ಬೆಂಗಳೂರು, ಡಿಸೆಂಬರ್ 23: ಪತ್ನಿಯಿಂದಾಗಿ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಮತ್ತೊಂದು ಘಟನೆ ನಗರದ ಮಹಾಲಕ್ಷ್ಮೀ ಲೇಔಟ್ನ ಮನೆಯಲ್ಲಿ ನಡೆದಿದೆ. ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಲಾರಿ ಮಾಲೀಕ 45 ವರ್ಷದ ಸ್ವಾಮಿ ಮೃತ ಪತಿ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತನ ಸಂಬಂಧಿ ನಾಗರಾಜ್ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತ ಸ್ವಾಮಿ ಒಳ್ಳೆಯ ಮನುಷ್ಯ. ಮದುವೆ, ಮನೆ, ಮಕ್ಕಳು ಅಂತ ಇದ್ದವರು. ಆತನ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಗುತ್ತಿಗೆ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿದ್ದರು.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ: ಕರ್ನಾಟಕ ಸೇರಿ 3 ರಾಜ್ಯಗಳಿಗೆ ಸುಪ್ರೀಂ ನೋಟಿಸ್
ಆಗ ಅಲ್ಲಿ ಮೈಲಾರಾಪ್ಪ ಎಂಬುವವರು ಇದ್ದರು. ಆಗ ಅವರು ಯುನಿವರ್ಸಿಟಿ ರಿಜಿಸ್ಟರ್ ಆಗಿದ್ದರು. ಈಗ ನಿವೃತ್ತಿ ಹೊಂದಿದ್ದಾರೆ. ಅವರೊಂದಿಗೆ ಸಂಪರ್ಕ ಆಗಿದೆ. ಆ ಮೇಲೆ ಅವರ ಸಂಸಾರ ಹಾಳಾಗಿತ್ತು. ಈ ವಿಚಾರ ಮೈಲಾರಾಪ್ಪ ಪತ್ನಿಗೂ ಗೊತ್ತಿದ್ದು, ಅವರು ಸ್ವಾಮಿ ಮನೆಗೆ ಬಂದು ಬುದ್ಧಿ ಹೇಳಿದ್ದರು. ಆದರೆ ಸ್ವಾಮಿ ಪತ್ನಿ ಬಿಟ್ಟಿರಲಿಲ್ಲ.
ಇದಕ್ಕೆಲ್ಲಾ ಮನನೊಂದು ಸ್ವಾಮಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಮೂರು ಪುಟಗಳ ಡೆತ್ ನೋಟ್ ಬರೆದು ಇಟ್ಟಿದ್ದಾರಂತೆ. ಅದು ನಮಗೆ ಸಿಕ್ಕಿಲ್ಲ. ಪೊಲೀಸರು ಮಹಜರು ಮಾಡಿದಾಗ ನೋಡಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಪತ್ನಿ ಕಾಟಕ್ಕೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಕೇಸ್‌ನ ತನಿಖೆ ಚುರುಕುಗೊಳಿಸಿರೋ ಬೆಂಗಳೂರಿನ ಮಾರತ್‌ಹಳ್ಳಿ ಪೊಲೀಸ್ರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಟೆಕ್ಕಿ ಅತುಲ್ ಘಟನೆ ಮಾಸುವ ಮುನ್ನವೆ ಹೆಂಡತಿ ಕಾಟಕ್ಕೆ ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಕಾನ್ ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕೂಡ ಸಾಕಷ್ಟು ಚರ್ಚೆ ಆಗಿತ್ತು.
ಇದನ್ನೂ ಓದಿ: ಟ್ರೆಂಡ್ ಆಗ್ತಿದೆ ಪತ್ನಿಯ ಕಾಟದಿಂದ ಬೇಸತ್ತ ಪತಿಯ ಆತ್ಮಹತ್ಯೆ ಪ್ರಕರಣಗಳು, ಇದಕ್ಕೆ ಈ ಕಾರಣ ನೋಡಿ
ಇನ್ನು ನೆಲಮಂಗಲದಲ್ಲಿ ಕೂಡ ಇಂತಹದೊಂದು ಘಟನೆ ನಡೆದಿತ್ತು. ಪತ್ನಿ ಹಾಗೂ ಆಕೆ ಪೋಷಕರ ಕಿರುಕುಳಕ್ಕೆ ಮನನೊಂದು ಕ್ರಿಕೆಟ್ ಆಟಗಾರ ಬಾಲರಾಜ್ ಡೆತ್ನೋಟ್ ಬರೆದಿಟ್ಟು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Mon, 23 December 24