ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ; ಒಡಹುಟ್ಟಿದ ಅಣ್ಣನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ತಮ್ಮ
ಅಣ್ಣ ಅಕ್ಬರ್ ಬೈಕ್ ಮೇಲೆ ಕಬ್ಬೂರದಿಂದ ಚಿಕ್ಕೋಡಿಗೆ ತೆರಳುವಾಗ ಅಜ್ಮದ್ ತನ್ನ ಕಾರಿನಲ್ಲಿ ಹಿಂಬಾಲಿಸಿ ಕಾರಿನಿಂದ ಬೈಕ್‌ಗೆ ಗುದ್ದಿ ಕೆಳಗೆ ಬೀಳಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಬೆಳಗಾವಿ: ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ತಮ್ಮ ತನ್ನ ಒಡಹುಟ್ಟಿದ ಅಣ್ಣನನ್ನು ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ತಮ್ಮ ಅಜ್ಮದ್ ಶೇಖ್ ಅಣ್ಣ ಅಕ್ಬರ್ ಶೇಖ್ನನ್ನು ಕೊಲೆ ಮಾಡಿದ್ದಾನೆ. ಅಕ್ಬರ್ ಬೈಕ್ ಮೇಲೆ ಕಬ್ಬೂರದಿಂದ ಚಿಕ್ಕೋಡಿಗೆ ತೆರಳುವಾಗ ಉಮರಾಣಿ ಗ್ರಾಮದ ಹೊರ ವಲಯದ ಹೆದ್ದಾರಿ ಮೇಲೆ ಅಜ್ಮದ್ ತನ್ನ ಕಾರಿನಲ್ಲಿ ಹಿಂಬಾಲಿಸಿ ಕಾರಿನಿಂದ ಬೈಕ್‌ಗೆ ಗುದ್ದಿ ಕೆಳಗೆ ಬೀಳಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ, ಬೈಕ್ನಲ್ಲಿ ತೆರಳುತ್ತಿದ್ದ ಫುಡ್ ಡೆಲಿವರಿ ಬಾಯ್ಗೆ ಗಾಯ
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ಬಳಿ ಅಪಘಾತ ಸಂಭವಿಸಿದೆ. ಫುಡ್ ಡೆಲಿವರಿ ಬಾಯ್ ಮಂಜುನಾಥ್ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಫುಡ್ ಡೆಲಿವರಿ ಬಾಯ್ ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಮಂಜುನಾಥ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಮನೆ ಕೆಲಸ ಏನಿದ್ರೂ ಮನೆಯವ್ರಿಗೆ ಅಂದ್ರೆ ಪತ್ನಿಗೆ ಸೀಮಿತ ಅನ್ನೋ ಪತಿಯಾ ನೀವು? ಹಾಗಾದರೆ ಇದನ್ನೊಮ್ಮೆ ಓದಿಕೊಳ್ಳಿ!
ತೊಗರಿ, ಹತ್ತಿ ಬೆಳೆ ನಡುವೆ ಬೆಳೆದಿದ್ದ 9 ಕೆಜಿ ಗಾಂಜಾ ಜಪ್ತಿ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಯಾತನೂರು ಬಳಿ ತೊಗರಿ, ಹತ್ತಿ ಬೆಳೆ ನಡುವೆ ಬೆಳೆದಿದ್ದ 9 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಹಾಗೂ ಬೇಲೂರು ಗ್ರಾಮದ ಪೀರಪ್ಪ ಚೌಧರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಗರೇಟ್ ಇಲ್ಲ ಎಂದಿದ್ದಕ್ಕೆ ಜಗಳ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕದಾಳವಾಟ ಗ್ರಾಮದಲ್ಲಿ ಸಿಗರೇಟ್ ಇಲ್ಲ ಎಂದಿದ್ದಕ್ಕೆ ಕೆಲ ಪುಂಡರು ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗ್ರಾಮದ ಲಕ್ಷ್ಮಿ ನರಸಪ್ಪ ಎನ್ನುವರ ಅಂಗಡಿಯಲ್ಲಿ ಪುಂಡರು ಸಿಗರೇಟ್ ಕೇಳಿದ್ದರು. ಈ ವೇಳೆ ಸಿಗರೇಟ್ ಇಲ್ಲ ಖಾಲಿಯಾಗಿದೆ ಎಂದಿದ್ದಕ್ಕೆ ಜಗಳ ಮಾಡಿದ್ದರು. ಬಳಿಕ ರಾತ್ರೋರಾತ್ರಿ ಮನೆಗೆ ನುಗ್ಗಿ ಲಕ್ಷ್ಮಿ ನರಸಪ್ಪ ಹಾಗೂ ಪತ್ನಿ ಮಗನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.
ಮನೆಯ ಬಾಗಿಲು ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಚಿಕ್ಕದಾಳವಾಟ ಗ್ರಾಮದ ಪಕ್ಕದಲ್ಲಿ ಇರುವ ದೊಡ್ಡದಾಳವಾಟ ಗ್ರಾಮದ ಇಬ್ಬರು ಹಾಗೂ ಸಿಂಗನಹಳ್ಳಿ ಗ್ರಾಮದ ನಾಲ್ವರಿಂದ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:22 am, Sun, 4 December 22