AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪರ್ಸ್ ಹುಡುಕಲು ನೆರವಾಗಲಿಲ್ಲವೆಂದು ಬಾಂಬ್ ಬೆದರಿಕೆ ಕರೆ ಮಾಡಿದ ವಿಮಾನ ಪ್ರಯಾಣಿಕ ಅರೆಸ್ಟ್

Bomb Threat: ಎಸ್​​​ಜಿ 8536 ಸಂಖ್ಯೆಯ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಚಾರ್ಮಿಯಾ ಕೃತಿಯಸಗಿದ್ದಾನೆ. ವಿಮಾನದಲ್ಲಿ ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಆರೋಪಿಯು ಕೃತ್ಯ ಎಸಗಿದ್ದಾನೆ.

ಬೆಂಗಳೂರು: ಪರ್ಸ್ ಹುಡುಕಲು ನೆರವಾಗಲಿಲ್ಲವೆಂದು ಬಾಂಬ್ ಬೆದರಿಕೆ ಕರೆ ಮಾಡಿದ ವಿಮಾನ ಪ್ರಯಾಣಿಕ ಅರೆಸ್ಟ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
TV9 Web
| Updated By: Ganapathi Sharma|

Updated on: Dec 30, 2023 | 4:59 PM

Share

ಬೆಂಗಳೂರು, ಡಿಸೆಂಬರ್ 30: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ವಿಮಾನ ಪ್ರಯಾಣಿಕನೊಬ್ಬ ವಿಮಾನಯಾನ ಸಂಸ್ಥೆಯ ಕಾಲ್ ಸೆಂಟರ್​​​ಗೆ ಬಾಂಬ್​ ಬೆದರಿಕೆ (Bomb Threat) ಕರೆ ಮಾಡಿದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಜೈಲು ಪಾಲಾಗಿದ್ದಾನೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಕಾಲ್ ಸೆಂಟರ್​​​ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕಳೆದ 26ರಂದು ಬೆದರಿಕೆ ಕರೆ ಬಂದಿತ್ತು. ಬಂಧಿತ ಆರೋಪಿಯನ್ನು ಶ್ರೇಯಸ್ ಚಾರ್ಮಿಯಾ ಎಂದು ಗುರುತಿಸಲಾಗಿದೆ.

ಎಸ್​​​ಜಿ 8536 ಸಂಖ್ಯೆಯ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಚಾರ್ಮಿಯಾ ಕೃತಿಯಸಗಿದ್ದಾನೆ. ವಿಮಾನದಲ್ಲಿ ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಆರೋಪಿಯು ಕೃತ್ಯ ಎಸಗಿದ್ದಾನೆ. ಆರೋಪಿ ಶ್ರೇಯಸ್ ಚಾರ್ಮಿಯಾ ವಿರುದ್ಧ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ!

ಬೆಂಗಳೂರಿನಲ್ಲಿ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಬೆಂಗಳೂರಿನ ಸುಮಾರು 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದಾದ ಕೆಲವೇ ದಿನಗಳಲ್ಲಿ ರಾಜಭವನಕ್ಕೆ ವ್ಯಕ್ತಿ ಒಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆಯ ಬಗ್ಗೆ ಮಾಹಿತಿ ಕೇಳಿದ್ದೆ, ಹೀಗಾಗಿ ಪರಿಶೀಲಿಸೋಣವೆಂದು ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾಗಿ ತನಿಖೆ ವೇಳೆ ಆರೋಪಿ ಬಾಯಿಬಿಟ್ಟಿದ್ದ. ಈ ಮಧ್ಯೆ, ಕೆಲಸದಿಂದ ತೆಗೆದುಹಾಕಿದ್ದಕ್ಕೆ ಯುವತಿ ಒಬ್ಬಳು ಕಂಪನಿಗೆ ಬಾಂಬ್ ಬೆದರಿಕೆ ಕರೆ ಮಾಡಿದಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ