ಸೇವಾ ಸಿಂಧು ಪೋರ್ಟಲ್​ನಲ್ಲಿ ತಾಂತ್ರಿಕ ದೋಷಗಳು: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು ಅಂತಿದ್ದಾರೆ ಚಾಲಕರು

 ಸೇವಾ ಸಿಂಧು ಪೋರ್ಟಲ್​ನಲ್ಲಿ ತಾಂತ್ರಿಕ ದೋಷಗಳು: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು ಅಂತಿದ್ದಾರೆ ಚಾಲಕರು
ಸೇವಾಸಿಂಧು ಪೋರ್ಟಲ್

Seva Sindhu portal: ಎಲ್ಲಾ ಡೀಟೆಲ್ಸ್ ಅಪ್ಲೋಡ್​ ಮಾಡಿದ್ರು ಕೂಡ ಕೊನೆಯಲ್ಲಿ ಅಪ್ಲಿಕೇಶನ್ ಸೆಂಡ್ ಆಗದೇ ವೈಟಿಂಗ್ ಆಪ್ಷನ್ ಬರುತ್ತಿದೆ. ಸರ್ಕಾರ ಈ ರೀತಿಯ ಪರಿಹಾರ ಘೋಷಣೆ ಮಾಡಿ ಕಣ್ಣೊರೆಸುವ ತಂತ್ರ ಮಾಡ್ತಿದೆ ಅಂತಾ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರಿಯಾದ ವ್ಯವಸ್ಥೆ ಕೋರಿ ಸರ್ಕಾರಕ್ಕೆ ಆಟೋ ಅಸೋಸಿಯೇಷನ್‌ಗಳು ಒತ್ತಾಯ ಮಾಡಿವೆ.

TV9kannada Web Team

| Edited By: sadhu srinath

Jun 02, 2021 | 10:35 AM

ಬೆಂಗಳೂರು: ಅದೇನೋ ಹೇಳ್ತಾರಲ್ಲ… ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲೊಲ್ಲ ಹಾಗಾಯ್ತು ಸದ್ಯಕ್ಕೆ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಆಟೋ‌, ಟ್ಯಾಕ್ಸಿ ಚಾಲಕರ ಜೀವನ. ರಾಜ್ಯದಲ್ಲಿ ಲಾಕ್​ಡೌನ್​​​ನಿಂದಾಗಿ ವಾಹನಗಳನ್ನು ಬಾಡಿಗೆ ಓಡಿಸಲು ಆಗುತ್ತಿಲ್ಲ. ಜೀವನ ದುಸ್ತರವಾಗಿದೆ. ಹಾಗಾಗಿ ನೆರವಿಗೆ ಬನ್ನಿ ಎಂದು ಚಾಲಕರು ಸರ್ಕಾರಕ್ಕೆ ಮೊರೆಯಿಟ್ಟಿದ್ದರು. ಕಳೆದ ಬಾರಿಯಂತೆ ಸರ್ಕಾರವೂ ಅದಕ್ಕೆ (covid 19 relief) ಅಸ್ತು ಎಂದಿದ್ದು, ಅದಕ್ಕೊಂದು ವ್ಯವಸ್ಥೆ ಅಂತಾ ಕಂಪ್ಯೂಟರ್​ ಸಾಫ್ಟ್​​ವೇರ್​​ ಒದಗಿಸಿತ್ತು. ಆದರೆ ಅದೀಗ ತಾಂತ್ರಿಕ ದೋಷದಿಂದಾಗಿ ಕೆಟ್ಟುಕೂತಿದೆ. ಹಾಗಾಗಿ ಚಾಲಕರು ಇನ್ನೂ ಆರ್ಥಿಕ ನೆರವಿಗೆ ಕಾಯಬೇಕಿದೆ.

ಆಟೋ‌, ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದ ಸಹಾಯ ಧನ‌ ನೀಡುವ ಹಿನ್ನೆಲೆ ಸೇವಾ ಸಿಂಧು ಪೋರ್ಟಲ್‌ನಲ್ಲಿ (Seva Sindhu portal) ಸರ್ಕಾರ ಅರ್ಹ ಚಾಲಕರಿಂದ ಅರ್ಜಿ ಆಹ್ವಾನಿಸಿತ್ತು. ಆದರೆ ಈ ಪೋರ್ಟಲ್‌ನಲ್ಲಿ ಅರ್ಜಿ ಹಾಕಲು ಇದೀಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಚಾಲಕರು ಎಲ್ಲ ಮಾಹಿತಿ ಅಪ್ಲೋಡ್ ಮಾಡಿದ್ರೂ ಸೇವಾ ಸಿಂಧು ಪೋರ್ಟಲ್‌ ಕೊನೆಯಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ.

ಅರ್ಜಿ ಸಲ್ಲಿಸುವ ವೇಳೆ ಚಾಲಕರ ಡಿಎಲ್, ಚಾಸಿ ನಂಬರ್, ಬ್ಯಾಡ್ಜ್ ನಂಬರ್, ವೆಹಿಕಲ್ ನಂಬರ್, ಆಧಾರ್ ಅಪ್ಲೋಡ್ ಮಾಡಬೇಕು.ಅವಿಷ್ಟೂ ಆಧಾರ್ ಕಾರ್ಡ್‌ನಲ್ಲಿ ಮಾಹಿತಿಯಂತೆ ಸೇಮ್ ಇರಬೇಕು. DLನಲ್ಲಿ ಎಂ ಕ್ಯಾಬ್ ಅಂತ ಮಾತ್ರ ಇರಬೇಕು. ಆದ್ರೆ ಕೆಲ ಚಾಲಕರು ಕ್ಯಾಬ್, ಹೆವಿ ವೆಹಿಕಲ್ ಓಡಿಸುತ್ತಾರೆ. ಅಂತಹವರು ಅರ್ಜಿಯನ್ನು ಸಲ್ಲಿಸಲು ಆಗುತ್ತಿಲ್ಲ. ವಾಹನದ ಸಂಖ್ಯೆ, ಚಾಸಿ ನಂಬರ್ ಅಪ್ಲೋಡ್ ಮಾಡಬೇಕು. ಆದ್ರೆ ಕೆಲವರ ಬಳಿ ಸ್ವಂತ ವಾಹನ ಇಲ್ಲದೇ ಚಾಲಕರಾಗಿದ್ದಾರೆ. ಅಂತಹವರಿಗೂ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಓನರ್ ಕಂ ಡ್ರೈವರ್‌ಗಳು ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಹೀಗಾಗಿ ಸಹಾಯಧನಕ್ಕೆ ಅರ್ಜಿ ಹಾಕಲು ಚಾಲಕರು ಪರದಾಡುವಂತಾಗಿದೆ.

ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು ಅಂತಿದ್ದಾರೆ ಚಾಲಕರು ಇನ್ನು, ಎಲ್ಲಾ ಡೀಟೆಲ್ಸ್ ಅಪ್ಲೋಡ್​ ಮಾಡಿದ್ರು ಕೂಡ ಕೊನೆಯಲ್ಲಿ ಅಪ್ಲಿಕೇಶನ್ ಸೆಂಡ್ ಆಗದೇ ವೈಟಿಂಗ್ ಆಪ್ಷನ್ ಬರುತ್ತಿದೆ. ಆಗ ಮತ್ತೆ ಮೊದಲಿನಿಂದ ಎಲ್ಲಾ ದಾಖಲೆ ಅಪ್ಲೋಡ್ ಮಾಡಬೇಕು! ಹಾಗೆಯೇ ಮಾಡಿದರೂ this Page isn’t responding ಅಂತ ತೋರಿಸುತ್ತೆ! ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಅಂತಿದ್ದಾರೆ ಚಾಲಕರು.

ರಾಜ್ಯದ್ಯಾಂತ 7.75 ಲಕ್ಷ ಆಟೋ ಟ್ಯಾಕ್ಸಿ ಚಾಲಕರಿದ್ದಾರೆ. ಆದ್ರೆ ಪರಿಹಾರ ಘೋಷಣೆ ಆಗಿರೋದು ಕೇವಲ 2.10 ಲಕ್ಷ ಚಾಲಕರಿಗೆ ಮಾತ್ರ. ಉಳಿದ 5.65 ಲಕ್ಷ ಚಾಲಕರಿಗೆ ಅರ್ಜಿ ಹಾಕಲು ಅವಕಾಶವೇ ಇಲ್ಲವಾಗಿದೆ. ಕಳೆದ ಬಾರಿಯ ಪರಿಹಾರ ಕೇವಲ 2.10 ಲಕ್ಷ ಜನರಿಗೆ ತಲುಪಿತ್ತು. ಅದರ ಆಧಾರದ ಮೇಲೆ ಸರ್ಕಾರ ಈ ಬಾರಿಯೂ ಕೇವಲ 2.10 ಲಕ್ಷ ಜನರಿಗೆ ಪರಿಹಾರ ಘೋಷಣೆ ಮಾಡಿದಂತಿದೆ. ಸರ್ಕಾರ ಈ ರೀತಿಯ ಪರಿಹಾರ ಘೋಷಣೆ ಮಾಡಿ ಕಣ್ಣೊರೆಸುವ ತಂತ್ರ ಮಾಡ್ತಿದೆ ಅಂತಾ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಸೇವಾ ಸಿಂಧು ಪೋರ್ಟಲ್‌  ನಲ್ಲಿ ಸರಿಯಾದ ವ್ಯವಸ್ಥೆ ಕೋರಿ ಸರ್ಕಾರಕ್ಕೆ ಆಟೋ ಅಸೋಸಿಯೇಷನ್‌ಗಳು (https://sevasindhu.karnataka.gov.in/Sevasindhu/English) ಒತ್ತಾಯ ಮಾಡಿವೆ.

(Seva Sindhu portal not working properly allege taxi drivers unions in karnataka) ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಕರ್ನಾಟಕ ಸರ್ಕಾರದ ಕೋವಿಡ್ ಪ್ಯಾಕೇಜ್ ರೂ. 3000 ಪಡೆಯುವುದು ಹೇಗೆ?

Follow us on

Related Stories

Most Read Stories

Click on your DTH Provider to Add TV9 Kannada