ಸೋಂಕಿತರ ಬಳಿ ಹೆಚ್ಚು ಹಣ ವಸೂಲಿ ಮಾಡುತ್ತಿದ ಆಸ್ಪತ್ರೆಗಳ ಮೇಲೆ ದಾಳಿ, ಹಣ ಮರುಪಾವತಿ ಮಾಡಿಸಿದ ಅಲೋಕ್ ಕುಮಾರ್

| Updated By: ಆಯೇಷಾ ಬಾನು

Updated on: Jun 02, 2021 | 1:41 PM

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್, ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಆಸ್ಪತ್ರೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಆಕ್ಸಿಜನ್, ಐಸಿಯು ಎಂಬ ಹೆಸರಲ್ಲಿ ಕೊರೊನಾ ಸೋಂಕಿತರ ಬಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದವರ ಬಳಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಣ ಮರುಪಾವತಿ ಮಾಡಿಸುತ್ತಿದ್ದಾರೆ.

ಸೋಂಕಿತರ ಬಳಿ ಹೆಚ್ಚು ಹಣ ವಸೂಲಿ ಮಾಡುತ್ತಿದ ಆಸ್ಪತ್ರೆಗಳ ಮೇಲೆ ದಾಳಿ, ಹಣ ಮರುಪಾವತಿ ಮಾಡಿಸಿದ ಅಲೋಕ್ ಕುಮಾರ್
ಅಲೋಕ್ ಕುಮಾರ್
Follow us on

ಬೆಂಗಳೂರು: ಕೊರೊನಾ ಸೋಂಕಿತರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದ ಆರೋಪ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿರುವ ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ.

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್, ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಆಸ್ಪತ್ರೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಆಕ್ಸಿಜನ್, ಐಸಿಯು ಎಂಬ ಹೆಸರಲ್ಲಿ ಕೊರೊನಾ ಸೋಂಕಿತರ ಬಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದವರ ಬಳಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಣ ಮರುಪಾವತಿ ಮಾಡಿಸುತ್ತಿದ್ದಾರೆ.

ಪ್ರತಿ ಗಂಟೆಗೆ ಆಕ್ಸಿಜನ್ ನೀಡಲು 1000 ರೂ. ಚಾರ್ಜ್ ಮಾಡಲಾಗುತ್ತಿದೆ. ಸುಖಾಸುಮ್ಮನೆ ಕೊರೊನಾ ಸೋಂಕಿತರಿಗೆ HIV ಟೆಸ್ಟ್ ಎಂದು ಆಸ್ಪತ್ರೆಯಿಂದ ಬಿಲ್ ಮಾಡಲಾಗುತ್ತಿದೆ. 84 ಗಂಟೆ ಆಕ್ಸಿಜನ್ ನೀಡಿದ್ದಕ್ಕೆ 84 ಸಾವಿರ ರೂ. ಬಿಲ್ ಮಾಡಲಾಗಿದೆ. ಆಕ್ಸಿಜನ್ ಹೆಸರಲ್ಲಿ 40-50 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದವರಿಗೆ ಪೊಲೀಸ್ ಇಲಾಖೆ ಬುದ್ದಿ ಕಲಿಸಿದೆ.

ಇದನ್ನೂ ಓದಿ: ಅಕ್ರಮ ಗುಟ್ಕಾ ತಯಾರಿಕೆ; ಪೊಲೀಸ್ ದಾಳಿಯಲ್ಲಿ 60 ಸಾವಿರಕ್ಕೂ ಹೆಚ್ಚು ಬೆಲೆ‌ ಬಾಳುವ ಗುಟ್ಕಾ ಜಫ್ತಿ

Published On - 1:39 pm, Wed, 2 June 21