ಜೊತೆಗೆ ಚರ್ಚೆ ಮಾಡಿದ ಡಿಸಿ ಒಂದು ಫೈಬರ್ ಬೋಟ್ ನೀಡುವಂತೆ ಕೇಳಿಕೊಂಡರು. ಅದರಂತೆ ಖುದ್ದು ಒಂದು ಎಸ್​ಡಿಆರ್​ಎಫ್ ತಂಡ ಕಿತ್ತೂರು ತಹಶೀಲ್ದಾರ್​ ಕಚೇರಿಗೆ ಆಗಮಿಸಿ, ಅಲ್ಲಿಂದ ನಿಂಗಾಪುರ ಗ್ರಾಮಕ್ಕೆ ತೆರಳಿ ಬೋಟ್ ಓಡಾಟ ನಡೆಸಿ ಯಾವ ರೀತಿಯಾಗಿ ಬಳಕೆ ಮಾಡಬೇಕು ಅನ್ನೋದನ್ನ ಕೂಡ ತಿಳಿಸಿದರು. ಟಿವಿ9 ವರದಿ ಮಾಡಿದ ಕೇವಲ ಎಂಟು ಗಂಟೆಗೆ ಬೋಟ್ ಕೂಡ ಬಂದಿದ್ದು, ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಟಿವಿ9 ವರದಿಗೆ ಇಡೀ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದ ಜನರು, ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾವ ಅಧಿಕಾರಿಗಳು ತಲೆ ಕೆಡಸಿಕೊಳ್ಳದ ವಿಚಾರವನ್ನ ಒಂದು ವರದಿ ಬದಲಾವಣೆ ಮಾಡಿ, ಇದೀಗ ಒಂದೇ ದಿನದಲ್ಲಿ ಬೋಟ್ ವ್ಯವಸ್ಥೆ ಆಗಿದ್ದು ಖುಷಿಯ ವಿಚಾರ. ತುರ್ತಾಗಿ ಸ್ಪಂಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಶಾಸಕ ಬಾಬಾಸಾಹೇಬ್ ಪಾಟೀಲ್​ಗೂ ಜನ ಧನ್ಯವಾದ ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Tue, 6 August 24

ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್