ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ

| Updated By: ಗಂಗಾಧರ​ ಬ. ಸಾಬೋಜಿ

Updated on: May 06, 2024 | 10:01 PM

ಇಂದು ಜಸ್ಟ್ ಅರ್ಧಗಂಟೆ ಸುರಿದ ಮಳೆ ಬೆಂಗಳೂರನ್ನೇ ಅಲ್ಲಾಡಿಸಿದೆ. ಒಂದು ಕಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡರೆ, ಮತ್ತೊಂದೆಡೆ 25ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಾನಹ ಸವಾರರು ಪರದಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆನೇಕಲ್‌ ಭಾಗದಲ್ಲೂ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಆಗಿದೆ. ಸೂರ್ಯಸಿಟಿಯಲ್ಲಿ ಆಸ್ಪತ್ರೆಯ ಶೀಟ್‌ಗಳೇ ಹಾರಿ ಹೋಗಿವೆ.

ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ
ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ
Follow us on

ಬೆಂಗಳೂರು, ಮೇ 06: ಮೂರು ದಿನಗಳ ಬಳಿಕ ಇಂದು ಮತ್ತೆ ಬೆಂಗಳೂರಿಗೆ ವರುಣನ (Rain) ಆಗಮನವಾಗಿತ್ತು. ಸಂಜೆಯಾಗ್ತಿದ್ದಂತೆ ಮಳೆರಾಯನ ದರ್ಶನ ಆಗಿತ್ತು. ಅದು ಅಂತಿಂಥ ಮಳೆ ಅಲ್ಲ, ಜೋರುಗಾಳಿ, ಆಲಿಕಲ್ಲುನೊಂದಿಗೆ ಆರಂಭವಾದ ಮಳೆ ಬೆಂಗಳೂರನ್ನ (Bangaluru) ತಂಪು ಮಾಡುವುದರೊಂದಿಗೆ ಹತ್ತಾರು ಅವಾಂತರಗಳನ್ನು ಕೂಡ ಸೃಷ್ಟಿಸಿದೆ. ಜಸ್ಟ್ ಅರ್ಧಗಂಟೆ ಸುರಿದ ಮಳೆ ಬೆಂಗಳೂರನ್ನೇ ಅಲ್ಲಾಡಿಸಿದೆ. ಒಂದು ಕಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡರೆ, ಮತ್ತೊಂದೆಡೆ 25ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಾನಹ ಸವಾರರು ಪರದಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

25ಕ್ಕೂ ಹೆಚ್ಚು ಭಾಗದಲ್ಲಿ ಧರೆಗೆ ಉರುಳಿದ ಮರಗಳು 

ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 25ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗೆ ಉರುಳಿವೆ. ನಗರದ ಜಯನಗರ, ಬಸವನಗುಡಿ, ಮಲ್ಲೆಶ್ವರಂ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಿಂತೆ ಹಲವೆಡೆ ಮರಗಳು ಧರೆಗೆ ಉರುಳಿವೆ. ದೂರು ಬಂದ ನಗರಗಳಲ್ಲಿ ಮರಗಳನ್ನು ಬಿಬಿಎಂಪಿ ಸಿಬ್ಬಂದಿಗಳು ತೆರೆವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಕಂಟ್ರೋಲ್ ರೂಮ್ ಇಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Bengaluru Rain Today: ಬೆಂಗಳೂರಿನಲ್ಲಿ ತಂಪೆರೆದ ವರುಣ, ನಗರದ ವಿವಿಧೆಡೆ ಆಲಿಕಲ್ಲು ಮಳೆ

ಇಂದು ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಮಂತ್ರಿಮಾಲ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನೀರು ಹೋಗಲು ಸ್ಥಳವಕಾಶ ಇಲ್ಲದೆ ರಸ್ತೆ ಮೇಲೆ ಸುಮಾರು 2 ಅಡಿಯಷ್ಟು ನೀರು ತುಂಬಿಕೊಂಡಿದೆ. ಹೀಗಾಗಿ ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆ ಆಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ಆನೇಕಲ್‌ನಲ್ಲಿ ಆಲಿಕಲ್ಲು ಮಳೆ: ಬಿರುಗಾಳಿಗೆ ಕಿತ್ತು ಹೋದ ಶೀಟ್‌ಗಳು!

ಇನ್ನು ಆನೇಕಲ್‌ ಭಾಗದಲ್ಲೂ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಆಗಿದೆ. ಸೂರ್ಯಸಿಟಿಯಲ್ಲಿ ಆಸ್ಪತ್ರೆಯ ಶೀಟ್‌ಗಳೇ ಹಾರಿ ಹೋಗಿವೆ. ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಜಖಂಗೊಂಡಿವೆ. ಆನೇಕಲ್‌ ತಾಲೂಕಿನ ಬನಹಳ್ಳಿಯಲ್ಲಿ 10 ಕ್ಕೂ ಹೆಚ್ಚು ಮನೆಗಳ ಶೀಟ್‌ಗಳು ಹಾರಿ ಹೋಗಿದ್ದು, ಸಿಮೆಂಟ್‌ ಬ್ರಿಕ್ಸ್‌ಗಳು ಕೂಡಾ ನೆಲಕ್ಕುರುಳಿವೆ. ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.


ಇನ್ನು ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜ ಪುರಂ ಬಳಿ ಚಲಿಸುತ್ತಿದ್ದ ಕಾರ್‌ ಮೇಲೆ ಮರ ಉರುಳಿಬಿದ್ದಿತ್ತು. ಅದೃಷ್ಟವಶಾತ್‌ ಕಾರ್‌ನಲ್ಲಿದ್ದವರು ಬಚಾವ್ ಆಗಿದ್ದಾರೆ. ಪಾಲಿಕೆ ಸಿಬ್ಬಂದಿ ಹಾಗೂ ಟ್ರಾಫಿಕ್‌ ಪೊಲೀಸರು ಮರತೆರವುಗೊಳಿಸೋ ಕೆಲಸ ಮಾಡಿದರು.

ಇದನ್ನೂ ಓದಿ: Bengaluru Rain: ಗುಡ್​ನ್ಯೂಸ್, ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ

ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಬೆಂಗಳೂರು ಸದ್ಯ ಕೂಲ್ ಕೂಲ್ ಆಗಿದೆ. ಆದರೆ ಪಾಲಿಕೆ ನಿರ್ಲಕ್ಷ್ಯ ಹತ್ತಾರು ಅವಾಂತರಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.