ಬೆಂಗಳೂರು: ನಗರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯ ಖಾಕಿ ಪಡೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಪ್ರತಿ ತಿಂಗಳ ಕೊನೆಯ ಶನಿವಾರದಂದು ಹಮ್ಮಿಕೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಜನ ಸಂಪರ್ಕ ಸಭೆ ನಡೆಸುವ ಮೂಲಕ ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸಬಹುದು. ಜೊತೆಗೆ, ಜನರು ನೇರವಾಗಿ ಠಾಣೆಗೆ ಬಂದು ತಮ್ಮ ದೂರುಗಳನ್ನು ಹೇಳಿಕೊಳ್ಳಬಹುದಾಗಿದೆ. ಜನರ ದೂರಿನನ್ವಯ ಪೊಲೀಸ್ ಅಧಿಕಾರಿಗಳು ಆಯಾ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಜನಸಂಪರ್ಕ ಸಭೆಗೆ ಸಾರ್ವಜನಿಕರ ಬೆಂಬಲ ತುಂಬಾನೇ ಅಗತ್ಯ. ಇಂದಿನ ಸಭೆಯಲ್ಲಿ ಜನರು ಹೆಚ್ಚಾಗಿ ತಾವು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಹಂಚಿಕೊಂಡದರು. ಜೊತೆಗೆ, ಕೆಲವು ಏರಿಯಾಗಳಲ್ಲಿ ನಡೆಯುತ್ತಿರುವ ಜೇಬುಗಳ್ಳತನ ಮತ್ತು ಕಳ್ಳತನದ ಪ್ರಕರಣಗಳ ಕುರಿತು ಮಾತನಾಡಿದರು. ಜನರ ದೂರುಗಳನ್ನು ಪರಿಗಣಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಟಿವಿ9 ಡಿಜಿಟಲ್ಗೆ ಕಮಲ್ ಪಂತ್ ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
ಇದನ್ನೂ ಓದಿ: ಬೆಂಗಳೂರು ಪೊಲೀಸರ ವಿನೂತನ ಪ್ರಯತ್ನ: ಪ್ರತಿ ನಾಲ್ಕನೇ ಶನಿವಾರ ಪ್ರತಿ ಠಾಣೆಯಲ್ಲೂ ನಡೆಯಲಿದೆ ಈ ಕಾರ್ಯಕ್ರಮ, ಏನದು?