ಸಹೋದರರ ನಡುವೆ ಆಸ್ತಿ ವಿಚಾರಕ್ಕೆ ಕಲಹ; ಜೆಸಿಬಿ ತಂದು ಹಳೆ ಮನೆ ಕೆಡವಿದ ಆರೋಪ
ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಅಣ್ಣ-ತಮ್ಮನ ನಡುವೆ ಆಸ್ತಿ ವಿಚಾರಕ್ಕೆ ಕಲಹವಾಗಿ ಕೋಪಗೊಂಡ ಸಹೋದರ, ಜೆಸಿಬಿ ತಂದು ಹಳೆಯ ಮನೆಯನ್ನು ಕೆಡವಿದ ಆರೋಪ ಕೇಳಿಬಂದಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ಮಾ.30:ಅಣ್ಣ-ತಮ್ಮನ ನಡುವೆ ಆಸ್ತಿ ವಿಚಾರಕ್ಕೆ ಕಲಹವಾಗಿ ಕೋಪಗೊಂಡ ಸಹೋದರ, ಜೆಸಿಬಿ ತಂದು ಹಳೆಯ ಮನೆಯನ್ನು ಕೆಡವಿದ ಆರೋಪ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ಸಂಪತ್ ಕುಮಾರ್ ಮತ್ತು ಶ್ರೀನಿವಾಸ್ ಎಂಬ ಸಹೋದರರ ನಡುವೆ ಆಸ್ತಿ ಹಾಗೂ ಮನೆಯ ಕುರಿತು ಕಲಹ ನಡೆಯುತ್ತಿತ್ತು. ಇದೇ ವಿಚಾರವಾಗಿ ಇಬ್ಬರು ಸಹೋದರರು ನ್ಯಾಯಾಲಯದ ಮೊರೆ ಸಹ ಹೋಗಿದ್ದರು.
ಪೊಲೀಸ್ ಠಾಣೆಗೆ ದೂರು ನೀಡಿದ ಸಹೋದರ ಶ್ರೀನಿವಾಸ್
ಈ ಕುರಿತು ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ಕೂಡ ಸಹೋದರ ಸಂಪತ್ ಕುಮಾರ್ ಎಂಬುವವರು ಜೆಸಿಬಿ ತಂದು ಹಳೆ ಮನೆ ದ್ವಂಸ ಮಾಡಿದ್ದಾರೆ ಎಂದು ಸಹೋದರ ಶ್ರೀನಿವಾಸ್ ಆರೋಪಿಸಿದ್ದಾರೆ. ಮನೆ ದ್ವಂಸದ ವೇಳೆ ಮನೆಯಲ್ಲಿದ್ದ ಪೀರೋಪಕರಣಗಳು ಹಾನಿಗೊಳಗಾಗಿದೆ. ಇದರಿಂದ ಶ್ರೀನಿವಾಸ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಆನೇಕಲ್: ಕೌಟುಂಬಿಕ ಕಲಹ; ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನ
ಜಮೀನು ಅಳತೆ ಸಂದರ್ಭದಲ್ಲಿ ಅಕ್ಕ-ಪಕ್ಕದ ಜಮೀನು ಮಾಲೀಕರಿಂದ ಗಲಾಟೆ
ಬೆಂಗಳೂರು ಗ್ರಾಮಾಂತರ: ಜಮೀನು ಅಳತೆ ಸಂದರ್ಭದಲ್ಲಿ ಅಕ್ಕ-ಪಕ್ಕದ ಜಮೀನು ಮಾಲೀಕರಿಂದ ಗಲಾಟೆ ಮಾಡಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 23/8ರ ಜಮೀನು ಬಳಿ ನಡೆದಿದೆ. ರಘುನಾಥ್ ಎಂಬುವವರಿಗೆ ಪಕ್ಕದ ಜಮೀನು ಮಾಲೀಕರು,ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ. ನವೀನ್ ಕುಮಾರ್, ಆಶಾ ಸೇರಿದಂತೆ ಮೂವರು ಹಲ್ಲೆ ನಡೆಸಿರುವ ಅರೋಪ ಕೇಳಿಬಂದಿದೆ. ಗಾಯಾಳು ರಘುನಾಥ್ ಅವರಿಗೆ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ