ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್ ಪಲ್ಟಿ: ತಪ್ಪಿದ ಭಾರೀ ದುರಂತ
ಬೆಂಗಳೂರಿನ ನೀಲಿ ಮಾರ್ಗ ಮೆಟ್ರೋ ಕಾಮಗಾರಿಯ ವೇಳೆ ಬೃಹತ್ ಕ್ರೇನ್ ಒಂದು ನಿಯಂತ್ರಣ ತಪ್ಪಿ ಬಿದ್ದಿದೆ. ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ಗರ್ಡರ್ ಜೋಡಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭಿಸಿಲ್ಲ ಎನ್ನಲಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
ಬೆಂಗಳೂರು, ಜನವರಿ 14: ಅಗರ ಬಳಿ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಭಾರಿ ದುರಂತವೊಂದು ತಪ್ಪಿದೆ. ಕಂಟ್ರೋಲ್ ತಪ್ಪಿ ಬೃಹತ್ ಕ್ರೇನ್ ವಾಹನ ಆಯತಪ್ಪಿ ಬಿದ್ದಿದ್ದು, ಅದೃಷ್ವಶಾತ್ ಯಾವುದೇ ಪ್ರಾಣಹಾನಿ ಈ ವೇಳೆ ಸಂಭವಿಸಿಲ್ಲ. ಕ್ರೇನ್ ಹಿಂದಕ್ಕೆ ತೂಕದ ವಸ್ತು ಹಾಕದೆ ಮುಂದೆಯಿಂದ ಗರ್ಡರ್ ಎತ್ತಲು ಮುಂದಾದಾಗ ಬ್ಯಾಲೆನ್ಸ್ ತಪ್ಪಿದೆ. ಈ ವೇಳೆ ಆಪರೇಟರ್ ಕ್ರೇನ್ ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಂಜಾನೆ 3.45ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ HSR ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

