ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ, ಶ್ವಾನ ದಳ ದೌಡು

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 29, 2024 | 8:59 PM

ಇಂದು(ಮಾ.29) ಮಧ್ಯಾಹ್ನ ಆನೇಕಲ್(Anekal) ತಾಲ್ಲೂಕಿನ ಹುಲಿಮಂಗಲ ಸಮೀಪದ ಟ್ರೀಮಿಸ್ ವರ್ಲ್ಡ್ ಸ್ಕೂಲ್​ಗೆ ಬಾಂಬ್ ಬೆದರಿಕೆ(Bomb Threat) ಇ-ಮೇಲ್ ಬಂದಿದ್ದು, ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಶ್ವಾನ ದಳದವರು ಇಡೀ ಶಾಲೆಯನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ.

ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ;  ಬಾಂಬ್ ನಿಷ್ಕ್ರಿಯ, ಶ್ವಾನ ದಳ ದೌಡು
ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ
Follow us on

ಬೆಂಗಳೂರು ಗ್ರಾಮಾಂತರ, ಮಾ.29: ಇತ್ತೀಚೆಗೆ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್​ ಬೆದರಿಕೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ಇಂದು(ಮಾ.29) ಮಧ್ಯಾಹ್ನ ಆನೇಕಲ್(Anekal) ತಾಲ್ಲೂಕಿನ ಹುಲಿಮಂಗಲ ಸಮೀಪದ ಟ್ರೀಮಿಸ್ ವರ್ಲ್ಡ್ ಸ್ಕೂಲ್​ಗೆ ಬಾಂಬ್ ಬೆದರಿಕೆ(Bomb Threat) ಇ-ಮೇಲ್ ಬಂದಿದೆ. ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಸಂದೇಶ ರವಾನಿಸಿದ ಹಿನ್ನಲೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಶ್ವಾನ ದಳದವರು ಇಡೀ ಶಾಲೆಯನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಬಳಿಕ ಬಾಂಬ್ ಕರೆಗೆ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.

ಇನ್ನು ಇದೇ ಮಾ.01 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. ಇದೀಗ ಮತ್ತೊಂದು ಶಾಲೆಗೆ ಬೆದರಿಕೆ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ:ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಮಾಹಿತಿ ನೀಡಲು ನಿರಾಕರಿಸಿದ ಜಿ-ಮೇಲ್ ಕಂಪನಿ

ದಾಖಲೆ ಇಲ್ಲದೆ ಬೈಕ್​ನಲ್ಲಿ ಸಾಗಿಸ್ತಿದ್ದ 8.23 ಲಕ್ಷ ನಗದು ಜಪ್ತಿ

ಬಳ್ಳಾರಿ: ದಾಖಲೆ ಇಲ್ಲದೆ ಬೈಕ್​ನಲ್ಲಿ ಸಾಗಿಸುತ್ತಿದ್ದ 8.23 ಲಕ್ಷ ನಗದನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೋಟೆ ಚೆಕ್​ಪೋಸ್ಟ್​ನಲ್ಲಿ ಜಪ್ತಿ ಮಾಡಲಾಗಿದೆ. ಕಂಪ್ಲಿಯಿಂದ ಗಂಗಾವತಿಗೆ ಬ್ಯಾಗ್​ನಲ್ಲಿ ಇಟ್ಟುಕೊಂಡು ಬೈಕ್​ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ. ಈ ಘಟನೆ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Fri, 29 March 24