ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ: ಕರ್ನಾಟಕದ ಪರಂಪರೆ, ಕಲೆ ಅನಾವರಣ

Updated on: Nov 05, 2026 | 6:30 PM

ಕರ್ನಾಟಕದ ಪರಂಪರೆ, ಕಲೆ ಮತ್ತು ಭಾಷಾ ಗುರುತನ್ನು ಗೌರವಿಸುವ ಮೂಲಕ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿತು.ಈ ಸಂದರ್ಭದಲ್ಲಿ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದೆ. ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಹುಲಿವೇಷ, ತಮಟೆ ಮತ್ತು ಪೂಜೆ ಕುಣಿತದಂತಹ ಸಾಂಪ್ರದಾಯಿಕ ಕಲಾ ತಂಡಗಳ ಪ್ರದರ್ಶನ ಗಮನಸೆಳೆಯಿತು.

1 / 6
ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು.
ಈ ಸಂದರ್ಭದಲ್ಲಿ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲಾಯಿತು.

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ಈ ಸಂದರ್ಭದಲ್ಲಿ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲಾಯಿತು.

2 / 6

ಡೊಳ್ಳು ಕುಣಿತ, ಕಂಸಾಳೆ ಮತ್ತು ವೀರಗಾಸೆಯಂತಹ ಸಾಂಪ್ರದಾಯಿಕ ಜಾನಪದ ನೃತ್ಯಗಳು ಆವರಣಕ್ಕೆ ಬಣ್ಣ ಹಾಗೂ ಚೈತನ್ಯವನ್ನು ತುಂಬಿದವು.

3 / 6

ಅಲ್ಲದೆ, ಆಕರ್ಷಕ ಯಕ್ಷಗಾನ ನೃತ್ಯ-ನಾಟಕವು ಪ್ರೇಕ್ಷಕರ ಮನಗೆದ್ದಿತು. ಇದರ ವಿಶಿಷ್ಟ ಕಥಾ ನಿರೂಪಣೆ ಮತ್ತು ಸಾಂಪ್ರದಾಯಿಕ ಕಲಾಕೌಶಲ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

4 / 6

ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದಿಂದ ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಹುಲಿವೇಷ, ತಮಟೆ ಮತ್ತು ಪೂಜೆ ಕುಣಿತದಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ಎಲ್ಲರ ಗಮನಸೆಳೆಯಿತು

5 / 6

ಈ ಆಚರಣೆಯಲ್ಲಿ ಆಡಳಿತ ಮಂಡಳಿಯ ಪ್ರತಿನಿಧಿಯಾಗಿ ತಾಜ್ವಿಯಾ ಅಹ್ಮದ್, ಪ್ರೊ-ವೈಸ್ ಚಾನ್ಸೆಲರ್ ಡಾ. ವಿದ್ಯಾ ಶಂಕರ್ ಶೆಟ್ಟಿ ಮತ್ತು ಡೀನ್ ಡಾ. ಅನು ಸುಖದೇವ್ ಅವರು ಉಪಸ್ಥಿತರಿದ್ದರು.

6 / 6

ಖ್ಯಾತ ರಾಜಕುಮಾರ್ ಕುಟುಂಬದ ಧೀರೇನ್ ರಾಮ್‌ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಮುಂಬರುವ ಚಲನಚಿತ್ರ 'ಪಬ್ಬಾರ್' (Pabbar) ಕುರಿತು ಪ್ರಚಾರ ಮಾಡಿದರು.

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us