ಯುದ್ಧದ ವೇಳೆ ತಲೆಗೆ ಹೊಕ್ಕಿದ್ದ ಬುಲೆಟ್, 18 ವರ್ಷ ಬಳಿಕ ಹೊರ ತೆಗೆದ ಬೆಂಗಳೂರಿನ ವೈದ್ಯರು
ಬೆಂಗಳೂರಿನ ವೈದ್ಯರು ವಿಶಿಷ್ಟ ಸರ್ಜರಿಯೊಂದನ್ನು ಮಾಡಿದ್ದಾರೆ. 18 ವರ್ಷಗಳ ಹಿಂದೆ ಯುದ್ಧದ ಸಮಯದಲ್ಲಿ ವ್ಯಕ್ತಿಯೊಬ್ಬರ ತಲೆಗೆ ಹೊಕ್ಕಿದ್ದ ಬುಲೆಟ್ ಅನ್ನು ಇದೀಗ ಬೆಂಗಳೂರಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಕಿವಿ ದಾರಿಯಲ್ಲಿ ಬರುತ್ತಿದ್ದ ಕೀವು, ವಿಪರೀತ ತಲೆನೋವು ಹಿನ್ನೆಲೆ ಎಕ್ಸ್ ರೇ ತೆಗೆದು ನೋಡಿದಾಗ ಬುಲೆಟ್ ಪತ್ತೆಯಾಗಿದೆ. ಅದರಂತೆ ಶಸ್ತ್ರಚಿಕಿತ್ಸೆ ಮೂಲಕ ಬುಲೆಟ್ ಹೊರತೆಗೆಯಲಾಗಿದೆ.
ಬೆಂಗಳೂರು, ಡಿ.12: ನಗರ ವೈದ್ಯರು ಮಾಡಿದ ವಿಶಿಷ್ಟ ಸರ್ಜರಿಯೊಂದು ವೈದ್ಯಲೋಕ ಮಾತ್ರವಲ್ಲದೆ ನೀವು ಕೂಡ ಅಚ್ಚರಿಗೊಳ್ಳುವುದರಲ್ಲಿ ಸಂಶಯವೇ ಇಲ್ಲ. 18 ವರ್ಷಗಳ ಹಿಂದೆ ಯುದ್ಧದ ಸಮಯದಲ್ಲಿ ಯೆಮೆನ್ ಮೂಲದ ವ್ಯಕ್ತಿಯೊಬ್ಬನ ತಲೆಗೆ ಹೊಕ್ಕಿದ್ದ ಬುಲೆಟ್ ಅನ್ನು ಇದೀಗ ಬೆಂಗಳೂರಿನ (Bengaluru) ಆರ್.ವಿ.ಆಸ್ಟರ್ ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯೆಮೆನ್ ಮೂಲದ 28 ವರ್ಷದ ವ್ಯಕ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಯುದ್ಧದ ಸಮಯದಲ್ಲಿ 12 ವರ್ಷದವಾನಾಗಿದ್ದಾಗ ಯೆಮೆನ್ ಮೂಲದ ಬಾಲಕನ ತಲೆಗೆ ಬುಲೆಟ್ ಹೊಕ್ಕಿತ್ತು. ಈ ಬುಲೆಟ್ ಸ್ಕಲ್ ಬೋನ್ ಒಳಗೆ ನುಸುಳಿ ಕಿವಿಗೆ ಹೊಕ್ಕಿತ್ತು.
ಇದನ್ನೂ ಓದಿ: ಅತಿಸಾರದಿಂದ ಬಳಲುತ್ತಿರುವ ರಾಜ್ಯದ 1.32 ಲಕ್ಷ ಜನರು: ವೈದ್ಯರ ಕಳವಳ
ಪರಿಣಾಮ ಕಿವಿ ಸೋರುವಿಕೆ, ತಲೆನೋವು, ಕಿವಿನೋವು ಸಮಸ್ಯೆಯಿಂದ ಬಳಲುವಂತಾಯಿತು. ನಂತರ ತನ್ನ ಸ್ನೇಹಿತರ ಜೊತೆ ಸೇರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ಸಮಸ್ಯೆ ಹೇಳಿಕೊಂಡಿದ್ದಅಋಏ. ಅದರಂತೆ ವೈದ್ಯರು ಎಕ್ಸ್ರೇ ತೆಗೆದಾಗ ಬುಲೆಟ್ ಕಾಣಿಸಿಕೊಂಡಿದೆ.
ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿದ್ದು, ರಕ್ತಸ್ರಾವ ಉಂಟಾಗಬಹುದು ಎಂದು ಅರಿವಾಗಿದ್ದರೂ ವೈದ್ಯರು ಸವಾಲು ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ 3 ಸೆಂಟಿಮೀಟರ್ ಉದ್ದದ ಬುಲೆಟ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇದೀಗ ಆ ವ್ಯಕ್ತಿ ಸಂಪೂರ್ಣ ಗುಣಮುಖನಾಗಿ ಯೆಮೆನ್ಗೆ ಮರಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ