ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ

ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ
ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ

ಜಗತ್ತೇ ಎದುರಾಗಲಿ, ಪ್ರೀತಿಸಿದವನು ಮಾತ್ರ ತನ್ನ ಪಾಲಿಗಿರಲಿ ಎಂದು ಇಷ್ಟಪಟ್ಟವನ ಜೊತೆಗೆ ಜೀವನ ಕಳಿತೀನಿ ಎಂದುಕೊಂಡಿದ್ದ ಆ ಯುವತಿ ಸಾವಿನ ಮನೆ ಸೇರಿದ್ದಾಳೆ. ಅದು ಕೂಡ ನಂಬಿ ಬಂದವನಿಂದ್ಲೇ ಬಲಿಯಾಗಿದ್ದಾಳೆ.

TV9kannada Web Team

| Edited By: Ayesha Banu

Apr 02, 2022 | 4:08 PM

ಹಾಸನ: ಪೋಷಕರ ವಿರೋಧದ ನಡುವೆಯೂ ಕಾಲೇಜು ಬಿಟ್ಟು ಕೂಲಿ ಕೆಲಸ ಮಾಡುವವನ ಈಕೆ ಕೈ ಹಿಡಿದಿದ್ಲು. ಪ್ರೀತಿಯೇ ಸರ್ವಸ್ವ, ಪ್ರೀತಿಸಿದವನೇ ಜೀವನ. ಅವನಿಲ್ಲದೆ ನಾನಿಲ್ಲ ಅಂತಾ ಬಾಳುತ್ತಿದ್ದ ಆಕೆಯನ್ನು ಮದುವೆ ಆಗಿ ಒಂದು ವರ್ಷಕ್ಕೆ ನರಕದರ್ಶನ ತೋರಿಸಿ, ಪ್ರೀತಿಸಿದವಳನ್ನ ಬಲಿ ಪಡೆದಿದ್ದಾನೆ. ಸೀಮೆ ಎಣ್ಣೆ ಸುರಿದು ಪ್ರೇಯಸಿಯ ಕೊಲೆಗೆ ಯತ್ನಿಸಿದ್ದು 26 ದಿನಗಳ ನಿರಂತರ ಹೋರಾಟದ ಬಳಿಕ ಮಹಿಳೆ ಪ್ರಾಣ ಬಿಟ್ಟಿದ್ದಾಳೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದ ಸತೀಶ್ ಎಂಬಾತ ಕಳೆದ ಐದು ವರ್ಷಗಳ ಹಿಂದೆ, ಅರಕಲಗೂಡು ತಾಲೂಕಿನ ಭವ್ಯಾ ಎಂಬಾಕೆಯನ್ನ ಪ್ರೀತಿಸಿದ್ದ. ಅದು ಕೂಡ ಫಸ್ಟ್ ಪಿಯುಸಿ ಓದುವಾಗಲೇ ಭವ್ಯಾಳನ್ನ ಈ ಸತೀಶ್ ಮದುವೆ ಆಗಿದ್ದ. ಜೀವನದ ಮೇಲೆ ಸಾಕಷ್ಟು ಕನಸು ಕಂಡಿದ್ದ ಭವ್ಯಾ ದಿನಕಳೆದಂತೆ ನರಕಯಾತನೆ ಅನುಭವಿಸಿದ್ದಾಳೆ. ಹೀಗಿದ್ರೂ, ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ಲು. ಆದ್ರೆ, ಮಾರ್ಚ್ 5ರ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ ಭವ್ಯಾ ಮೇಲೆ ಸತೀಶ್ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆವತ್ತಿನಿಂದ 26 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಭವ್ಯಾ ಈಗ ಸಾವಿನ ಮನೆ ಸೇರಿದ್ದಾಳೆ.

ಗ್ಯಾಸ್ ಲೀಕ್ ಕತೆ ಕಟ್ಟಿದ್ದ ಗಂಡ ಅರೆಸ್ಟ್ ಮದುವೆ ಆದ ಹೊಸದ್ರಲ್ಲಿ ಚೆನ್ನಾಗಿಯೇ ಇದ್ದ ಸತೀಶ್, ಕೆಲವೇ ಕೆಲ ತಿಂಗಳುಗಳ ಬಳಿಕ ಅಸಲಿ ಮುಖ ಕಳಚಿದ್ದ. ಹೆಂಡ್ತಿ ಮೇಲೆ ಅನುಮಾನ ಪಡಲು ಶುರು ಮಾಡಿದ್ದ. ಅಲ್ದೆ, ಪ್ರೀತಿಸಿ ಮದುವೆಯಾದವಳಿಗೆ ಪ್ರತಿದಿನ ಕುಡಿದು ಬಂದು ಕಾಟ ಕೊಡ್ತಿದ್ದ. ಒಂದು ವರ್ಷ ಹೇಗೋ ಸಹಿಸಿಕೊಂಡು ಸಂಸಾರ ಮಾಡಿದ ಭವ್ಯಾ ಒಂದು ಮಗುವಿಗೆ ಜನ್ಮ ನೀಡಿದ್ಲು. ಅದೇ ಮಗುವಿಗಾಗಿ ಗಂಡನ ಮನೆ ಬಿಟ್ಟು ಈಕೆ ಹೋಗಿರಲಿಲ್ಲ. ಆದ್ರೆ, ಸತೀಶ್ ಹೆಂಡ್ತಿ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ ಅಂತಾ ಕತೆ ಕಟ್ಟಿದ್ದಾನೆ. ಆದ್ರೆ, ತನಿಖೆ ನಡೆಸಿದ ಪೊಲೀಸರು ಸತೀಶ್ನನ್ನ ಬಂಧಿಸಿದ್ದಾರೆ.

ಒಟ್ನಲ್ಲಿ ಜಗತ್ತೇ ಎದುರಾಗಲಿ, ಪ್ರೀತಿಸಿದವನು ಮಾತ್ರ ತನ್ನ ಪಾಲಿಗಿರಲಿ ಎಂದು ಇಷ್ಟಪಟ್ಟವನ ಜೊತೆಗೆ ಜೀವನ ಕಳಿತೀನಿ ಎಂದುಕೊಂಡಿದ್ದ ಆ ಯುವತಿ ಸಾವಿನ ಮನೆ ಸೇರಿದ್ದಾಳೆ. ಅದು ಕೂಡ ನಂಬಿ ಬಂದವನಿಂದ್ಲೇ ಬಲಿಯಾಗಿದ್ದಾಳೆ.

ವರದಿ: ಮಂಜುನಾಥ್.ಕೆ.ಬಿ, ಟಿವಿ9 ಹಾಸನ

ಇದನ್ನೂ ಓದಿ: ಮಲೈಕಾ- ಹರ್ನಾಜ್ ಭರ್ಜರಿ ಡಾನ್ಸ್; ಯಾವ ಹಾಡಿಗೆ? ವಿಡಿಯೋ ಇಲ್ಲಿದೆ

ಪತ್ನಿ ಮೇಲೆ ಅನುಮಾನಗೊಂಡ ಪತಿ ಆಕೆ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆಗೆ ಯತ್ನ; ತನಿಖೆ ವೇಳೆ ಬಯಲಾಯ್ತು ಸತ್ಯ

Follow us on

Related Stories

Most Read Stories

Click on your DTH Provider to Add TV9 Kannada