ಬೆಂಗಳೂರು ಗ್ರಾಮಾಂತರ, ಜ.05: ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ (Kempegowda International Airport)ನಲ್ಲಿ 1.29 ಕೋಟಿ ರೂ. ಮೌಲ್ಯದ ಚಿನ್ನ(Gold)ವನ್ನು ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 12 ಜನ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 2 ಕೆಜಿ 86 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಮಸ್ಕಟ್ ಮತ್ತು ಮದೀನಾದಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕರು ಇವರಾಗಿದ್ದು, ಮೈಮೇಲೆ ಬಂಗಾರ ಧರಿಸಿದರೆ ಕೇಳಲ್ಲ ಅಂದುಕೊಂಡಿದ್ದರಂತೆ. ಇದೀಗ ಚಿನ್ನಕ್ಕೆ ಸರಿಯಾದ ಬಿಲ್ ಟ್ಯಾಕ್ಸ್ ಇಲ್ಲದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ: ಮದುವೆ ಮನೆಯಲ್ಲಿ ವ್ಯಾನಿಟಿ ಬ್ಯಾಗ್ನಲ್ಲಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ಕಳ್ಳತನ ಮಾಡಿದವನನ್ನು ಮಾಳ ಮಾರುತಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ವ್ಯಾನಿಟಿ ಬ್ಯಾಗ್ನಲ್ಲಿದ್ದ 3 ಲಕ್ಷದ 51 ಸಾವಿರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ 3,500 ರೂಪಾಯಿಯನ್ನು ಕಳ್ಳತನ ಮಾಡಿದ್ದ ಖದೀಮನನ್ನು 6 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಮ್ತಿಯಾಜ್ ಹುಬ್ಳಿವಾಲೆ ಬಂಧಿತ ಆರೋಪಿ.
ಇದನ್ನೂ ಓದಿ:ಚಿನ್ನದ ಕಳ್ಳಸಾಗಣೆಗೆ ಮತ್ತೊಂದು ಐಡಿಯಾ! ಆದರೆ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನಡೆಯದ ಕಳ್ಳಾಟ
ಇತ ಪಂಚಾಕ್ಷರಿ, ಲತಾ ದಂಪತಿ ಮಕ್ಕಳ ಮದುವೆಗೆ ಹೋಗಿದ್ದ. ಈ ವೇಳೆ ದಂಪತಿ ಚೇರ್ ಮೇಲೆ ವ್ಯಾನಿಟಿ ಬ್ಯಾಗ್ ಬಿಟ್ಟು, ನವ ಜೋಡಿಯನ್ನು ಆಶೀರ್ವದಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಾನಿಟಿ ಬ್ಯಾಗ್ ತೆಗೆದುಕೊಂಡು ಇಮ್ತಿಯಾಜ್ ಪರಾರಿಯಾಗಿದ್ದ. ಈ ದೃಶ್ಯ ಕಲ್ಯಾಣ ಮಂಟಪದಲ್ಲಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನೇ ಆಧರಿಸಿ ಹುಡುಕಾಟ ಆರಂಭಿಸಿದ ಮಾಳ ಮಾರುತಿ ಪೊಲೀಸರು, ಇದೀಗ ಕೇವಲ 6 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ