ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಅರ್ಜಿ ತಿರಸ್ಕಾರ ಮಾಡಿದ್ದೇವೆ -ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ವರ್ಷ ನಿರ್ಮಾಣ ಹಂತದ ಕಟ್ಟಡದಲ್ಲಿ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಮೂರು ಕುಟುಂಬಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಹಾರದ ಚೆಕ್ ಹಸ್ತಾಂತರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ತಿಳಿಸಿದರು.

ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಅರ್ಜಿ ತಿರಸ್ಕಾರ ಮಾಡಿದ್ದೇವೆ -ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Edited By:

Updated on: Aug 27, 2024 | 1:07 PM

ಬೆಳಗಾವಿ, ಆಗಸ್ಟ್​.27: ಜಿಎಸ್‌ಟಿ (GST), ಆದಾಯ ತೆರಿಗೆ (Income Tax) ತುಂಬುವವರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ಬೆಳಗಾವಿಯಲ್ಲಿ ಟಿವಿ9ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ. ಮೊದಲಿನಿಂದಲೂ ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ. ಆದರೆ ಜಿಎಸ್‌ಟಿ ಇದ್ದವರೂ ನಮ್ಮ ಪೋರ್ಟಲ್​ಗೆ ಅರ್ಜಿ ಹಾಕಿದ್ದರು. ಅವುಗಳನ್ನ ನಾವು ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದರು.

ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣ ಜಮೆ

ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್‌ಟಿ ಇರುವ ಕಾರಣಕ್ಕೆ ತತಕ್ಷಣ ಅರ್ಜಿ ತಿರಸ್ಕಾರ ಮಾಡಿದ್ದೇವೆ. 1ಕೋಟಿ 23ಲಕ್ಷ ಗೃಹಲಕ್ಷ್ಮಿ ಹಣ ಅಂತಾ ಹೇಳಿದ್ದು ಕವರ್ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಶ್ರೀಮಂತರು, ಜಿಎಸ್‌ಟಿ ಇದ್ದವರು ಸೇರಿ ಒಟ್ಟು 1ಕೋಟಿ 58ಲಕ್ಷ ಕುಟುಂಬಗಳಿವೆ. ಇಂದಿಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದು. ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಜೂನ್ ತಿಂಗಳದ್ದು ಕೂಡ ಎಂಬತ್ತು ಸಾವಿರ ಜನರಿಗೆ ತಲುಪಿಲ್ಲ. ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಷ್ಟ್ ತಿಂಗಳದ್ದು ಕೂಡ ಸಿಎಂ ಜೊತೆಗೆ ನಿನ್ನೆ ಚರ್ಚೆ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣ ಕೂಡ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗೃಹ ಲಕ್ಷ್ಮಿ ಹಣದಿಂದ ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಮುಗಿಬಿದ್ದ ಮಹಿಳೆಯರು

ವಿದ್ಯುತ್ ಶಾಕ್​ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಹಣ ನೀಡಿದ ಸಚಿವೆ

ಇನ್ನು ಮತ್ತೊಂದೆಡೆ ವಿದ್ಯುತ್ ಶಾಕ್​ನಿಂದ ಮೃತಪಟ್ಟ ಮೂರು ಜನರ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಹಾರದ ಚೆಕ್ ಹಸ್ತಾಂತರ ಮಾಡಿದರು. ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಆರು ಲಕ್ಷದ ಚೆಕ್ ನೀಡಿ ಸಾಂತ್ವನ ಹೇಳಿದರು. ಕಳೆದ ವರ್ಷ ನಿರ್ಮಾಣ ಹಂತದ ಕಟ್ಟಡದಲ್ಲಿ ವಿದ್ಯುತ್ ಶಾಕ್ ನಿಂದ ಮೂರು ಜನ ಸಾವನ್ನಪ್ಪಿದ್ದರು. ವೃದ್ಧರಾದ ಈರಪ್ಪಾ ರಾಠೋಡ, ಶಾಂತವ್ವಾ ರಾಠೋಡ ಮೊಮ್ಮಗಳಾದ ಅನ್ನಪೂರ್ಣ ರಾಠೋಡ ಮೃತಪಟ್ಟಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸಚಿವೆ ಹೆಬ್ಬಾಳ್ಕರ್ ಪರಿಹಾರದ ಭರವಸೆ ನೀಡಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ