ಶೋಕಿಗಾಗಿ ಬೈಕ್​ ಕದಿಯುತ್ತಿದ್ದವರು ಅಂದರ್, ಆರೋಪಿಗಳಿಂದ 10 ಲಕ್ಷ ರೂ, ಮೌಲ್ಯದ 9 ಬೈಕ್, 12 ಮೊಬೈಲ್ ವಶ

ಅವರದೆಲ್ಲಾ ಕಷ್ಟಾಪಟ್ಟು ಮೈ ಬಗ್ಗಿಸಿ ದುಡಿದು ತಿನ್ನಬೇಕಾದ ವಯಸ್ಸು. ಆದ್ರೆ, ಈ ವಯಸ್ಸಿನಲ್ಲೆ ಸುಲಭವಾಗಿ ಹಣ ಮಾಡಿ ಶೋಕಿ ಮಾಡೋಕ್ಕೆಂದು ಅಡ್ಡದಾರಿ ಹಿಡಿದಿದ್ರು. ಅಲ್ಲದೆ ಮನೆ ಮುಂದಿನ ಬೈಕ್ ಮತ್ತು ಒಂಟಿ ಜನರ ಬಳಿ ಮೊಬೈಲ್ ಎಗರಿಸಿ ಹಣ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶೋಕಿಗಾಗಿ ಬೈಕ್​ ಕದಿಯುತ್ತಿದ್ದವರು ಅಂದರ್, ಆರೋಪಿಗಳಿಂದ 10 ಲಕ್ಷ  ರೂ, ಮೌಲ್ಯದ 9 ಬೈಕ್, 12 ಮೊಬೈಲ್ ವಶ
ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್​
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 26, 2023 | 8:39 AM

ಬೆಂಗಳೂರು ಗ್ರಾಮಾಂತರ, ಜು.26: ಜಿಲ್ಲೆಯ ಹೊಸಕೋಟೆ(Hoskote) ನಗರದ ವಿವಿಧೆಡೆ ನಿಲ್ಲಿಸಿದ್ದ ಬೈಕ್(Bike Theft)​ಗಳನ್ನ ಕದ್ದು ಕ್ಷಣ ಮಾತ್ರದಲ್ಲೆ ಎಸ್ಕೇಫ್ ಆಗುತ್ತಿದ್ದರು. ಈ ಕುರಿತು ಹಲವು ಪ್ರಕರಣಗಳು ಹೊಸಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಹೊಸಕೋಟೆ ಪೊಲೀಸರು ಇದೀಗ ಶೋಕಿಗೋಸ್ಕರ ಹೊಸಕೋಟೆ ಸುತ್ತಾಮುತ್ತ ಬೈಕ್​ಗಳನ್ನ ಕದ್ದು, ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂದಿಸಿದ್ದಾರೆ. ಇನ್ನು ಈ ಆರೋಪಿಗಳಿಂದ ರಾಯಲ್ ಎನ್ ಫಿಲ್ಡ್ ಪಲ್ಸರ್ ಸ್ಕೂಟಿ ಸೇರಿದಂತೆ 9 ಬೈಕ್​ಗಳನ್ನ ವಶಪಡಿಸಿಕೊಂಡಿದ್ದಾರೆ.

ಬೈಕ್ ಸಿಗದಿದ್ದಾಗ ಮೊಬೈಲ್ ಕಳ್ಳತನ

ಹೊಸಕೋಟೆಯ ಹಲವೆಡೆ ಮನೆ ಹಾಗೂ ಬಡಾವಣೆಗಳಲ್ಲಿ ರೌಂಡ್ಸ್ ಹಾಕುತ್ತಿದ್ದ ಇವರು, ನಂತರ ಮನೆ ಮುಂದೆ ಹಾಗೂ ಪ್ಲೈ ಒವರ್ ಕೆಳಗಡೆ ನಿಲ್ಲಿಸಿ ಹೋಗುತ್ತಿದ್ದ ಬೈಕ್​ಗಳನ್ನ ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಬೈಕ್​ಗಳು ಖದೀಯಲು ಸಾದ್ಯವಾಗದಿದ್ದಾಗ ಬಸ್ಟ್ಯಾಂಡ್​ನಲ್ಲಿ ಹಾಗೂ ಒಂಟಿಯಾಗಿ ಓಡಾಡುವ ಜನರ ಬಳಿ ಮೊಬೈಲ್​ಗಳನ್ನ ಕಸಿದು ಎಸ್ಕೇಪ್ ಆಗುತ್ತಿದ್ದರು. ಇನ್ನೂ ಇದೇ ರೀತಿ ಕಳೆದ ಹಲವು ತಿಂಗಳುಗಳಿಂದ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 9 ದ್ವಿಚಕ್ರವಾಹನಗಳು 12 ಮೊಬೈಲ್​ಗಳನ್ನ ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ

ಒಟ್ಟಾರೆ ಕಷ್ಟಾಪಟ್ಟು ದುಡಿದು ತಿನ್ನುವುದನ್ನ ಬಿಟ್ಟು ಸುಲಭವಾಗಿ ಬಿರಿಯಾನಿ ತಿಂದು ಮಜಾ ಮಾಡೋಣವೆಂದು ಕಳ್ಳತನದ ಹಾದಿ ಹಿಡಿದಿದ್ದ ಖದೀಮರು ಇದೀಗ ಮುದ್ದೆ ಮುರಿಯಲು ಪರಪ್ಪನ ಅಗ್ರಹಾರ ಸೇರಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ