ಇಟ್ಟಿಗೆ ಕದ್ದಿದ್ದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು! ಎಸ್ಪಿ ಬಳಿ ತೆರಳುವಂತೆ ಕಚೇರಿ ಸೂಚನೆ
ಇಟ್ಟಿಗೆ ಕಳ್ಳತನವಾದಾಗ ವೆಂಕಟೇಗೌಡ ದೊಡ್ಡವೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗೃಹ ಸಚಿವರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ದೊಡ್ಡಬಳ್ಳಾಪುರ (Doddaballapur) ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ತಿಪ್ಪೂರು ಗ್ರಾಮದ ವೆಂಕಟೇಗೌಡ ಎಂಬ ವ್ಯಕ್ತಿ 30 ಸಿಮೆಂಟ್ ಇಟ್ಟಿಗೆ (Bricks) ಕಳ್ಳತನವಾಗಿರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ. ಇಟ್ಟಿಗೆ ಕಳ್ಳತನವಾದಾಗ ವೆಂಕಟೇಗೌಡ ದೊಡ್ಡವೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಮನೆಯ ಆವರಣದಿಂದ ಪಕ್ಕದ ಮನೆಯ ವ್ಯಕ್ತಿ ಇಟ್ಟಿಗೆ ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಸ್ವೀಕರಿಸಿದ ಗೃಹ ಸಚಿವರ ಕಚೇರಿ ಬೆಂಗಳೂರು ಗ್ರಾಮಾಂತರ ಎಸ್ಪಿ ಬಳಿ ತೆರಳುವಂತೆ ದೂರುದಾರ ವೆಂಕಟೇಗೌಡ ಸೂಚನೆ ನೀಡಿದೆ.
ಜ್ಞಾನೇಂದ್ರಗೆ ಪತ್ರ ಬರೆದ 8 ಶಾಸಕರು:
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆ ಪರೀಕ್ಷಾ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಆರಗ ಜ್ಞಾನೇಂದ್ರಗೆ 8 ಶಾಸಕರು ಪತ್ರ ಬರೆದಿದ್ದಾರೆ. ಕೆ.ಎಸ್.ಲಿಂಗೇಶ್, ಪಿ.ರಾಜೀವ್, ಸುನಿಲ್ ನಾಯ್ಕ್, ರಘುಪತಿ ಭಟ್, ರಾಜಕುಮಾರ್ ತೇಲ್ಕೂರ್, ಹರೀಶ್ ಪೂಂಜಾ, ಲಾಲಾಜಿ ಮೆಂಡನ್, ಜೆಎನ್ ಗಣೇಶ್, ರಾಘವೇಂದ್ರ ಹಿಟ್ನಾಳ್ ಗೃಹ ಸಚಿವರಿಗೆ ಪತ್ರ ಬರೆದಿರುವ ಶಾಸಕರು. ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಪರೀಕ್ಷೆ ರದ್ದುಪಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಬಡ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಶಾಸಕರು ತಿಳಿಸಿದ್ದಾರೆ.
ಇದನ್ನೂ ಓದಿ: ಪೀರ್ಪಾಷಾ ದರ್ಗಾ ವಿವಾದ: ಪ್ರಮೋದ್ ಮುತಾಲಿಕ್ಗೆ ಬೀದರ್ ಜಿಲ್ಲೆ ಪ್ರವೇಶ ನಿರ್ಬಂಧ
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗಬೇಕು. ಜೊತಗೆ ಬಡಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ತನಿಖೆ ಪೂರ್ಣವಾಗುವ ಮೊದಲೇ ಪಿಎಸ್ಐ ಪರೀಕ್ಷೆ ರದ್ದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಪ್ರಾಮಾಣಿಕರಿಗೆ ನ್ಯಾಯ ಸಿಗಬೇಕು ಎಂದು ಶಾಸಕರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sat, 4 June 22