ಪೊಲೀಸರ ಮೆಗಾ ಪ್ಲಾನ್​ಗೆ ಚಳ್ಳೆಹಣ್ಣು ತಿನ್ನಿಸಿದ ರೌಡಿಗಳು

| Updated By: sandhya thejappa

Updated on: Jul 11, 2021 | 11:09 AM

ನಿನ್ನೆ ಪೊಲೀಸರ ಪ್ಲಾನ್ ‘ಎ’ ನಲ್ಲಿ ಹಲವು ನಟೋರಿಯಸ್​ಗಳು ಮಿಸ್ ಅಗಿದ್ದರು. ಹೀಗಾಗಿ ನಿನ್ನೆ ಸಿಗದವರನ್ನು ಮತ್ತೆ ಹುಡುಕಿ ಕರೆತರುವ ಬಗ್ಗೆ ಪ್ಲಾನ್ ಮಾಡಲಾಗುತ್ತಿದೆ. ಯಾರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಬಿಡುವುದಿಲ್ಲ.

ಪೊಲೀಸರ ಮೆಗಾ ಪ್ಲಾನ್​ಗೆ ಚಳ್ಳೆಹಣ್ಣು ತಿನ್ನಿಸಿದ ರೌಡಿಗಳು
ನಿನ್ನೆ ರೌಡಿಶೀಟರ್​​ಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು
Follow us on

ಬೆಂಗಳೂರು: ನಿನ್ನೆ (ಜುಲೈ 10) ಬೆಳಿಗ್ಗೆ ಬೆಂಗಳೂರು ಪೊಲೀಸರು ಸುಮಾರು 2,144 ರೌಡಿ ಮನೆಗಳ ಮೇಲೆ ದಾಳಿ ಮಾಡಿ, 1,548 ರೌಡಿಗಳನ್ನ ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ 561 ರೌಡಿಗಳ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ಇಷ್ಟೆಲ್ಲಾ ಮೆಗಾ ಪ್ಲಾನ್ ಮಾಡಿಕೊಂಡಿದ್ದ ಪೊಲೀಸರಿಗೆ ಕೆಲ ರೌಡಿಗಳು ಚಳ್ಳೆಹಣ್ಣು ತಿನ್ನಿಸಿದ್ದಾರೆ. 1,548 ರೌಡಿಗಳನ್ನ ವಶಕ್ಕೆ ಪಡೆದ ಪೊಲೀಸರ ಕೈಗೆ ನಟೋರಿಯಸ್​ಗಳು ಇನ್ನು ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಸೈಲೆಂಟ್ ಸುನಿಲಾ, ಒಂಟೆ ರೋಹಿತ್, ಲೋಕೇಶ್ ಅಲಿಯಾಸ್ ಮುಲಾಮ, ಸೈಕಲ್ ರವಿ, ಬೇಕರಿ ರಘು, ಬಚ್ಚನ್, ಇಸ್ತಿಯಾಕ್ ಅಲಿಯಾಸ್ ಪೈಲ್ವಾನ್, ಕ್ರತಿಗುಪ್ಪೆ ಪವನಾ, ಅಕ್ಬರ್ ಅಲಿ, ಮಾರ್ಕೇಟ್ ವೇಡಿ, ಗುಡ್ಡ ಭರತ, ಮಹೀಮ್, ಮೈಕಲ್, ಕತ್ರಿಗುಪ್ಪೆ ಜಗ್ಗ, ರಾಮ, ವರ ಲಕ್ಷ್ಮಿ ಅಲಿಯಾಸ್ ಕಾರದಪುಡಿ ವರ ಲಕ್ಷ್ಮಿ, ಗೂಳಿ ಬಸವ, ಧರಣಿ, ಹೇಂಮತ್, ಕಬಾಬ್ ಮಂಜ, ಯಶಸ್ವಿನಿ, ದಡಿಯಾ ಮಹೇಶಾ ಸೇರಿ 50ಕ್ಕೂ ಹೆಚ್ಚು ನಟೋರಿಯಸ್ ರೌಡಿಗಳು ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ.

ನಿನ್ನೆ ಪೊಲೀಸರ ಪ್ಲಾನ್ ‘ಎ’ ನಲ್ಲಿ ಹಲವು ನಟೋರಿಯಸ್​ಗಳು ಮಿಸ್ ಅಗಿದ್ದರು. ಹೀಗಾಗಿ ನಿನ್ನೆ ಸಿಗದವರನ್ನು ಮತ್ತೆ ಹುಡುಕಿ ಕರೆತರುವ ಬಗ್ಗೆ ಪ್ಲಾನ್ ಮಾಡಲಾಗುತ್ತಿದೆ. ಯಾರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಬಿಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಒಂದು ಸಾಕ್ಷಿ ಸಿಕ್ಕರೆ ಸಾಕು ಹುಡುಕಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.

ಕಮಲ್ ಪಂತ್ ಸೂಚನೆಯಂತೆ ರೌಡಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಜೈಲಿನೊಳಗೆ ಕುಳಿತು ಪ್ಲಾನ್ ಹಾಕುತ್ತಿದ್ದವರ ಮೇಲೆ ಕಣ್ಣಿಡಲು ಡಿಸಿಪಿ, ಎಸಿಪಿ ಮತ್ತು ಇನ್ಸ್​ಪೆಕ್ಟರ್​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕು ಒಬ್ಬ ರೌಡಿಗೆ ಏರಿಯ ಕಂಟ್ರೋಲ್ ತೆಗೆದುಕೊಳ್ಳಲು ಬಿಡಬಾರದೆಂದು ಸೂಚಿಸಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ 1,500 ರೌಡಿಗಳು ಪೊಲೀಸರ ವಶಕ್ಕೆ; 2 ಸಾವಿರ ರೌಡಿ ಶೀಟರ್ಸ್ ಮನೆ ಮೇಲೆ ದಾಳಿ

ಗಾಂಜಾ ಸೇವಿಸಿ ಬಂದ ರೌಡಿ ಶೀಟರ್​ಗೆ ಕಪಾಳಮೋಕ್ಷ ಮಾಡಿದ ಪೊಲೀಸರು!

(Bengaluru Police are planning to arrest rowdy sheeters who were not arrest in attack)

Published On - 11:06 am, Sun, 11 July 21