ಬೆಂಗಳೂರು: ಮಗು ಜನಿಸಿದ ಖುಷಿಗೆ ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕ
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನೆಟ್ವರ್ಕ್ ಇರುವುದಿಲ್ಲ. ಆದರೆ, ಲಂಡನ್ನಿಂದ ಬೆಂಗಳೂರಿಗೆ ಆಗಮಿಸಿದ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ನೆಟ್ವರ್ಕ್ ಸಿಗುತ್ತಿತ್ತು. ಅದರಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೂಲದ ಪ್ರಯಾಣಿಕರೊಬ್ಬರಿಗೆ ಮಗು ಜನಿಸಿದ ಸಂದೇಶ ಬಂದಿದ್ದು, ಇದೇ ಖುಷಿಗೆ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದ್ದಾರೆ.
ದೇವನಹಳ್ಳಿ, ಅ.7: ಲಂಡನ್ನಿಂದ ಬೆಂಗಳೂರಿಗೆ (Bangalore) ಆಗಮಿಸುತ್ತಿದ್ದಾಗ ಮಗುವಿನ ಜನನದ ಸುದ್ದಿ ತಿಳಿದು ಚೆನ್ನೈ ಮೂಲದ ಪ್ರಯಾಣಿಕರೊಬ್ಬರು ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನೆಟ್ವರ್ಕ್ ಇರುವುದಿಲ್ಲ. ಆದರೆ, ಬ್ರಿಟಿಷ್ ಏರ್ ವೇಸ್ನಲ್ಲಿ ನೆಟ್ವರ್ಕ್ ಲಭ್ಯವಾಗಿದ್ದರಿಂದ ಸಂತಸದ ಕ್ಷಣ ತಿಳಿದು ಸಂಭ್ರಮಾಚರಿಸಿದರು.
ಚೆನೈ ಮೂಲದ ಪ್ರಯಾಣಿಕ ಅನು ಬಾಲಾಜಿ ಅವರು ಬ್ರಿಟಿಷ್ ಏರ್ ವೇಸ್ನ BA119 ವಿಮಾನದಲ್ಲಿ ಲಂಡನ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ವಿಮಾನದಲ್ಲಿ ಇರುವಾಗಲೇ ತಾನು ತಂದೆಯಾದ ಸುದ್ದಿ ತಿಳಿದು ಅನು ಬಾಲಾಜಿ ಅವರು ಸಹ ಪ್ರಯಾಣಿಕರಿಗೆ ಹಾಗೂ ವಿಮಾನದ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣ, ಮಾಹಿತಿ ಇಲ್ಲಿದೆ
ಅಷ್ಟು ಮಾತ್ರವಲ್ಲದೆ, ಮಗು ಜನನದ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಟ್ವಿಟರ್) ಹಂಚಿಕೊಂಡ ಅನು ಬಾಲಾಜಿ ಅವರು, ವಿಮಾನದಲ್ಲಿ ಇಂಟರ್ ನೆಟ್ ಸಿಕ್ಕಿದ್ದಕ್ಕಾಗಿ ಬ್ರಿಟಿಷ್ ಏರ್ವೇಸ್ಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 am, Sat, 7 October 23