ಚಿಕ್ಕಮಗಳೂರು: ರೈತರಿಂದ ಹಾಲು ಖರೀದಿಸಲು ಡೇರಿ ಸಿಬ್ಬಂದಿ ನಿರಾಕರಣೆ; ಕಂಗಾಲಾಗಿರುವ ರೈತರು

ಚಿಕ್ಕಮಗಳೂರು: ರೈತರಿಂದ ಹಾಲು ಖರೀದಿಸಲು ಡೇರಿ ಸಿಬ್ಬಂದಿ ನಿರಾಕರಣೆ; ಕಂಗಾಲಾಗಿರುವ ರೈತರು
ಗಿಡಕ್ಕೆ ಹಾಲನ್ನು ಹಾಕುತ್ತಿರುವ ರೈತ

ಲಾಕ್​ಡೌನ್​ನಿಂದ ಕೂಲಿಯೂ ಇಲ್ಲ. ಊಟಕ್ಕೂ ಪರದಾಡುವಂತಾಗಿದೆ. ಸಾಲ ಕಟ್ಟಬೇಕು, ಹಸುವಿಗೆ ಫುಡ್ ತರಬೇಕು. ಈ ನಡುವೆ ಡೇರಿ ಸಿಬ್ಬಂದಿ ಹಾಲನ್ನು ನಿರಾಕರಿಸುತ್ತಿದ್ದಾರೆ. ಲಾಕ್​ಡೌನ್​ ನಡುವೆ ಹಾಲು ಮಾರಾಟ ಮಾಡಿ ಜೀವನ ನಡೆಸಬಹುದು ಎಂದು ಯೋಚಿಸಿದ್ದೆವು ಎಂದು ರೈತರು ಹೇಳುತ್ತಿದ್ದಾರೆ.

TV9kannada Web Team

| Edited By: sandhya thejappa

Jun 02, 2021 | 12:51 PM

ಚಿಕ್ಕಮಗಳೂರು: ತಾಲೂಕಿನ ತೇಗೂರು ಗ್ರಾಮದಲ್ಲಿ ರೈತರಿಂದ ಹಾಲು ಖರೀದಿಸಲು ಡೇರಿ ಸಿಬ್ಬಂದಿ ನಿರಾಕರಿಸಿದ್ದು, ರೈತರು ಕಂಗಾಲಾಗಿದ್ದಾರೆ. ನೀವು ಡೇರಿಯಲ್ಲಿ ಜಾನುವಾರುಗಳ ಫುಡ್ ಖರೀದಿಸಲ್ಲ. ಹೀಗಾಗಿ ನೀವು ತರುವ ಹಾಲನ್ನು ನಾವು ಖರೀದಿಸುವುದಿಲ್ಲ ಎಂದು ಡೇರಿ ಸಿಬ್ಬಂದಿ ಹೇಳುತ್ತಿದ್ದಾರೆ. ತೇಗೂರು, ಗವನಹಳ್ಳಿ, ನಲ್ಲೂರು ಗ್ರಾಮದ ರೈತರಿಗಾಗಿ ಇರುವ ಡೇರಿ ಸಿಬ್ಬಂದಿಯ ಈ ನಡೆಯಿಂದ ಕಂಗಾಲಾದ ರೈತರು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಲನ್ನು ಗಿಡಗಳಿಗೆ ಸುರಿಯುತ್ತಿದ್ದಾರೆ.

ಲಾಕ್​ಡೌನ್​ನಿಂದ ಕೂಲಿಯೂ ಇಲ್ಲ. ಊಟಕ್ಕೂ ಪರದಾಡುವಂತಾಗಿದೆ. ಸಾಲ ಕಟ್ಟಬೇಕು, ಹಸುವಿಗೆ ಫುಡ್ ತರಬೇಕು. ಈ ನಡುವೆ ಡೇರಿ ಸಿಬ್ಬಂದಿ ಹಾಲನ್ನು ನಿರಾಕರಿಸುತ್ತಿದ್ದಾರೆ. ಲಾಕ್​ಡೌನ್​ ನಡುವೆ ಹಾಲು ಮಾರಾಟ ಮಾಡಿ ಜೀವನ ನಡೆಸಬಹುದು ಎಂದು ಯೋಚಿಸಿದ್ದೆವು. ಆದರೆ ಹಾಲು ಡೇರಿ ಸಿಬ್ಬಂದಿಯ ಈ ನಿರ್ಧಾರದಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ರೈತರು ಕಂಗಾಲಾಗಿದ್ದಾರೆ.

ಬಿತ್ತನೆ ಬೀಜ ಸಿಗದ ಹಿನ್ನೆಲೆ ಅಧಿಕಾರಿಗಳ ಜೊತೆ ವಾಗ್ವಾದ ಬಾಗಲಕೋಟೆ: ಬಿತ್ತನೆ ಬೀಜ ಸಿಗದಿದ್ದರಿಂದ ಜಿಲ್ಲೆಯ ಮುಧೋಳದಲ್ಲಿ ರೈತರು ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ. ರೈತರು ಸೋಯಾ ಬಿತ್ತನೆ ಬೀಜಕ್ಕೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಲೆದಾಡುತ್ತಿದ್ದಾರೆ. ಬಿತ್ತನೆ ಬೀಜ ಪರೀಕ್ಷೆ ಆಗದ ಹಿನ್ನೆಲೆ ವಿತರಣೆ ವಿಳಂಬವಾಗುತ್ತಿದ್ದು, ಪರೀಕ್ಷೆ ವರದಿ ಬಂದ ಮೇಲೆ ಬೀಜ ವಿತರಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸೋಯಾ ಬಿತ್ತನೆ ಬೀಜಕ್ಕಾಗಿ ರೈತರು ಪರದಾಟ ಪಡುವಂತಾಗಿದೆ. ಹಳ್ಳಿಯಿಂದ ಬರುವ ರೈತರಿಗೆ ಬೀಜ ಸಿಗದೇ ವಾಪಸ್ ಹೋಗುವ ಪರಿಸ್ಥಿತಿ ಎದುರಾಗಿದೆ.

ಹತ್ತಕ್ಕೂ ಹೆಚ್ಚು ರೈತರಿಂದ ಬೆಳೆ ನಾಶ ಧಾರವಾಡ: ಬೆಲೆ ಕುಸಿದ ಹಿನ್ನೆಲೆ 10ಕ್ಕೂ ಹೆಚ್ಚು ರೈತರು ಹಸಿ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ್ದಾರೆ. ಕೆಜಿಗೆ 5 ರೂ.ಗಿಂತ ಕಡಿಮೆ ಬೆಲೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯನ್ನು ಯಾರು ಕೇಳುತ್ತಿಲ್ಲ. ತಾಲೂಕಿನ ಅಮ್ಮಿನಬಾವಿ ರೈತರು ಎಕರೆಗೆ 25 ಸಾವಿರದಷ್ಟು ಖರ್ಚು ಮಾಡಿದ್ದರು. ಹಾಕಿದ ಬಂಡವಾಳವೂ ಬಾರದ ಹಿನ್ನೆಲೆ ರೈತರು ಟ್ರ್ಯಾಕ್ಟರ್​ನಿಂದ ಬೆಳೆ ನಾಶ ಮಾಡಿದ್ದಾರೆ.

ಇದನ್ನೂ ಓದಿ

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ

 ಸೇವಾ ಸಿಂಧು ಪೋರ್ಟಲ್​ನಲ್ಲಿ ತಾಂತ್ರಿಕ ದೋಷಗಳು: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು ಅಂತಿದ್ದಾರೆ ಚಾಲಕರು

(Chikmagalur Milk Dairy staff are refusing to buy milk from farmers)

Follow us on

Related Stories

Most Read Stories

Click on your DTH Provider to Add TV9 Kannada