ಬೆಂಗಳೂರು: ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಪತ್ನಿಗೆ ಚಾಕು ಇರಿದು ಜೈಲು ಸೇರಿದ ಪತಿ

| Updated By: ಆಯೇಷಾ ಬಾನು

Updated on: Feb 18, 2024 | 9:43 AM

ಮದುವೆ ಆದಾಗಿನಿಂದಲೂ ಜಯಪ್ರಕಾಶ್​ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ಒಮ್ಮೆ ಜಗಳ ನಡೆಯುವಾಗ ನಿನಗೆ ಅಕ್ರಮ ಸಂಬಂಧವಿದೆ. ಏಕೆ ನನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಜಯಪ್ರಕಾಶ್ ತನ್ನ ಪತ್ನಿಗೆ ಚಾಕು ಇರಿದಿದ್ದಾನೆ. ದಿವ್ಯಶ್ರೀ ಸದ್ಯ ಚಿಕಿತ್ಸೆ ಪಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಂಗಳೂರು: ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಪತ್ನಿಗೆ ಚಾಕು ಇರಿದು ಜೈಲು ಸೇರಿದ ಪತಿ
ಜಯಪ್ರಕಾಶ್
Follow us on

ಬೆಂಗಳೂರು, ಫೆ.18: ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಸುಂಕದಕಟ್ಟೆ (Sunkadakatte) ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ನಡೆದಿದೆ. ಜಯಪ್ರಕಾಶ್(32) ತನ್ನ ಪತ್ನಿ‌ ದಿವ್ಯಶ್ರೀ (26)ಗೆ ಚಾಕು ಇರಿದಿದ್ದಾರೆ. ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Kamakshipalya Police Station) ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ಬಂಧಿಸಿ ಜೈಲಿಗಟ್ಟಲಾಗಿದೆ.

ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ತಿದ್ಳು. ಮೊದಲು ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ, ನಂತರ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇವರಿಬ್ಬರೂ ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರೂ ಇವರ ನಡುವೆ ಗಲಾಟೆ, ಜಗಳ ಸಾಮಾನ್ಯವಾಗಿತ್ತು.

ಮದುವೆ ಆದಾಗಿನಿಂದಲೂ ಜಯಪ್ರಕಾಶ್​ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಜಯಪ್ರಕಾಶ್ ಗಲಾಟೆ ಮಾಡ್ತಿದ್ದ. ಫೋನಲ್ಲಿ ಯಾರ ಯಾರ ಜೊತೆಗೆ ಮಾತಾಡ್ತಿಯ ಎಂದು ಹಲ್ಲೆ ನಡೆಸುತ್ತಿದ್ದ. ಹೀಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂಬ ಕೋಪ ಕೂಡ ಹೆಚ್ಚಾಗಿದ್ದು ಜಯಪ್ರಕಾಶ್ ಚಾಕು ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಮುಂದಾದಾಗ ಚಾಕು ಕಾಲಿಗೆ ತಾಕಿ ದಿವ್ಯಶ್ರೀಗೆ ಗಾಯಗಳಾಗಿವೆ. ಕಾಲಿಗೆ ಗಾಯ ಆಗಿದ್ದು ಎಂಟು‌ ಹೊಲಿಗೆ ಹಾಕಲಾಗಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಜೈಲಿನಿಂದ ಯುವತಿ ನಗ್ನ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ; ರೌಡಿಶೀಟರ್, ಸಹಚರರ ಬಂಧಿಸಿದ ಸಿಸಿಬಿ

ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ

ಗಾಂಜಾ ಮತ್ತಿನಲ್ಲಿದ್ದ ಪ್ರವಾಸಿಗರು ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಸ್ಕೂಟರ್​ನಲ್ಲಿ ಬಂದ ಇಬ್ಬರು ಮಹಿಳೆಯರು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಏಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನಿಸಿದ್ದಕ್ಕೆ ಮಹಿಳಾ ಕಾನ್ಸ್​​ಟೇಬಲ್​ಗಳಾದ​ ಶಿಲ್ಪಾ ಹಾಗೂ ವಿನುತಾ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಪ್ರವಾಸಿ ಮಹಿಳೆಯರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಲಾಗಿದೆ.

PSI ನೇಮಕಾತಿ ಹಗರಣ, ಮತ್ತೆ ಮೂವರು ಅರೆಸ್ಟ್

PSI ನೇಮಕಾತಿ ಹಗರಣದಲ್ಲಿ ಮತ್ತೆ ಮೂವರನ್ನ ಸಿಐಡಿ ತಂಡ ಅರೆಸ್ಟ್ ಮಾಡಿದೆ. ಎಫ್​ಡಿಎ ಚಂದ್ರಕಾಂತ್, ವಿದ್ಯಾರ್ಥಿ ಶಶಿಧರ್ ಹಾಗೂ ಹಾಸ್ಟೆಲ್ ವಾರ್ಡನ್ ಬಸವರಾಜ್​​ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರು ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿದ್ರು. ಇವರ ವಿರುದ್ಧ ಕಲಬುರಗಿಯ ಅಶೋಕನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ