AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀನುಗಾರನಹಳ್ಳಿಯಲ್ಲಿ ಮನೆ ಮುಂದೆ ನೀರು ಬಿಟ್ಟರೆಂಬ ಕಾರಣಕ್ಕೆ ಅಜ್ಜಿ ಮೇಲೆ ಹಲ್ಲೆ

ಬಸವನಗೌಡ, ಕಲ್ಲಪ್ಪ, ಮಲ್ಲೇಶ್, ಗಿರಿಜಮ್ಮ, ಶಿವಮ್ಮ ಎಂಬುವವರು ಅಜ್ಜಿಯ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಗಳ ಬಿಡಿಸಲು ಹೋದ ನಾಗರಾಜ್ ಎಂಬಾತನಿಗೆ ಗಾಯಗಳಾಗಿವೆ.

ಮೀನುಗಾರನಹಳ್ಳಿಯಲ್ಲಿ ಮನೆ ಮುಂದೆ ನೀರು ಬಿಟ್ಟರೆಂಬ ಕಾರಣಕ್ಕೆ ಅಜ್ಜಿ ಮೇಲೆ ಹಲ್ಲೆ
ಮೀನುಗಾರನಹಳ್ಳಿಯಲ್ಲಿ ಮನೆ ಮುಂದೆ ನೀರು ಬಿಟ್ಟರೆಂಬ ಕಾರಣಕ್ಕೆ ಅಜ್ಜಿ ಮೇಲೆ ಹಲ್ಲೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 31, 2021 | 10:51 AM

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಸಿನಿಮೀಯ ಮಾದರಿಯಲ್ಲಿ ವೃದ್ದೆಯ ಮೇಲೆ ಪಕ್ಕದ ಮನೆಯವರು ದೊಣ್ಣೆಯಿಂದ  ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮನೆ ಮುಂದೆ ನೀರು ಬಿಟ್ಟರೆಂಬ ಕಾರಣಕ್ಕೆ ಅಜ್ಜಿಯ ಮೇಲೆ ಹಲ್ಲೆ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮೀನುಗಾರನಹಳ್ಳಿಯ ವೃದ್ಧೆ ಹಾಲಮ್ಮ(70) ಹಲ್ಲೆಗೊಳಗಾದವರು. 

ಬಸವನಗೌಡ, ಕಲ್ಲಪ್ಪ, ಮಲ್ಲೇಶ್, ಗಿರಿಜಮ್ಮ, ಶಿವಮ್ಮ ಎಂಬುವವರು ಅಜ್ಜಿಯ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಗಳ ಬಿಡಿಸಲು ಹೋದ ನಾಗರಾಜ್ ಎಂಬಾತನಿಗೆ ಗಾಯಗಳಾಗಿವೆ. ವೃದ್ಧೆ ಹಾಲಮ್ಮ ತಲೆ ಹಾಗೂ ಕಾಲಿಗೆ  ಗಾಯಗಳಾಗಿದ್ದು, ಜಗಳೂರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಲ್ಲಿನ ಕ್ವಾರೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಪೋಟಕಗಳ ವಶ

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಬಳಿ ಇರುವ ಕಲ್ಲಿನ ಕ್ವಾರೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಪೊಲೀಸರು ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ. ಎರಡು ಬುಲೇರೋ ವಾಹನಗಳಲ್ಲಿ ಸಾಗಿಸುತ್ತಿದ್ದ 2,970 ಜಿಲೆಟಿನ್ ಜೆಲ್ ಗಳು, 790 ಎಲೆಕ್ಟ್ರಾನಿಕ್ ಡಿಟೋನೇಟರ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಪೂರ್ವ ವಲಯ ಐಜಿ ಸ್ಕ್ವಾಡ್ ದಾಳಿ ನಡೆಸಿತ್ತು.

ಬಾಗಲಕೋಟೆಯಿಂದ ದಾವಣಗೆರೆಗೆ ಅಕ್ರಮವಾಗಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಪಾರ ಪ್ರಮಾಣದ ಸ್ಟೋಟಕ ಸಾಗಾಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಐಜಿ ಸ್ಕ್ವಾಡ್ ನ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಇಬ್ಬರು ಚಾಲಕರು, ಸ್ಪೋಟಕಗಳನ್ನು ಕಳುಹಿಸಿಕೊಟ್ಟಿದ್ದ ಮಾಲೀಕರ‌ನ್ನು ಪೊಲೀಸರು ವಶಕ್ಕೆ ಪಡೆದರು. ಅಕ್ರಮ ಸ್ಪೋಟಕ ಸಾಗಿಸುತ್ತಿದ್ದ ಎರಡು ವಾಹನಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ವಿಚಾರವಾಗಿ ನಡು ರಸ್ತೆಯಲ್ಲೇ ಸ್ನೇಹಿತರ ನಡುವೆ ಮಾರಾಮಾರಿ; 8 ಜನರ ಗುಂಪಿಂದ ಯುವಕನ ಮೇಲೆ ಹಲ್ಲೆ

(elderly woman beaten up in jagalur in davanagere taluk)