ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಒಳಗಿದ್ದ ಪ್ರಯಾಣಿಕರು ಪರದಾಟ
ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಬೋಗಿಯ ಡೋರ್ಗಳು ಓಪನ್ ಆಗದೆ ಲಾಕ್ ಆಗಿದ್ದವು. ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಮೆಟ್ರೋ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ಬಿಎಂಆರ್ಸಿಎಲ್ ವಿಷಾಧ ವ್ಯಕ್ತಪಡಿಸಿದೆ.
ಬೆಂಗಳೂರು, ಜೂನ್.13: ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಮೆಟ್ರೋ ಪ್ರಯಾಣಿಕರು (Namma Metro) ತಾಂತ್ರಿಕ ದೋಷದಿಂದ ಭಾರೀ ಸಮಸ್ಯೆ ಎದುರಿಸುವಂತಾಯಿತು. ಇತ್ತೀಚೆಗೆ ಬೆಂಗಳೂರಿನ (Bengaluru) ನಮ್ಮ ಮೆಟ್ರೋ ಪದೇಪದೇ ಕೈ ಕೊಡ್ತಿದೆ. ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ ಕಂಡು ಬಂದಿದೆ. ಇಂದು ಬೆಳಗ್ಗೆ 9.58 ಗಂಟೆ ಸುಮಾರಿಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಕಾದು ನಿಂತಿದ್ದು ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆಗಿದ್ದರು.
ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಬೋಗಿಯ ಡೋರ್ಗಳು ಓಪನ್ ಆಗದೆ ಲಾಕ್ ಆಗಿದ್ದವು. ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಸಮಸ್ಯೆ ಆಗಿದ್ದ ಮೆಟ್ರೋ ಬೋಗಿಯನ್ನ ಮೆಜೆಸ್ಟಿಕ್ನ ಟ್ರ್ಯಾಕ್ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್ಗಳನ್ನ ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಿಸಲಾಯ್ತು. ಬಳಿಕ ಎಂದಿನಂತೆ ಸಂಚಾರ ಯಥಾಸ್ಥಿತಿಗೆ ಬಂತು. ಮೆಟ್ರೋ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ಬಿಎಂಆರ್ಸಿಎಲ್ ವಿಷಾಧ ವ್ಯಕ್ತಪಡಿಸಿದೆ. ನಮ್ಮ ಮೆಟ್ರೋ ಎರಡು ಗಂಟೆಗಳ ಬಳಿಕ ದೋಷಯುಕ್ತ ಮೆಟ್ರೋ ಬೋಗಿ ಸರಿಪಡಿಸಿದೆ.
Due to technical snag at TRINITY Stn at 9.58 am today train service got disrupted & later at Kempegowda stn majestic the fault train was moved to pocket track. Train services are restored & may take a minimum of an hour to restore to normally. Inconvenience caused is regretted.
— ನಮ್ಮ ಮೆಟ್ರೋ (@OfficialBMRCL) June 13, 2024
ಇದನ್ನೂ ಓದಿ: ಮಂಗಳೂರು: ಪೊಲೀಸರ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನದಿಂದ ಬರುತ್ತಿದೆ ಬೆದರಿಕೆ ಕರೆ!
ಮುಂಜಾನೆ 9.58ರಲ್ಲಿ ವ್ಯತ್ಯಯವುಂಟಾಗಿದ್ದ ನೇರಳೆ ಮಾರ್ಗದ ಮೆಟ್ರೋ ಸಂಚಾರ ಬೆಳಗ್ಗೆ 11:30 ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಬೆಳಗ್ಗೆ ಕೆಲಸಕ್ಕೆ ತರಳುವ ವೇಳೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಕಚೇರಿಗಳಿಗೆ ತಲುಪಲು ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಿತ್ತು. ಈಗ ಮಟ್ರೋ ಸೇವೆ ಎಂದಿನಂತೆ ಸಹಜ ಸ್ಥಿತಿಗೆ ಬಂದಿದೆ. ಆದರೂ ಜನರಲ್ಲಿ ಕೊಂಚ ಭಯ ಉಂಟಾಗಿದೆ. ಇವತ್ತು ಸಂಭವಿಸಿದ ಸಮಸ್ಯೆಯಿಂದಾಗಿ ಪ್ರಯಾಣಿಕರು ಒಂದು ಗಂಟೆಗಳ ಕಾಲ ಮೆಟ್ರೋ ರೈಲಿನ ಒಳಗಡೆಯೇ ಲಾಕ್ ಆಗುವಂತಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:46 pm, Thu, 13 June 24