ಬಳ್ಳಾರಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ

ಮೃತ ದಂಪತಿ ಹೊಳೆ ಮುತ್ಕೂರು ಗ್ರಾಮದವರು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಮಲ್ಲಿಕಾರ್ಜುನ ಎಂಬುವವರ ಮೃತ ದೇಹ ಪತ್ತೆಯಾಗಿದ್ದು, ನಿರ್ಮಲಮ್ಮನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿತ್ತು.

ಬಳ್ಳಾರಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ
ದಂಪತಿ ಕೊಚ್ಚಿ ಹೋದ ಹಳ್ಳದಲ್ಲಿ ಮೃತ ದೇಹಕ್ಕಾಗಿ ಶೋಧ ಕಾರ್ಯ
TV9kannada Web Team

| Edited By: sandhya thejappa

Jul 07, 2021 | 9:21 AM

ಬಳ್ಳಾರಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಗಂಡ -ಹೆಂಡತಿ ಇಬ್ಬರೂ ಕೊಚ್ಚಿ ಹೋಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಶ್ಚಿಮ ಕಾಲುವೆ ಬಳಿ ಸಂಭವಿಸಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿದ್ದವು. ಆದರೆ ಕೊಚ್ಚಿ ಹೋದ ದಂಪತಿಗೆ ಹಳ್ಳದ ನೀರಿನ ಮಟ್ಟ ಹೆಚ್ಚಿರುವುದು ತಿಳಿದಿರಲಿಲ್ಲ. ರಾತ್ರಿ ಸಂಬಂಧಿಕರೊಬ್ಬರ ಊರಿಗೆ ಹೋಗಿ ಮನೆಗೆ ವಾಪಾಸಾಗುವ ಹೊತ್ತಿಗೆ ಈ ಘಟನೆ ನಡೆದಿದೆ. 50 ವರ್ಷದ ಮಲ್ಲಿಕಾರ್ಜುನ ಮತ್ತು 46 ವರ್ಷದ ನಿರ್ಮಲಮ್ಮ ನೀರಿನಲ್ಲಿ ಕೊಚ್ಚಿ ಹೋದ ಮೃತ ದುರ್ದೈವಿಗಳು.

ಮೃತ ದಂಪತಿ ಹೊಳೆ ಮುತ್ಕೂರು ಗ್ರಾಮದವರು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಮಲ್ಲಿಕಾರ್ಜುನ ಎಂಬುವವರ ಮೃತ ದೇಹ ಪತ್ತೆಯಾಗಿದ್ದು, ನಿರ್ಮಲಮ್ಮನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಇಬ್ಬರ ಶವ ಸಿಕ್ಕಿದೆ. ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಡೆ ಕುಸಿದು ಬಾಲಕ ಸಾವು ಚಿತ್ರದುರ್ಗ: ಮನೆ ಗೋಡೆ ಕುಸಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡಿಯಲ್ಲಿ ನಡೆದಿದೆ. ಮಳೆಯಿಂದ ನೆನೆದಿದ್ದ ಮನೆ ಗೋಡೆ ಮಲಗಿದ್ದ 3 ವರ್ಷದ ಲೋಹಿತ್ ಮೇಲೆ ಬಿದ್ದಿದೆ. ಗೋಡೆ ಬಾಲಕನ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿದ್ದಾನೆ. ಓಂಕಾರಪ್ಪ, ಸಾವಿತ್ರಮ್ಮ ದಂಪತಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಕುಸಿದ ಮನೆ ಗೋಡೆ

ಇದನ್ನೂ ಓದಿ

Cyber Crime ಕೇಂದ್ರ ಸರ್ಕಾರಿ ಯೋಜನೆ ಹೆಸರಲ್ಲಿ ಹಾಕಿದ್ರು ನಾಮ.. ಹುಬ್ಬಳ್ಳಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ದೋಖಾ

ಮಹಿಳಾ ಬಸ್ ಆಗಿ ಪರಿವರ್ತನೆಯಾದ ಹಳೆಯ ಬಸ್; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದ ವಿನೂತನ ಪ್ರಯೋಗ

(Bellary Couple passed away in Heavy rain water)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada