ಬೆಂಗಳೂರು: ಮನಃ ಪರಿವರ್ತನಾ ಕೇಂದ್ರದ ಮೇಲೆ ದಾಳಿ ಮಾಡಿದ ಪೊಲೀಸರು, ಜೂಜಾಡುತ್ತಿದ್ದ 14 ಜನರನ್ನು ಬಂಧಿಸಿದ್ದಾರೆ. ಬೆಂಗಳೂರಿನ ತುಂಗಾನಗರದಲ್ಲಿರುವ ಶ್ರೀ ಮಹದೇಶ್ವರ ಡಿ ಅಡಿಕ್ಷನ್ ಸೆಂಟರ್ ಮೇಲೆ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್ ನೇತೃತ್ವದ ತಂಡ ದಾಳಿ ಮಾಡಿದ್ದು, 28 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಹೊನ್ನಪ್ಪ ಎಂಬಾತನಿಗೆ ಸೇರಿದ ಡಿ ಅಡಿಕ್ಷನ್ ಸೆಂಟರ್ ಇದಾಗಿದ್ದು, ಸಂಬಂಧಿ ಅಶೋಕ್ ಈ ಸೆಂಟರ್ನ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದರು.
ಸದ್ಯ ಅಶೋಕ್ ಮತ್ತು ಹೊನ್ನಪ್ಪರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಗ್ಯಾಂಬಲಿಂಗ್ನಲ್ಲಿ ತೊಡಗಿದ್ದ 14 ಮಂದಿ ಪತ್ತೆಯಾಗಿದ್ದು, ಕೆಪಿ ಆ್ಯಕ್ಟ್ ಹಾಗೂ ಎನ್ಡಿಎಂಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಗುಟ್ಕಾ ತಯಾರಿಕೆ:
ಪರವಾನಗಿ ಇಲ್ಲದೇ ಗುಟ್ಕಾ ತಯಾರಿಸುತ್ತಿದ್ದ ಇಬ್ಬರನ್ನು ಜಿಲ್ಲೆಯ ಹಿಪ್ಪರಗಿ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾದರ್ ಬಾಷಾ, ಬಸವರಾಜ್ ಆವಟಿ ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದು, ಉಳಿದ ಆರೋಪಿಗಳಾದ ಮುಬಾರಕ್, ಸಂಗಮೇಶ್ ಪರಾರಿಯಾಗಿದ್ದಾರೆ. ಅಕ್ರಮವಾಗಿ ತಯಾರಿಸಿದ್ದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಗುಟ್ಕಾ ವಸ್ತುಗಳನ್ನು ಬಂಧಿತ ವ್ಯಕ್ತಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಗಳು ಪರವಾನಿಗೆ ಇಲ್ಲದೆ ಮಾವಾ ತಯಾರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ದಾಳಿ ವೇಳೆ 35 ಕೆಜಿ ಮಾವಾ, 80ಕೆ.ಜಿ ಅಡಿಕೆ, 2ಕೆಜಿ ತಂಬಾಕು,23 ಕೆ.ಜಿ ಸುಣ್ಣ 2 ಮೊಬೈಲ್ ಸೇರಿ 60 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಗುಟಖಾ ಜಫ್ತಿ ಮಾಡಿಕೊಳ್ಳಲಾಗಿದೆ.
ಲಾಕ್ಡೌನ್ ಇದ್ದರೂ ಸರ್ಕಾರಿ ಕಾರು ದುರ್ಬಳಕೆ
ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಬೇಕಾಬಿಟ್ಟಿಯಾಗಿ ಓಡಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ದಂಡವನ್ನು ಹಾಕಿ, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಯಾರಿಗೂ ಮುಲಾಜೇ ಮಾಡದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಹೀಗೆ ಅನಗತ್ಯವಾಗಿ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಾಗಿದೆ. ಹೀಗಿದ್ದೂ ಸರ್ಕಾರಿ ಸೇವೆಯಲ್ಲಿದ್ದ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನೊಬ್ಬ ಓಡಾಡುತ್ತಿದ್ದರು. ಅನಗತ್ಯವಾಗಿ ಕುಟುಂಬಸ್ಥರ ಜೊತೆ ಓಡಾಟ ನಡೆಸಿದ ಹಿನ್ನೆಲೆ ಪಿಡಬ್ಲೂಡಿಗೆ ಸೇರಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆ ಸೇವೆಯಲ್ಲಿದ್ದ ಕಾರಿನಲ್ಲಿ ಕುಟುಂಬದವರನ್ನು ಕರೆದುಕೊಂಡು ಚಾಲಕ ಹೋಗುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಅಂತ ಬೋರ್ಡ್ ಇದ್ದಿದ್ದರಿಂದ ಪೊಲೀಸರು ಹಿಡಿಯಲ್ಲಾ ಅಂತ ಚಾಲಕ ಓಡಾಡುತ್ತಿದ್ದರು. ಆದರೆ ಚಾಲಕನ ದುರ್ಬಳಕೆಯನ್ನು ಗಮನಿಸಿದ ಪೊಲೀಸರು ಕಾರ್ನ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ:
ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?
BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!