AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ಸಾಂಕ್ರಾಮಿಕ ರೋಗಗಳು

ಬೆಂಗಳೂರಿನಲ್ಲಿ ಹೆಚ್ಚಿದ ಚಳಿಯಿಂದ SARI, ILI, ಮತ್ತು ತೀವ್ರ ಅತಿಸಾರ ಪ್ರಕರಣಗಳು ಏರಿಕೆ ಕಂಡಿದ್ದು, ಜ್ವರ, ಕೆಮ್ಮು, ನೆಗಡಿ, ಮೈಕೈ ನೋವಿನಂತಹ ಸೀಸನಲ್ ಫ್ಲೂ ಲಕ್ಷಣಗಳು ಕಂಡುಬರುತ್ತಿವೆ.ಹೀಗಾಗಿ ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಲಸಿಕೆ ಪಡೆಯಲು ಆರೋಗ್ಯ ಇಲಾಖೆ ಸೂಚಿಸಿದೆ. ವೈದ್ಯರು ಮನೆಯ ಊಟ ಸೇವನೆ, ಬಿಸಿ ನೀರು ಕುಡಿಯುವುದರ ಜೊತೆಗೆ ಉತ್ತಮ ನೈರ್ಮಲ್ಯ ಕಾಪಾಡುವ ಮೂಲಕ ಚಳಿಗಾಲದ ಕಾಯಿಲೆಗಳಿಂದ ದೂರವಿರಲು ಸಲಹೆ ನೀಡಿದ್ದಾರೆ.

ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ಸಾಂಕ್ರಾಮಿಕ ರೋಗಗಳು
ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ವೈರಲ್ ಫ್ಲೂ
ಭಾವನಾ ಹೆಗಡೆ
|

Updated on: Jan 14, 2026 | 11:56 AM

Share

ಬೆಂಗಳೂರು, ಜನವರಿ 14: ನಗರದಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಅತಿಯಾದ ಚಳಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಐಎಲ್ಐ ಸಾರಿ ವೈರಲ್ ಫ್ಲೂ ಕೇಸಗಳ ಸಂಖ್ಯೆ ಹೆಚ್ಚಾಗಿವೆ. ಅತಿಯಾದ ಚಳಿಯಿಂದ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಕೆಮ್ಮು, ನೆಗಡಿ, ಜ್ವರ ಹಾಗೂ ಸಾರಿ ಐಎಲ್ಐ (SARI-ILI) ಕೇಸ್ಗಳು ಹೆಚ್ಚಾಗಿವೆ. ಕಳೆದ ಒಂದು ವಾರದಲ್ಲಿ ಜನರಲ್ಲಿ 135 SARI , 35 ILI ಹಾಗೂ 3327 ಅಕ್ಯೂಟ್ ಡೈಯಾರಿಯಲ್ ಡಿಸೀಜ್​ಗಳು ಕಂಡುಬಂದಿದ್ದು, ಆರೋಗ್ಯ ಇಲಾಖೆ ನಿಗಾವಹಿಸಿದೆ.

ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಹುಶಾರ್!

ರಾಜ್ಯದಲ್ಲಿ ಹವಮಾನ ಸಮಸ್ಯೆಯಿಂದ ಸೀಸನಲ್ ಫ್ಲೂ ಭೀತಿ ಇದ್ದು, ನಗರವಾಸಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮಿನಂತಹ ಲಕ್ಷಣಗಳು ಕಂಡುಬರುತ್ತಿವೆ. ಈ ಗುಣಲಕ್ಷಣಗಳು ಕಂಡುಬಂದಲ್ಲಿ ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಬದಲಾಗುತ್ತಿರುವ ಹವಮಾನ ಹಿನ್ನಲೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಡಾ ಮುರಳೀಧರ್ ಎಚ್ಚರಿಸಿದ್ದಾರೆ. ಚಳಿಗಾಲ ಮುಗಿಯುವವರೆಗೂ ಹೊರಗಡೆಯ ಆಹಾರ ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ತಿನಿಸು ತಿನ್ನದೆ, ಮನೆಯ ಊಟವನ್ನೇ ಹೆಚ್ಚಾಗಿ ಸೇವಿಸುವಂತೆ ತಿಳಿಸಿದ್ದಾರೆ.

ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ರೊಗಿಗಳ ಸಂಖ್ಯೆ

ಕಳೆದ ವರ್ಷ 1,79,028 ADD (Acute Diarrheal Disease) ಕೇಸ್​ಗಳು ಕಂಡುಬಂದಿದ್ದವು. ಆದರೆ ಈ ವರ್ಷ ಕೇವಲ ಕಳೆದ ಐದು ದಿನದಲ್ಲಿ 3327 ಕೇಸ್​ಗಳು ಕಂಡುಬಂದಿವೆ. ಕಳೆದ ವರ್ಷ 9400 ಐಎಲ್ಐ (Influenza-like illness) ಕೇಸ್ಗಳಿದ್ದರೆ, ಈ ಬಾರಿ ಕೇವಲ 5 ದಿನಗಳಲ್ಲಿ 135 ಕೇಸ್​ಗಳು ಕಂಡುಬಂದಿವೆ. ಕಳೆದ ಐದು ದಿನದಲ್ಲಿ 25 ಸಾರಿ (Severe Acute Respiratory Infections) ಕೇಸ್​ಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ 4479 ಕೇಸ್​ಗಳು ಪತ್ತೆಯಾಗಿದ್ದವು. ಹೀಗಾಗಿ ಜನರು ಚಳಿಗಾಲ ಮುಗಿಯುವವರೆಗೂ ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದರೊಂದಿಗೆ ಆರೋಗ್ಯಕರ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ಥೈಲ್ಯಾಂಡ್​ನಲ್ಲಿ ಹಳಿ ತಪ್ಪಿದ ರೈಲು, 22 ಮಂದಿ ಸಾವು
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ವೇಗವಾಗಿ ಬಂದು ಸಂಚಾರ ಗೃಹರಕ್ಷಕ ಸಿಬ್ಬಂದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ಸೀಸನ್ ಚಪ್ಪಾಳೆಯಲ್ಲಿ ಧ್ರುವಂತ್ ಹೆಸರನ್ನು ನಿರೀಕ್ಷಿಸಿರಲಿಲ್ಲ; ರಾಶಿಕಾ
ಸೀಸನ್ ಚಪ್ಪಾಳೆಯಲ್ಲಿ ಧ್ರುವಂತ್ ಹೆಸರನ್ನು ನಿರೀಕ್ಷಿಸಿರಲಿಲ್ಲ; ರಾಶಿಕಾ
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ