ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?

ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?
ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ!
Edited By: ಸಾಧು ಶ್ರೀನಾಥ್​

Updated on: Dec 22, 2023 | 2:46 PM

ಪುಟ್ಟ ಮಗುವಿಗೆ ಪ್ರಪಂಚದ ಅರಿವಿಲ್ಲ, ಒಳ್ಳೆದು ಕೆಟ್ಟದ್ದು ಗೊತ್ತೆ ಇಲ್ಲ, ಆದರೆ ಇಂತಹ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಬಾಯಿ ತೆರೆದಿರುವ ಮನೆಯ ಸಂಪ್, ಸಂಪ್‌ನ ಸುತ್ತಲೂ ಜನರ ಗೋಳಾಟ, ಏನಾಗಿದೆ ಅಂತ ನೋಡುವಷ್ಟರಲ್ಲಿ ಆ ಸಂಪ್ ನಲ್ಲಿ ಎಳೆಯ ಕಂದ (girl child) ಉಸಿರು ನಿಲ್ಲಿಸಿಬಿಟ್ಟಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಬಾಗಲಗುಂಟೆ (bagalagunte) ಪೊಲೀಸ್ ಠಾಣ ವ್ಯಾಪ್ತಿಯ ಮಲ್ಲಸಂದ್ರದಲ್ಲಿ (mallasandra).

ಹೌದು ಲೋಕವನ್ನ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿರೋದು ಈ ಮುದ್ದಾದ ಪುಟ್ಟ ಬಾಲಕಿ ಕೇವಲ ಐದು ವರ್ಷದ ಶಾಹಿದ ಭಾನು. ನಸ್ತೀನ ಭಾನು ಹಾಗೂ ಸೈಯದ್ ಹುಸೇನ್ ದಂಪತಿಯ ಪುಟ್ಟ ಮಗಳು ಶಹೀದಾ ಬಾನು ಮನೆಯ ಮುಂದೆ ಇರುವ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಶಹೀದ ಭಾನು ಮನೆಯ ಬಳಿ ಆಟ ಆಡುತ್ತಿದ್ದಳಂತೆ, ಇವರ ಬಿಲ್ಡಿಂಗ್‌ ಪಕ್ಕದಲ್ಲೇ ಇರುವ ಬಿಹಾರಿ ಮೂಲದ ಯುವಕರು ನೀರು ತೆಗೆದುಕೊಳ್ಳುವ ಸಲುವಾಗಿ ಸಂಪ್‌ನ ಮುಚ್ಚಳ ತೆಗೆದಿದ್ದಾರೆ. ಆದರೆ ಅದನ್ನು ಮತ್ತೆ ಮುಚ್ಚದೇ ಹಾಗೆಯೇ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್

ಈ ವೇಳೆ ಅಲ್ಲೆ ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ. ಪಕ್ಕದ ಮನೆಯ ಚಂದ್ರಶೇಖರ್‌ಗೆ ವಿಷಯ ತಿಳಿಸಿದಾಗ ಆತ ಬಂದು ನೋಡಿದಾಗ ಮಗು ಸಂಪ್‌ಗೆ ಬಿದ್ದಿರುವುದು ಗೊತ್ತಾಗಿದೆ.

ಘಟನೆಯ ಬಳಿಕ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ಮೃತದೃಹ ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮಗು ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆಯ ಬಳಿಕ ಬಿಹಾರ್ ಮೂಲದ ಹುಡುಗರು ಭಯದಿಂದಾಗಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us