ಮಿನಿಭಾರತವೆಂದು ಕರೆಸಿಕೊಳ್ಳುವ ಬೆಂಗಳೂರನ್ನು ವಿಭಜಿಸದೆ ಅಭಿವೃದ್ಧಿ ಮಾಡಿ ಎಂದ ಕೇಶವ್ ಪ್ರಸಾದ್

Updated on: Mar 12, 2025 | 7:57 PM

ಕೇಶವ್ ಪ್ರಸಾದ್ ಅವರು ವಿಧಾನ ಪರಿಷತ್ ನಲ್ಲಿ ಮಾತಾಡುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಿಂದ ಪರಿಷತ್ ಗೆ ಬರುತ್ತಾರೆ. ಶಾಸಕ ಮುಖ್ಯಮಂತ್ರಿಯವರನ್ನು ಮೇಲ್ಮನೆಗೆ ಸ್ವಾಗತಿಸುತ್ತ ಕೇಶವ್ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಅವರು ನನಗೆ ಆತ್ಮೀಯರು, ಸ್ವಾಗತ ಕೋರದೆ ಮಾತು ಮುಂದುವರಿಸುವುದು ಸಾಧ್ಯವಿರಲಿಲ್ಲ ಎನ್ನುತ್ತಾರೆ. ಸಿಎಂ ಮುಗುಳ್ನಗುತ್ತಾ ತಮ್ಮ ಸ್ಥಾನದಲ್ಲಿ ಕೂರುತ್ತಾರೆ.

ಬೆಂಗಳೂರು, ಮಾರ್ಚ್​ 12:  ಬಿಜೆಪಿಯ ಕೇಶವ್ ಪ್ರಸಾದ್ ಎಸ್ (Keshav Prasad S) ಇಂದು ವಿಧಾನ ಪರಿಷತ್ ನಲ್ಲಿ ಗ್ರೇಟರ್ ಬೆಂಗಳೂರು ಬಿಲ್ (Greater Bengaluru Bill) ಬಗ್ಗೆ ಮಾತಾಡುತ್ತ ಮೊನ್ನೆಯಷ್ಟೇ ಪ್ರಯಾಗ್​ರಾಜ್​ಗೆ ತೆರಳಿ ಪುಣ್ಯಸ್ನಾನ ಮಾಡಿ ಬಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಸೂದೆಯನ್ನು ತಂದು ಬೆಂಗಳೂರನ್ನು ವಿಭಜಿಸುವ ಬದಲು ಅದರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಿ ಎಂದರು. ಬೆಂಗಳೂರು ದಕ್ಷಿಣದಲ್ಲಿ ಮಿನಿ ಭಾರತ ಎಂದು ಗುರುತಿಸಿಕೊಳ್ಳುತ್ತದೆ, ಇದೇ ಭಾಗದ ಚೆನ್ನೈ ಮತ್ತು ಹೈದರಾಬಾದ್ ಕೂಡ ಐಟಿ ಹಬ್​​ಗಳಾಗಿ ಬೆಳೆದಿರುವುದರಿಂದ ಈಗಾಗಲೇ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಹೊಂದಿರುವ ಬೆಂಗಳೂರು ಮತ್ತು ಅದರ ಬೆಳವಣಿಗೆ ಮೇಲೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ ಎಂದು ಕೇಶವ್ ಪ್ರಸಾದ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ’: ಡಿವಿಜಿ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆ ಶಿವಕುಮಾರ್

Published on: Mar 12, 2025 07:56 PM