ಬೆಂಗಳೂರು, ಮೇ 18: ನಗರದಲ್ಲಿ ಕಳೆದೊಂದು ವಾರದಿಂದ ಮಳೆ (Rain) ಸುರಿಯುತ್ತಿದೆ. ಇಂದು ಕೂಡ ಕೆಂಗೇರಿ, ನಾಗರಬಾವಿ, ಸದಾಶಿವನಗರ, ಶೇಷಾದ್ರಿಪುರ, ವಸಂತ ನಗರ, ಬನಶಂಕರಿ, ನಾಯಂಡಹಳ್ಳಿ, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಶಿವಾಜಿನಗರ, ಕೆಐಎಎಲ್ ವಿಮಾನ ನಿಲ್ದಾಣ ಬೆಂಗಳೂರು, ಮೆಜೆಸ್ಟಿಕ್ ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಹಿತ ಜೋರು ಮಳೆ ಆಗಿದೆ. ಮಳೆರಾಯನ ಆರ್ಭಟಕ್ಕೆ ಜನರು ಪರದಾಡಿದ್ದಾರೆ. ಇಂದು ಆರ್‌ಸಿಬಿ ಮತ್ತು ಸಿಎಸ್ಕೆ ಪಂದ್ಯ ಕೂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಆ ಭಾಗದ ಸುತ್ತಮುತ್ತ ಕೂಡ ಮಳೆ ಆಗಿದೆ.
ಇನ್ನು ನಗರದಲ್ಲಿ ಬೆಳಿಗ್ಗೆಯಿಂದಲೇ ಹಲವೆಡೆ ಮೋಡ ಕವಿದ ವಾತಾವರಣವಿತ್ತು. ಮುಂದಿನ ಐದು ದಿನಗಳಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಹವಾಮಾನ ಇಲಾಖೆ ಹೇಳಿದೆ.
Short spell of heavy rains over Central Bengaluru at Majestic, MG Road, Chinnaswamy Stadium & surroundings areas in the region
It stopped now in the stadium #BengaluruRains #BangaloreRains https://t.co/P1ENa6AYD4
— Karnataka Weather (@Bnglrweatherman) May 18, 2024
ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿಯೂ ಮಳೆ ಆಗಿದೆ. ಗಡಿ ನಾಡು ಚಾಮರಾಜನಗರದಲ್ಲಿ ವರುಣದೇವ ಧರೆಗಿಳಿದಿದ್ದು, ಜನರ ಮೊಗದ ಮೇಲೆ ಮಂದಹಾಸ ತಂದಿದ್ದಾನೆ. ನಗರದ ಹಲವೆಡೆ ಕಳೆದ ಅರ್ಧ ಗಂಟೆಯಿಂದಲೂ ಮಳೆ ಸುರಿದೆ. ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಕಳೆದ ವರ್ಷ ಮಳೆ ಬಾರದೆ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದವು. ಈ ಭಾರಿ ಪೂರ್ವ ಮುಂಗಾರು ಆರಂಭ ಹಿನ್ನಲೆ ರೈತರಿಗೆ ಸಂತಸ ತಂದಿದೆ.
ಹಾಸನ ಜಿಲ್ಲೆಯ ಬಹುತೇಕ ಕಡೆ ಮಳೆ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆ ಆಗುತ್ತಿದೆ. ಇಂದು ಮಧ್ಯಾಹ್ನವೇ ಸುಮಾರು ಅರ್ಧ ಗಂಟೆಯಿಂದ ಮಳೆ ಸುರಿದಿದೆ. ಅತಿಯಾದ ತಾಪಮಾನದಿಂದ ಕಂಗೆಟ್ಟಿದ್ದ ಜನರಿಗೆ ಖುಷಿ ಆಗಿದ್ದು, ಕೃಷಿ ಚಟುವಟಿಕೆಗಳನ್ನು ಜಿಲ್ಲೆಯ ರೈತರು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಇಂದು ಸುರಿದ ಮಳೆ ಚಿಕ್ಕಮಗಳೂರುನಲ್ಲಿ ಎಂದಿನಂತೆ ಸುರಿಯುತ್ತಿದೆ; ಬೆಂಗಳೂರಲ್ಲಿ ಇವತ್ತು ಬೇಡ!
ಚಿಕ್ಕಬಳ್ಳಾಪುರದತ್ತ ಕೂಡ ವರುಣ ಮುಖ ಮಾಡಿದ್ದು, ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಜೋರು ಮಳೆಗೆ ಅವಾಂತರಗಳು ಸಂಭವಿಸಿದ್ದು, ಸಿ.ಎಸ್.ಐ.ಆಸ್ಪತ್ರೆ ರಸ್ತೆಯಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಉರುಳಿಬಿದಿದ್ದೆ. ಅದೃಷ್ಟವಶಾತ್ ಅನಾಹುತ ತಪ್ಪಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Sat, 18 May 24