AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohini Vs Roopa: ರೋಹಿಣಿ ಸಿಂಧೂರಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿ ರೂಪಾಗೆ ಕಾಲಾವಕಾಶ ನೀಡಿದ ಕೋರ್ಟ್

ಮಾನಹಾನಿ ಹೇಳಿಕೆ ನಿರ್ಬಂಧಕಾಜ್ಞೆ ನೀಡುವಂತೆ ಐಪಿಎಸ್ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ (Rohini Sindhuri) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

Rohini Vs Roopa: ರೋಹಿಣಿ ಸಿಂಧೂರಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿ ರೂಪಾಗೆ ಕಾಲಾವಕಾಶ ನೀಡಿದ ಕೋರ್ಟ್
ಡಿ ರೂಪಾ (ಎಡಚಿತ್ರ) ರೋಹಿಣಿ ಸಿಂಧೂರಿ (ಬಲಚಿತ್ರ)
ರಮೇಶ್ ಬಿ. ಜವಳಗೇರಾ
|

Updated on:Feb 23, 2023 | 4:05 PM

Share

ಬೆಂಗಳೂರು: ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಐಪಿಎಸ್ ಡಿ. ರೂಪಾ ಮೌದ್ಗಿಲ್(D Roopa Moudgil) ವಿರುದ್ಧ ರೋಹಿಣಿ ಸಿಂಧೂರಿ (Rohini Sindhuri) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 74ನೇ ಸಿಟಿ ಸಿವಿಲ್​ ನ್ಯಾಯಾಲಯ​ ​ಮಾರ್ಚ್ 7ಕ್ಕೆ ಮುಂದೂಡಿದೆ. ಅಲ್ಲದೇ ಡಿ.ರೂಪಾಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಕಾಲಾವಕಾಶ ನೀಡಿದೆ.

ಇದನ್ನೂ ಓದಿ:  Rohini Vs Roopa: ರೂಪಾ ವಿರುದ್ಧ ಕೋರ್ಟ್​​​​ಗೆ ರೋಹಿಣಿ ಸಿಂಧೂರಿ ಅರ್ಜಿ, ಆದೇಶ ಕಾಯ್ದಿರಿಸಿದ ನ್ಯಾಯಾಲಯ

ರೂಪಾ ಮೌದ್ಗಿಲ್​ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ರೋಹಿಣಿ ಸಿಂಧೂರಿ ಅವರು ಬೆಂಗಳೂರಿನ 74ನೇ ಸಿಟಿ ಸಿವಿಲ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ(ಫೆ.22) ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇಂದಿಗೆ(ಫೆ.23) ತೀರ್ಪು ಕಾಯ್ದಿರಿಸಿತ್ತು. ಆದ್ರೆ, ಇಂದು ನ್ಯಾಯಾಲವು ತೀರ್ಪು ನೀಡುವ ಬದಲಿಗೆ ಡಿ ರೂಪಾ ಅವರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ. ಇದರಿಂದ ಕೋರ್ಟ್​ ನಡೆ ತೀವ್ರ ಕುತೂಹಲ ಮೂಡಿಸಿದೆ.

ಯಾಕಂದ್ರೆ ಮಾನಹಾನಿಕರ ಹೇಳಿಕೆ ಅಥವಾ ಪ್ರಸಾರ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಸಾಮಾನ್ಯವಾಗಿ ಒಂದೇ ದಿನದಲ್ಲಿ ತಡೆಯಾಜ್ಞೆ ನೀಡಿ ಆದೇಶ ನೀಡುತ್ತವೆ. ಆದ್ರೆ, ರೋಹಿಣಿ ಸಿಂಧೂರಿ ಪ್ರಕರಣದಲ್ಲಿ  ತಡೆಯಾಜ್ಞೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಅಲ್ಲದೇ ಪ್ರತಿವಾದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ಇದು ಅಚ್ಚರಿಗೆ ಕಾರಣವಾಗಿದೆ.

Published On - 3:59 pm, Thu, 23 February 23