ಭಾಗಶಃ ರದ್ದಾಗಿದ್ದ ಬೆಂಗಳೂರು-ಹುಬ್ಬಳ್ಳಿ, ಹೊಸಪೇಟೆ ರೈಲುಗಳು ಪುನರಾರಂಭ
ಬೆಂಗಳೂರು-ಹುಬ್ಬಳ್ಳಿ ಮತ್ತು ಹೊಸಪೇಟೆ ರೈಲು ಮಾರ್ಗಗಳಲ್ಲಿ ರದ್ದಾಗಿದ್ದ ಹಲವು ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ನಡುವಿನ ರಸ್ತೆ ಕೆಳಸೇತುವೆ ಕಾಮಗಾರಿಯಿಂದಾಗಿ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಈಗ ಎಲ್ಲ ರೈಲುಗಳು ತಮ್ಮ ಹಿಂದಿನ ವೇಳಾಪಟ್ಟಿ ಮತ್ತು ಮಾರ್ಗಗಳ ಮೂಲಕ ಸಂಚರಿಸುತ್ತವೆ.

ಬೆಂಗಳೂರು, ಜನವರಿ 28: ಬೆಂಗಳೂರು-ಹುಬ್ಬಳ್ಳಿ (Bengaluru-Hubballi) ಮತ್ತು ಹೊಸಪೇಟೆ (Hospete) ಮಧ್ಯೆ ರದ್ದಾಗಿದ್ದ ಕೆಲ ರೈಲುಗಳ (Train) ಸಂಚಾರವನ್ನು ಪುನಃ ಆರಂಭಿಸಲಾಗಿದೆ. ಈ ಕುರಿತು ನೈಋತ್ಯ ರೈಲ್ವೆ ವಲಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ವಿಭಾಗಗಳ ನಡುವಿನ ರಸ್ತೆ ಕೆಳ ಸೇತುವೆ ಕಾಮಗಾರಿ ಕೈಗೊಳ್ಳಲಾಗಿತ್ತು. ಇದರಿಂದ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿತ್ತು. ಇನ್ನು ಕೆಲ ರೈಲುಗಳ ಮಾರ್ಗ ಬದಲಾಯಿಸಲಾಗಿತ್ತು. ಮತ್ತು ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು. ಇದೀಗ, ಈ ರೈಲುಗಳು ಮೊದಲಿನ ವೇಳಾಪಟ್ಟಿ ಮತ್ತು ಮಾರ್ಗಗಳ ಮುಖಾಂತರವೇ ಸಂಚರಿಸಲಿವೆ.
ಭಾಗಶಃ ರದ್ದಾದ ರೈಲುಗಳ ಮರು ಸಂಚಾರ: ಈ ಕೆಳಗಿನ ರೈಲುಗಳು ಈಗ ಅವುಗಳ ಮೂಲ ನಿಲ್ದಾಣದಿಂದ ಹೊರಡುತ್ತವೆ
- ರೈಲು ಸಂಖ್ಯೆ 07339: ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 27 ರಿಂದ ಪ್ರಯಾಣ ಆರಂಭಿಸಿದೆ.
- ರೈಲು ಸಂಖ್ಯೆ 07340: ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 27 ಮತ್ತು 28 ಪ್ರಯಾಣ ಆರಂಭಿಸಿದೆ.
- ರೈಲು ಸಂಖ್ಯೆ 16521: ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲು ಜನವರಿ 27 ಮತ್ತು 28 ಪ್ರಯಾಣ ಪ್ರಾರಂಭಸಿದೆ.
- ರೈಲು ಸಂಖ್ಯೆ 56520: ಹೊಸಪೇಟೆ-ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಜನವರಿ 27 ಮತ್ತು 28 ರಂದು ತನ್ನ ಪ್ರಯಾಣವನ್ನು ಆರಂಭಿಸಿದೆ.
- ರೈಲು ಸಂಖ್ಯೆ 17391: ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ಜನವರಿ 28 ಮತ್ತು 29 ರಿಂದ ಪ್ರಾರಂಭಿಸಲಿದೆ.
ಮಾರ್ಗ ಬದಲಾಯಿಸಲಾದ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕೆಳಗಿನ ರೈಲುಗಳು ಇದೀಗ ಅವುಗಳ ನಿಯಮಿತ ಮಾರ್ಗಗಳಲ್ಲೇ ಸಂಚರಿಸುತ್ತವೆ
- ರೈಲು ಸಂಖ್ಯೆ 11013: ಲೋಕಮಾನ್ಯ ತಿಲಕ್-ಕೊಯಮತ್ತೂರು ಡೈಲಿ ಎಕ್ಸ್‌ಪ್ರೆಸ್ ಜನವರಿ 27 ಪ್ರಯಾಣ ಪ್ರಾರಂಭಿಸಿದೆ.
- ರೈಲು ಸಂಖ್ಯೆ 12658: ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ರೈಲು ಜನವರಿ 27 ಮತ್ತು 28ರಿಂದ ಸಂಚಾರ ಆರಂಭಿಸಿದೆ.
- ರೈಲು ಸಂಖ್ಯೆ 16593: ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ಜನವರಿ 27 ಮತ್ತು 28ರಿಂದ ಪ್ರಯಾಣ ಪ್ರಾರಂಭವಾಗಿದೆ.
- ರೈಲು ಸಂಖ್ಯೆ 06270: ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಜನವರಿ 27 ಮತ್ತು 28ರಿಂದ ಪ್ರಯಾಣ ಪ್ರಾರಂಭಿಸಿದೆ.
- ರೈಲು ಸಂಖ್ಯೆ 16022: ಮೈಸೂರು-ಡಾ. ಎಂಜಿಆರ್ ಚೆನ್ನಾಲ್ ಕಾವೇರಿ ಡೈಲಿ ಎಕ್ಸ್‌ಪ್ರೆಸ್ ಜನವರಿ 27 ಮತ್ತು 28ರಿಂದ ಪ್ರಯಾಣ ಆರಂಭಿಸಿದೆ.
- ರೈಲು ಸಂಖ್ಯೆ 06269: ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಜನವರಿ 27 ಮತ್ತು 28ರಂದು ಈ ಮೊದಲಿನಂತೆ ಸಂಚಾರ ನಡೆಸುತ್ತದೆ.
ಇದನ್ನೂ ಓದಿ: ಅಂಜನಾದ್ರಿ ಟು ಅಯೋಧ್ಯೆ ರೈಲು ಸಂಪರ್ಕಕ್ಕೆ ಹೆಚ್ಚಿದ ಆಗ್ರಹ: ಪರಿಶೀಲನೆ ಭರವಸೆ ನೀಡಿದ ಸಚಿವ ಸೋಮಣ್ಣ
ಮೊದಲಿನ ವೇಳಾಪಟ್ಟಿ ಪ್ರಕಾರವೇ ರೈಲು ಸಂಚಾರ
- ರೈಲು ಸಂಖ್ಯೆ 12658: ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಜನವರಿ 27 ಮತ್ತು 28ರಂದು ಮೊದಲಿನ ವೇಳಾಪಟ್ಟಿ ಪ್ರಕಾರವೇ ಸಂಚಾರ ಮಾಡುತ್ತದೆ.
- ರೈಲು ಸಂಖ್ಯೆ 16593: ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ರೈಲು ಜನವರಿ 27 ಮತ್ತು 28ರಂದು ಮೊದಲಿನ ವೇಳಾಪಟ್ಟಿ ಪ್ರಕಾರವೇ ಸಂಚಾರ ಮಾಡುತ್ತದೆ.