ಹಾಸನದಲ್ಲಿ ಕಾಡಾನೆ ದಾಳಿ; ಕಾಫಿ ತೋಟದ ಮಾಲೀಕ ಸಾವು
ಇಂದು ಬೆಳಿಗ್ಗೆ 6.30ರ ಸುಮಾರಿಗೆ ಒಂಟಿ ಸಲಗ 59 ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಕೊಂದಿದೆ. ಮನೆ ಸಮೀಪವೇ ಕಾಡಾನೆ ಬಂದು ತೋಟದ ಮಾಲೀಕನ ಜೀವವನ್ನು ತೆಗೆದಿದೆ. ಆನೆಯ ದಾಳಿಯಿಂದ ವ್ಯಕ್ತಿಯ ತಲೆ ಛಿದ್ರ ಛಿದ್ರವಾಗಿದೆ.
ಹಾಸನ: ಹಾಸನದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಜೋರಾಗಿದ್ದು, ಆನೆ ದಾಳಿಗೆ ತೋಟದ ಮಾಲೀಕ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರುಹುಣಸೆ ಗ್ರಾಮದ ರಾಜಣ್ಣ ಎಂಬುವವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ 6.30ರ ಸುಮಾರಿಗೆ ಒಂಟಿ ಸಲಗ 59 ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಕೊಂದಿದೆ. ಮನೆ ಸಮೀಪವೇ ಕಾಡಾನೆ ಬಂದು ತೋಟದ ಮಾಲೀಕನ ಜೀವವನ್ನು ತೆಗೆದಿದೆ. ಆನೆಯ ದಾಳಿಯಿಂದ ವ್ಯಕ್ತಿಯ ತಲೆ ಛಿದ್ರ ಛಿದ್ರವಾಗಿದ್ದು, ಆನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಮಾವ ತಯಾರಿಸುತ್ತಿದ್ದ ಮೂವರು ಆರೋಪಿಗಳ ಬಂಧನ ವಿಜಯಪುರ: ಮಾವ ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ತಿಕೋಟ ಪೊಲೀಸರು ಬಂಧಿಸಿದ್ದಾರೆ. ಮದರ್ಸಾಬ್ ಮಡ್ಡಿಮನಿ, ಅಬ್ದುಲ್ಕರೀಂ ಬಡಕಲ್ ಮತ್ತು ಮುಬಾರಕ್ ಬಡಕಲ್ ಬಂಧಿತ ಆರೋಪಿಗಳು. ಮೂವರು ತಿಕೋಟ ಪಟ್ಟಣದ ಬಡಕಲ್ನಲ್ಲಿ, ಗೌಡರ ಗಲ್ಲಿಯಲ್ಲಿ ಅಪಾರ ಪ್ರಮಾಣದಲ್ಲಿ ಮಾವ ತಯಾರಿಸಿ, ಲಾಕ್ಡೌನ್ ನಡುವೆ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ಇವರನ್ನು ಬಂಧಿಸಿದ್ದು, 185 ಕೆ.ಜಿ ಮಾವ ಮತ್ತು 1.50 ಲಕ್ಷ ರೂ. ಮೌಲ್ಯದ ಮಾವ ಜೊತೆಗೆ ತಯಾರಿಸಲು ಬಳಸುತ್ತಿದ್ದ ಮಿಕ್ಸರ್, ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳ್ಳಭಟ್ಟಿ ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ ಶಿವಮೊಗ್ಗ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡಾದ ಮಲ್ಲಪ್ಪನ ಕಟ್ಟೆ ಕೆರೆಯ ಬಳಿ ಅಡ್ಡೆಯಿತ್ತು. ಆರೋಪಿಗಳಾದ ಬೀರಾ ನಾಯಕ್ ಮತ್ತು ಲೋಕಿ ಬಾಯಿ ಪರಾರಿಯಾಗಿದ್ದಾರೆ. 135 ಲೀಟರ್ ಬೆಲ್ಲದ ಕೊಳೆ ಹಾಗೂ 09 ಲೀಟರ್ ಕಳ್ಳಭಟ್ಟಿ ಸಾರಾಯಿಯ ಜೊತೆಗೆ ತಯಾರಿಕೆಗೆ ಬಳಸುವ ಸಾಮಗ್ರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಸಿಲಿಂಡರ್ ಸ್ಫೋಟದಿಂದ ಕುಸಿದುಬಿದ್ದ ಕಟ್ಟಡ; 7 ಮಂದಿ ಸಾವು, 14 ಜನರಿಗೆ ಗಾಯ
(owner of coffee plantation has died from a elephant attack)
Published On - 9:24 am, Wed, 2 June 21