ಹಾವೇರಿ: ಕುರಿದೊಡ್ಡಿಯಲ್ಲಿ ಕಟ್ಟಿದ್ದ 15 ಕುರಿಗಳ ಕಳ್ಳತನ
ಇತ್ತ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬಡಸಂಗಾಪುರ ಗ್ರಾಮದಲ್ಲಿ ರಾತ್ರೋರಾತ್ರಿ ಕುರಿಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಕುರಿದೊಡ್ಡಿಯಲ್ಲಿ ಕಟ್ಟಿದ್ದ ಹದಿನೈದು ಕುರಿಗಳ ಕಳ್ಳತನ ಮಾಡಲಾಗಿದೆ. ಒಂದೂವರೆ ಲಕ್ಷ ರುಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡು ಕುರಿಗಾಹಿಗಳು ಕಂಗಾಲಾಗಿದ್ದಾರೆ. ಬೆರಳೆಣಿಕೆಯಷ್ಟು ಕುರಿಗಳನ್ನು ಬಿಟ್ಟು ಹದಿನೈದು ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಮಂಜು ಕೋಳೂರ ಎಂಬುವರಿಗೆ ಸೇರಿದ ಕುರಿಗಳ ಕಳ್ಳತನ ಮಾಡಲಾಗಿದೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ: ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡ್ತಿದ್ದ ಗ್ಯಾಂಗ್ ಬಂಧನ
ಹೆದ್ದಾರಿ ಬಳಿ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡ್ತಿದ್ದ ಗ್ಯಾಂಗ್ ಬಂಧಿಸಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಸ್ವೀಟ್ ಮರ್ಟ್ ಕಂಪನಿಯ ಕಾರನ್ನು ತಡೆದು ನಾಲ್ವರು ದರೋಡೆ ಮಾಡಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ ಅವರ ಬಳಿ ಇದ್ದ 1.22 ಲಕ್ಷ ಹಣವನ್ನ ದೊಚ್ಚಿದ್ದರು. ಇದೀಗ ದರೋಡೆಕೋರರಾದ ಕುಂದಗೋಳ ತಾಲೂಕಿನ ಮಂಜುನಾಥ್ ಡೊಳ್ಳಿನ, ಚಾಕಲಬ್ಬಿಯ ಯಲ್ಲಪ್ಪ ಗೋಗಿ, ಲಕ್ಷ್ಮೇಶ್ವರದ ಮಲ್ಲೇಶ್ ಹೊನಕೆರಪ್ಪ, ನವಲಗುಂದದ ಈರಪ್ಪ ಬಾಳೋಜಿ ಬಂಧಿಸಲಾಗಿದೆ.ಘಟನೆ ನಡೆದ ಎರಡೇ ದಿನದಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಯಚೂರು: ಕುಖ್ಯಾತ ಬೈಕ್ ಕಳ್ಳನ ಬಂಧನ
ಕುಖ್ಯಾತ ಬೈಕ್ ಕಳ್ಳನ ಬಂಧನ ಮಾಡಿದ ಘಟನೆ ರಾಯಚೂರಿನ ಲಿಂಗಸೂರು ಎಂಬಲ್ಲಿ ನಡೆದಿದೆ. ಲಿಂಗಸುಗೂರು ಪೊಲೀಸರಿಂದ ಆರೋಪಿ ಬಂಧನ ಮಾಡಲಾಗಿದೆ. ಅಂಕುಶದೊಡ್ಡಿಯ ಮೌನೇಶ್ (21) ಬಂಧಿತ ಕಳ್ಳ. ಬಂಧಿತನಿಂದ ಲಕ್ಷಾಂತರ ಮೌಲ್ಯದ 4 ಬೈಕ್ ಜಪ್ತಿ ಮಾಡಲಾಗಿದೆ. ಬಂಧಿತ ಮೌನೇಶ್, ಲಿಂಗಸುಗೂರು ಠಾಣಾ ವ್ಯಾಪ್ತಿಯ ವ್ಯಕ್ತಿ ಆಗಿದ್ದು ಇದೇ ಮಾರ್ಚ್ 10 ರಂದು ನಡೆದಿದ್ದ ಕೇಸ್ ತನಿಖೆ ವೇಳೆ ಬಂಧನ ಮಾಡಲಾಗಿದೆ. ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಳ್ಳಾರಿ: ವಿಠ್ಠಲಾಪುರದ ಬಳಿ ಗುಡ್ಡದಲ್ಲಿ ಅಪರಿಚಿತ ಶವ ಪತ್ತೆ
ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಬಳಿ ಗುಡ್ಡದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮೃತ ವ್ಯಕ್ತಿಯ ಶವ ಗುರುತು ಪತ್ತೆ ಹಚ್ಚಲಾಗಿದೆ. ಶರ್ಟ್ ಆಧಾರದಲ್ಲಿ ಕಂಪ್ಲಿ ಠಾಣೆ ಪೊಲೀಸರು ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದಾರೆ. ಜೇರ್ವಗಿ ತಾಲೂಕಿನ ಬಳೂಂಡಗಿಯ ಅಮರೇಶ್ ಎಂದು ಗುರುತು ಪತ್ತೆ ಮಾಡಲಾಗಿದೆ. ಅಮರೇಶ್ ಕೊಲೆ ಆರೋಪಿ ಕಿರಣ್ ಕುಮಾರ್ ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರು: ವ್ಹೀಲಿಂಗ್ ಮಾಡಿ ಯುವಕರ ಪುಂಡಾಟ
ನಗರದ ಕೆ.ಆರ್. ಮಾರ್ಕೆಟ್ ಫ್ಲೈಓವರ್ ಮೇಲೆ ಯುವಕರ ಪುಂಡಾಟ ಕಂಡುಬಂದಿದೆ. ಕೆಎ 05 ಕೆವೈ 3481 ನೋಂದಣಿಯ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡಿ ಯುವಕರು ಪುಂಡಾಟ ಮೆರೆದಿದ್ದಾರೆ. ಮಾರ್ಕೆಟ್ ಫ್ಲೈಓವರ್‌ನಿಂದ ಸ್ಯಾಟಲೈಟ್ ಬಸ್ ನಿಲ್ದಾಣದವರೆಗೆ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ
ಇದನ್ನೂ ಓದಿ: Crime News: ತಮಿಳುನಾಡಿನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಣಿವೆಗೆ ಉರುಳಿದ ಟ್ರಕ್; 7 ಜನ ಸಾವು, 14 ಮಂದಿಗೆ ಗಾಯ