ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕೊಲೆ, ತಂದೆ-ಮಗನ ಕತ್ತು ಸೀಳಿ ಹತ್ಯೆ

ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಲು ತೆರಳಿದ್ದ ತಂದೆ, ಮಗನನ್ನು ಅಪಹರಿಸಿ ಬಳಿಕ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಲಾಗಿದೆ. ಕೊಲೆಯಾದ ತಂದೆ ಮಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕೊಲೆ,  ತಂದೆ-ಮಗನ ಕತ್ತು ಸೀಳಿ ಹತ್ಯೆ
Veeraswamy Reddy And Prashant Reddy
Edited By:

Updated on: Jul 23, 2025 | 9:16 PM

ಬೆಂಗಳೂರು, (ಜುಲೈ 23): ಬೆಂಗಳೂರು (Bengaluru) ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರನ್ನು ಆಂಧ್ರ ಪ್ರದೇಶದ (Andra Pradesh) ಬಾಪಟ್ಲ ಜಿಲ್ಲೆಯಲ್ಲಿ ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಇಬ್ಬರು ಬಿಜೆಪಿ ಮುಖಂಡರ ಬರ್ಬರ ಘಟನೆ ಆಂಧ್ರ ಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಇಂದು (ಜುಲೈ 23) ಮಧ್ಯಾಹ್ನ ನಡೆದಿದೆ. ಇವರಿಬ್ಬರೂ ತಂದೆ-ಮಗ ಆಗಿದ್ದು, ರಿಯಲ್ ಎಸ್ಟೇಟ್ ಸಂಬಂದಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದಾಗ ಇಬ್ಬರನ್ನೂ ಅಪಹರಿಸಿ ಕೊಲೆ ಬರ್ಬರವಾಗಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತರನ್ನು ಮಹದೇವಪುರ ಬಿಜೆಪಿ ಯುವ ಮುಖಂಡ ಮತ್ತು ಉದ್ಯಮಿ ಪ್ರಶಾಂತರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಎಂದು ಗುರುತಿಸಲಾಗಿದೆ. ಕೊಲೆಯಾದ ತಂದೆ ಮಕ್ಕಳು ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದರು.

ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸ್ ವಿಚಾರಣೆಗೆ ಆಂಧ್ರ ಪ್ರದೇಶ ರಾಜ್ಯಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಇಬ್ಬರೂ ಬೆಂಗಳೂರಿನ ಕಾಡುಗುಡಿ ಮೂಲದ ಉದ್ಯಮಿಗಳು ಆಗಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆಪ್ತ ಮೂಲಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಕಾಡುಗೋಡಿಯ ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಇನ್ನು ಪುತ್ರ ಪ್ರಶಾಂತ್ ರೆಡ್ಡಿ ಮಹದೇವಪುರ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ಬೆಂಗಳೂರಿನ ಕಲಾಸಿಪಾಳ್ಯ ಬಸ್​ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ, ಸ್ಥಳಕ್ಕೆ ಶ್ವಾನದಳ, ಬಾಂಬ್​ ನಿಷ್ಕ್ರಿಯ ದಳ ದೌಡು

ಬೆಂಗಳೂರಿನಲ್ಲಿ ಪ್ರಶಾಂತ್ ಮತ್ತು ವೀರಸ್ವಾಮಿರೆಡ್ಡಿ ಇಬ್ಬರೂ ಮಾರ್ವಲ್ ಬಿಲ್ಡರ್ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆಂಧ್ರ ಮೂಲದ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಅಪ್ಪ- ಮಗನ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ನಿನ್ನೆ (ಜುಲೈ 22) ವಿಮಾನದ ಮೂಲಕ ಅಪ್ಪ-ಮಗ ಕೋರ್ಟ್ ಕೇಸ್ ಗೆ ತೆರಳಿದ್ದು, ಇಂದು ಬೆಳ್ಳಗ್ಗೆಯಿಂದ ಮದ್ಯಾಹ್ನ 12ಗಂಟೆವರೆಗೂ ಅಪ್ಪ-ಮಗ ಇಬ್ಬರೂ ಕೋರ್ಟ್ ಬಳಿಯೇ ಇದ್ದರು. ಆದರೆ, 12 ಗಂಟೆ ಸುಮಾರಿಗೆ ಕೋರ್ಟ್ ಬಳಿಯೇ ತಂದೆ-ಮಗ ಇಬ್ಬರನ್ನೂ ಮಾತುಕತೆಗೆ ಕರೆದ ಮಾಧವರೆಡ್ಡಿ ಮತ್ತು ಅನಿಲ್ ರೆಡ್ಡಿ ರಾಜಿಯಾಗೋಣವೆಂದು ಮಾತನಾಡುತ್ತಲೇ, ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಕೂರಿಸಿಕೊಂಡ ಕಿಡ್ನ್ಯಾಪ್ ಮಾಡಿದ್ದಾರೆ. ಇದಾದ ಬಳಿಕ 12.20ಕ್ಕೆ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಹೆದ್ದಾರಿಯಲ್ಲೇ ಬೀಸಾಡಿ ಹೋಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Wed, 23 July 25