ಬೆಳಗಾವಿ: ಅಪರಿಚಿತ ಮೃತದೇಹವೊಂದು ಘಟಪ್ರಭಾ ನದಿಯಲ್ಲಿ ತೇಲಿ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಮೆಳವಂಕಿ ಗ್ರಾಮದ ನದಿ ತೀರದ ಗದ್ದೆಯಲ್ಲಿ ಅಪರಿಚಿತನ ಶವ (Dead Body) ಪತ್ತೆಯಾಗಿದೆ. ಘಟಪ್ರಭಾ ನದಿ (Ghataprabha River) ನೀರು ಆವರಿಸಿ ಕಬ್ಬಿನ ಗದ್ದೆ ಜಲಾವೃತವಾಗಿತ್ತು. ನದಿ ನೀರಿನ ಮಟ್ಟ ಕಡಿಮೆಯಾದ ಮೇಲೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರತೇ ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತದೇಹ ಪ್ರವಾಹದಲ್ಲಿ ತೇಲಿ ಬಂತಾ ಅಥವಾ ಯಾರಾದರೂ ಕೊಲೆ ಮಾಡಿ ಬೀಸಾಡಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗದಗದಲ್ಲಿ ಬೆಳೆ ಹಾನಿ ಮಾಹಿತಿ
ಗದಗ: ಮಲಪ್ರಭಾ, ತುಂಗಭದ್ರಾ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ರೈತರ ಬದುಕು ಕೊಚ್ಚಿಹೋಗಿದೆ. ಕೃಷಿ ಇಲಾಖೆ ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 20,278 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ನರಗುಂದ ತಾಲೂಕಿನಲ್ಲಿ 14,500 ಹೆಕ್ಟೇರ್ ಪ್ರದೇಶದಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದೆ. ರೋಣ ತಾಲೂಕಿನಲ್ಲಿ 6,100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂಡರಗಿ ತಾಲೂಕಿನಲ್ಲಿ ಕಬ್ಬು, ಭತ್ತ ಸೇರಿ 147 ಹೆಕ್ಟೇರ್ ಬೆಳೆ ಹಾಳಾಗಿದೆ.
13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ಮೆಕ್ಕೆಜೋಳ 7 ಸಾವಿರ ಹೆಕ್ಟೇರ್, ಶೇಂಗಾ, ಹತ್ತಿ ಸೇರಿದಂತೆ ಹಲವು ಬೆಳೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 21 ಕೋಟಿಯಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ
ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ; ಸರಗಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಕುದೂರು ಪೊಲೀಸರು
ಮೀನುಗಾರನಹಳ್ಳಿಯಲ್ಲಿ ಮನೆ ಮುಂದೆ ನೀರು ಬಿಟ್ಟರೆಂಬ ಕಾರಣಕ್ಕೆ ಅಜ್ಜಿ ಮೇಲೆ ಹಲ್ಲೆ
(Unknown person dead body found in Ghataprabha River at belagavi)
Published On - 11:16 am, Sat, 31 July 21