AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Warrior: ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ವೈದ್ಯರಿಗೆ ಪತ್ರ; ಡಿಮ್ಹಾನ್ಸ್ ಸಿಬ್ಬಂದಿ ನಿಸ್ವಾರ್ಥ ಸೇವೆಗೆ ಧನ್ಯವಾದ

ಧಾರವಾಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಶಿಶುಗಳ ವಿಭಾಗ (ಎಂ.ಸಿ.ಹೆಚ್.)ಕ್ಕಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು, ಈ ಕಟ್ಟಡಗಳನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. ಬಳಿಕ ನೂರು ಹಾಸಿಗೆಯ ಈ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು.

Corona Warrior: ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ವೈದ್ಯರಿಗೆ ಪತ್ರ; ಡಿಮ್ಹಾನ್ಸ್ ಸಿಬ್ಬಂದಿ ನಿಸ್ವಾರ್ಥ ಸೇವೆಗೆ ಧನ್ಯವಾದ
ಕೊರೊನಾ ಸೋಂಕಿತರೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತಿರುವ ಡಿಮ್ಹಾನ್ಸ್ ಸಿಬ್ಬಂದಿ
Follow us
TV9 Web
| Updated By: preethi shettigar

Updated on: Jun 02, 2021 | 9:38 AM

ಧಾರವಾಡ: ಕೊರೊನಾ ಎರಡನೇ ಅಲೆಯ ಹೋರಾಟಕ್ಕೆ ಇಡಿ ದೇಶವೇ ಸನ್ನದ್ಧವಾಗಿದೆ. ಅದರಲ್ಲೂ ಕೊವಿಡ್ ನಿಯಂತ್ರಣಕ್ಕಾಗಿ ಮತ್ತು ಕೊರೊನಾ ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡುವ ಈ ಹೋರಾಟದಲ್ಲಿ ವೈದ್ಯರು ಹಾಗೂ ನರ್ಸ್​ಗಳು ಮುಂಚೂಣಿಯಲ್ಲಿದ್ದಾರೆ. ರೋಗಿಯನ್ನು ದಾಖಲು ಮಾಡಿದಾಗಿನಿಂದ ರೋಗಿ ಗುಣಮುಖನಾಗಿ ಡಿಸ್ಚಾರ್ಜ್ ಆಗುವವರೆಗೂ ಇವರು ನೀಡುವ ಸೇವೆ ಅನನ್ಯ. ಅದರಲ್ಲೂ ಕೊವಿಡ್​ ಸೋಂಕಿಗೆ ತುತ್ತಾದವರು ಇತ್ತೀಚೆಗೆ ಮಾನಸಿಕವಾಗಿ ಹೆಚ್ಚು ಕುಗ್ಗಿಹೋಗುತ್ತಿದ್ದರೆ. ಇಂಥವರ ಆರೈಕೆಯಲ್ಲಿ ಕೂಡ ವೈದರ ಪಾಲು ಪ್ರಶಂಸನೀಯವಾಗಿದೆ. ಅದರಂತೆ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಆರಂಭವಾಗಿರುವ ಡಿಮ್ಹಾನ್ಸ್ ಸಿಬ್ಬಂದಿ ನಿರ್ವಹಿಸುತ್ತಿರುವ ಕೊವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಜೊತೆಗೆ ಆಪ್ತ ಸಮಾಲೋಚನೆ ಸಹಾಯವೂ ಸಿಗುತ್ತಿದೆ. ಇದುವರೆಗೂ ಕೇವಲ ಮಾನಸಿಕ ರೋಗಿಗಳಿಗೆ ಸೀಮಿತವಾಗಿದ್ದ ಡಿಮ್ಹಾನ್ಸ್ ಸಿಬ್ಬಂದಿಯ ಸೇವೆ ಇದೀಗ ಕೊರೊನಾ ಸೋಂಕಿತರಿಗೂ ಸಿಗುತ್ತಿದೆ.

ತಾಯಿ ಮತ್ತು ಶಿಶುಗಳ ವಿಭಾಗದ ಕಟ್ಟಡದಲ್ಲಿರುವ ಕೊವಿಡ್ ಆಸ್ಪತ್ರೆ ಧಾರವಾಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಶಿಶುಗಳ ವಿಭಾಗ (ಎಂ.ಸಿ.ಹೆಚ್.)ಕ್ಕಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು, ಈ ಕಟ್ಟಡಗಳನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಯಿತು. ನೂರು ಹಾಸಿಗೆಯ ಈ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು.

ಮೊದಲಿಗೆ 100 ಬೆಡ್​ಗಳ ಆಸ್ಪತ್ರೆಯಾಗಿತ್ತು, ಬಳಿಕ 25 ಬೆಡ್​ಗಳನ್ನು ಇಲ್ಲಿ ಹೆಚ್ಚಿಸಲಾಯಿತು. ಇದರಲ್ಲಿ 25 ಬೆಡ್​ಗಳಿಗೆ ಆಕ್ಸಿಜನ್ ವ್ಯವಸ್ಥೆಯನ್ನು ಕೂಡ ಮಾಡಲಾಯಿತು. ಎಲ್ಲ ಮೂಲಭೂತ ವ್ಯವಸ್ಥೆಯೇನೋ ಆಯಿತು. ಆದರೆ ಇಲ್ಲಿ ದಾಖಲಾಗುವ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುವವರು ಯಾರು ಎನ್ನುವ ಪ್ರಶ್ನೆ ಎದುರಾಯಿತು. ಜಿಲ್ಲಾಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಅದಾಗಲೇ ಆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಎಲ್ಲರ ಗಮನಕ್ಕೆ ಬಂದಿದ್ದು ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜಾನ ಸಂಸ್ಥೆ(ಡಿಮ್ಹಾನ್ಸ್). ಮಾನಸಿಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಡಿಮ್ಹಾನ್ಸ್ ಸಿಬ್ಬಂದಿಗೇಕೆ ಈ ಆಸ್ಪತ್ರೆಯ ನಿರ್ವಹಣಾ ಜವಾಬ್ದಾರಿಯನ್ನು ನೀಡಬಾರದು ಎನ್ನುವ ಮಾತು ಕೇಳಿಬಂತ್ತು. ಈ ಬಗ್ಗೆ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಅವರು ತಮ್ಮ ಸಿಬ್ಬಂದಿ ಜೊತೆ ಚರ್ಚಿಸಿದರು ಮತ್ತು ಇಲ್ಲಿನ ಸಿಬ್ಬಂಧಿಗಳು ಇದನ್ನೊಂದು ಸವಾಲಾಗಿ ಸ್ವೀಕರಿಸಿದರು.

ಡಿಮ್ಹಾನ್ಸ್ ಸಿಬ್ಬಂದಿಗೆ ತರಬೇತಿ ಡಿಮ್ಹಾನ್ಸ್​ನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ನುರಿತ ಸಿಬ್ಬಂದಿ ಇದ್ದಾರೆ. ಅತ್ಯುತ್ತಮ ಪರಿಣಿತ ವೈದ್ಯರ ಪಡೆಯೇ ಇಲ್ಲಿದೆ. ಅವರಿಗೆ ಕೊರೊನಾ ಹಾಗೂ ಅದರ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಯಿತು. ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಅವರ ಮಾರ್ಗದರ್ಶನದಂತೆ ಹೆಸರಾಂತ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಅದಾಗಲೇ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಅನುಭವ ಹೊಂದಿರುವ ಸಿಬ್ಬಂದಿಗೆ ಈ ಕೆಲಸ ಅಷ್ಟೇನೂ ಕಷ್ಟಕರ ಎನ್ನಿಸಲೇ ಇಲ್ಲ. ಇನ್ನುಳಿದಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ್ ಸಹಕಾರದಿಂದ ಇಲ್ಲಿ ನಿತ್ಯವೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಡಿಮ್ಹಾನ್ಸ್ ಮೂಲದವರು. ಹೀಗಾಗಿ ಈ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಕೊವಿಡ್ ಚಿಕಿತ್ಸೆ ಜೊತೆಗೆ ಆಪ್ತ ಸಮಾಲೋಚನೆಯೂ ಶುರುವಾಯಿತು. ನೋಡಲ್ ಅಧಿಕಾರಿ ಡಾ. ಆದಿತ್ಯ ಪಾಂಡುರಂಗಿ ಹಾಗೂ ಸಿಬ್ಬಂದಿ, ದಾಖಲಾಗಿರುವ ರೋಗಿಗಳಿಗೆ ಧೈರ್ಯಗೆಡದಂತೆ ಸಲಹೆ ನೀಡುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದೆ ಅನ್ನುತ್ತಿದ್ದಂತೆಯೇ ಅನೇಕರು ಭಯದಿಂದಲೇ ಆರೋಗ್ಯವನ್ನು ಕೆಡಿಸಿಕೊಂಡು ಬಿಡುತ್ತಾರೆ. ಆದರೆ ಇಲ್ಲಿಗೆ ಸೋಂಕಿತ ದಾಖಲಾಗುತ್ತಿದ್ದಂತೆಯೇ ಆತನಿಗೆ ಮೊದಲಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ.

ಇದರಿಂದಾಗಿ ಆತನ ಮನೋಸ್ಥೈರ್ಯ ಹೆಚ್ಚಾಗಿ, ಆತ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾನೆ. ಇದು ರೋಗಿಗಳ ವಿಚಾರವಾದರೆ, ರೋಗಿಗಳೊಂದಿಗೆ ಆಗಮಿಸಿರುವ ಸಂಬಂಧಿಕರು ಆಸ್ಪತ್ರೆಯ ಹೊರಗೆ ಆತಂಕದಿಂದ ಕಾಲ ಕಳೆಯುತ್ತಿರುತ್ತಾರೆ. ಅಂಥವರಿಗೂ ಕೂಡ ಸಿಬ್ಬಂದಿ ಆಪ್ತ ಸಮಾಲೋಚನೆ ಮಾಡುತ್ತಾರೆ. ಇದರಿಂದಾಗಿ ಅವರ ದುಗುಡವೂ ಕಡಿಮೆಯಾಗುತ್ತದೆ. ಕೊರೊನಾಕ್ಕೆ ಚಿಕಿತ್ಸೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರಿಗೆ ಆಪ್ತ ಸಮಾಲೋಚನೆ ಎನ್ನುವುದು ಹಲವಾರು ಪ್ರಕರಣಗಳಲ್ಲಿ ಕಂಡು ಬಂದಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಜತೆಗೆ ಅವರ ಕುಟುಂಬದ ಸದಸ್ಯರಿಗೆ ಸಮೂಹ ಆಪ್ತಸಮಾಲೋಚನೆ ಮೂಲಕ ಆತ್ಮಸ್ಥೈರ್ಯ ತುಂಬುವ ಈ ಕಾರ್ಯಕ್ಕೆ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ಚಿಕಿತ್ಸೆ ನೆನೆದು ಪತ್ರ ಬರೆದ ಸೋಂಕಿತ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋದಾಗ ಬೆಡ್​ಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಕೊವಿಡ್ ಆಸ್ಪತ್ರೆಯನ್ನು ಆರಂಭಿಸಲಾಯಿತು. ಇದಕ್ಕೆ ಜಿಲ್ಲಾಸ್ಪತ್ರೆಯು ಕಟ್ಟಡ ಹಾಗೂ ಆಕ್ಸಿಜನ್ ಪೂರೈಕೆ, ಮೂಲಭೂತ ಸೌಕರ್ಯ ಒದಗಿಸಿತು. ಹುಬ್ಬಳ್ಳಿಯ ಕಿಮ್ಸ್ ನಾಲ್ಕು ಜನ ಫಿಜಿಸಿಯನ್‍ಗಳನ್ನು ನಿಯೋಜಿಸಿತು. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯೇ ಉಳಿದ ಸಿಬ್ಬಂದಿಯನ್ನು ನಿಯೋಜಿಸಿತು. ಒಟ್ಟು 26 ಜನ ಡ್ಯೂಟಿ ವೈದ್ಯರು, ನರ್ಸಿಂಗ್ ಹಾಗೂ ಸಹಾಯಕ ಸಿಬ್ಬಂದಿ ನಿಯೋಜಿಸಿ ಆಸ್ಪತ್ರೆಯ ಉಸ್ತುವಾರಿಯನ್ನೂ ಕೂಡ ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಸಿಗುತ್ತಿರುವ ಚಿಕಿತ್ಸೆಯನ್ನು ನೆನೆದು ಸೋಂಕಿತನೊಬ್ಬ ಪತ್ರ ಬರೆದಿದ್ದಾನೆ. ಆ ಪತ್ರವೇ ಇದೀಗ ಇಲ್ಲಿನ ಸಿಬ್ಬಂದಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಸಿಬ್ಬಂದಿಗೆ ಬರೆದ ಪತ್ರದಲ್ಲಿ ಏನಿದೆ? ಧಾರವಾಡ ಜಿಲ್ಲೆಯ ವ್ಯಕ್ತಿಯೊಬ್ಬ ಸೋಂಕಿತನಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದ. ಒಂದು ವಾರದ ಕಾಲ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹೋಗುವಾಗ, ಆ ಪತ್ರವೊಂದನ್ನು ಅಲ್ಲಿದ್ದ ಸಿಬ್ಬಂದಿ ಕೈಯಲ್ಲಿ ನೀಡಿ ಹೋಗಿದ್ದ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಈ ರೀತಿ ಬರೆಯಲಾಗಿತ್ತು. “ಇಲ್ಲಿನ ಆಸ್ಪತ್ರೆಯ ಸೌಲಭ್ಯ, ಸಿಬ್ಬಂದಿ ವರ್ಗ ಹಾಗೂ ವೈದ್ಯರ ಸೇವೆ ಅಮೋಘವಾದದ್ದು. ಇಲ್ಲಿನ ವಾತಾವರಣದಿಂದಾಗಿ ಕೊವಿಡ್ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಈ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ. ಇಲ್ಲಿನ ಸರ್ವ ಸಿಬ್ಬಂದಿಗೆ ಧನ್ಯವಾದಗಳು”.

ಕೊವಿಡ್ ಸೋಂಕು ದೃಢಪಟ್ಟಾಗ ಎಂತಹ ವ್ಯಕ್ತಿಗಳೂ ಕೂಡ ಕುಗ್ಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಕೊವಿಡ್ ಸೋಂಕಿತರು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಆತಂಕ ಉಂಟಾಗುವುದು ಸಹಜ. ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಲ್ಲಿ ಭರವಸೆ ಹೆಚ್ಚಿಸಲು ಸೈಕೋಥೆರಪಿ ಹಾಗೂ ಸಮೂಹ ಆಪ್ತ ಸಮಾಲೋಚನೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸೋಂಕಿತರು ಹಾಗೂ ಆರೈಕೆದಾರರು ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂ ಪ್ರೇರಿತರಾಗಿ ಲಿಖಿತ ಅಭಿಪ್ರಾಯ ವ್ಯಕ್ತಪಡಿಸಿರುವುದು ನಮಗೂ ಉತ್ಸಾಹ ಹೆಚ್ಚಿಸಿದೆ. ಅದರಲ್ಲೂ ಕೆಲವರು ಬರೆದಿರುವ ಪತ್ರವನ್ನು ನೋಡಿ ನಮಗೆ ಮತ್ತಷ್ಟು ಸೇವೆ ನೀಡುವ ಉತ್ಸಾಹ ಹೆಚ್ಚಾಗಿದೆ ಎಂದು ಡಿಮ್ಹಾನ್ಸ್ ಕೊವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ. ಆದಿತ್ಯ ಪಾಂಡುರಂಗಿ ಹೇಳಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಇಡೀ ವೈದ್ಯಕೀಯ ಲೋಕವೇ ಸೇವೆಗೆ ನಿಂತಿದೆ. ವೈದ್ಯಕೀಯ ಸಿಬ್ಬಂದಿ ತಮ್ಮ ಇಡೀ ಬದುಕನ್ನು ಕೊರೊನಾ ಸೋಂಕಿತರ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ನಮಗೂ ಕೂಡ ಕೊರೊನಾ ಪೀಡಿತರ ಸೇವೆಗೆ ಅವಕಾಶ ಸಿಕ್ಕಿದೆ. ಆಸ್ಪತ್ರೆಗೆ ಆತಂಕದಿಂದ ಬಂದ ಸೋಂಕಿತರು ಗುಣಮುಖರಾಗಿ ಹೋಗುವಾಗ ಅವರ ಮುಖದಲ್ಲಿನ ನೆಮ್ಮದಿ ನೋಡಿ ನಮಗೂ ಖುಷಿಯಾಗುತ್ತದೆ. ಅವರು ಹಾಗೂ ಅವರ ಕುಟುಂಬಸ್ಥರು ನಮ್ಮ ಸಿಬ್ಬಂದಿಗೆ ಕೈ ಮುಗಿದು ಹೇಳುವ ಧನ್ಯವಾದಗಳಿಂದ ನಾವು ಮತ್ತಷ್ಟು ಉತ್ಸಾಹ ಪಡೆದುಕೊಳ್ಳುತ್ತಿದ್ದೇವೆ. ಕೆಲವರಂತೂ ನಮ್ಮನ್ನು ದೇವರಂತೆ ಕಾಣುವುದನ್ನು ನೋಡಿಯೇ ಖುಷಿಯಾಗುತ್ತಿದೆ. ಆರಂಭದಲ್ಲಿ ಈ ಸೇವೆ ನೀಡುವುದು ನಮಗೆ ಸವಾಲಾಗಿತ್ತು. ಆದರೆ ನಮ್ಮ ಸಂಸ್ಥೆಯ ಅಧಿಕಾರಿಗಳು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ಸಹಕಾರದಿಂದ ನಾವು ಸಾಕಷ್ಟು ಸೇವೆ ನೀಡಿರುವ ನೆಮ್ಮದಿ, ತೃಪ್ತಿ ಇದೆ. ಇಂಥ ವೇಳೆ ನಮಗೂ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ನರ್ಸಿಂಗ್ ವಿಭಾಗದ ಸೂಪರ್​ವೈಸರ್ ಡಾ. ಸುನಂದಾ ಜಿ.ಟಿ. ಅಭಿಪ್ರಾಯಪಟ್ಟಿದ್ದಾರೆ

ಕೊರೊನಾ ಎನ್ನುವುದು ಮೆಡಿಕಲ್ ಎಮರ್ಜೆನ್ಸಿ. ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಯ ಸೇವೆಯನ್ನು ಕೂಡ ಪಡೆದುಕೊಳ್ಳಲು ಜಿಲ್ಲಾಡಳಿತದಿಂದ ಮನವಿ ಬಂದಾಗ ನಮಗೂ ಕೊಂಚ ಆತಂಕವಾಗಿತ್ತು. ಆದರೆ ಈ ವೇಳೆಯಲ್ಲಿ ನಮ್ಮ ಸೇವೆಯ ಅಗತ್ಯವನ್ನು ಅರಿತು ಸಿಬ್ಬಂದಿಗೆ ತರಬೇತಿ ನೀಡಿದೆವು. ನಮ್ಮವರು ಕೂಡ ಸೇವೆ ನೀಡಲು ಉತ್ಸುಕರಾಗಿದ್ದರು. ಇದನ್ನೊಂದು ಸವಾಲಾಗಿ ಸ್ವೀಕರಿಸಲು ಸಿದ್ಧರಾಗಿದ್ದರು. ಇದೇ ವೇಳೆ ನಮ್ಮ ಸಂಸ್ಥೆಯಲ್ಲಿನ ಅನೇಕ ತಜ್ಞರಿಂದ ಎಲ್ಲರಿಗೂ ತರಬೇತಿ ಕೊಡಿಸಲಾಯಿತು. ಕಳೆದೊಂದು ತಿಂಗಳಿನಿಂದ ಸೇವೆ ನೀಡುತ್ತಿದ್ದೇವೆ. ನಮ್ಮ ಸಿಬ್ಬಂದಿ ಸೋಂಕಿತರ ಬಳಿಯೇ ಹೋಗಿ ಅವರಿಗೆ ವಿವಿಧ ಬಗೆಯ ವ್ಯಾಯಾಮಗಳನ್ನು ಹೇಳಿ ಕೊಡುತ್ತಿದ್ದಾರೆ. ಅದರೊಂದಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ. ಇದು ಸೋಂಕಿತರು ಬೇಗನೆ ಗುಣಮುಖರಾಗಲು ಕಾರಣವಾಗುತ್ತಿದೆ. ನಾವು ಕೂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುವ ಖುಷಿ ಮತ್ತಷ್ಟು ಸೇವೆ ನೀಡಲು ನಮಗೆಲ್ಲಾ ಹೆಚ್ಚಿನ ಉತ್ಸಾಹ, ಶಕ್ತಿ ನೀಡುತ್ತಿದೆ ಎಂದು ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಡಿಮ್ಹಾನ್ಸ್‌ನ ಮಾನಸಿಕ ತಜ್ಞರಿಂದ ಟೆಲಿ ಕೌನ್ಸೆಲಿಂಗ್; ಕೊವಿಡ್​ನಿಂದ ಖಿನ್ನತೆಗೊಳಗಾದ 3000 ಜನರೊಂದಿಗೆ ಆಪ್ತ ಸಮಾಲೋಚನೆ

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ