Best Smartphone: ಇಲ್ಲಿದೆ ನೋಡಿ 20,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು
Smartphone Under Rs. 20,000: ಭಾರತದಲ್ಲಿ 20,000 ರೂ. ವರೆಗಿನ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸಂಚಲನ ಸೃಷ್ಟಿಸಿವೆ. ಹಾಗಾದ್ರೆ ಇತ್ತೀಚೆಗಷ್ಟೆ 20,000 ರೂ. ಒಳಗೆ ಬಿಡುಗಡೆ ಆಗಿ ಸದ್ಯ ಭರ್ಜರಿ ಸೇಲ್ ಕಾಣುತ್ತಿರುವ ಸ್ಮಾರ್ಟ್‌ಫೋನ್ ಪರಿಚಯ ನೋಡೋಣ.
ಮೊಬೈಲ್ (Mobile) ವ್ಯಾಪಾರದಲ್ಲಿ ದೊಡ್ಡ ಮಾರುಕಟ್ಟೆಯನ್ನೇ ಹೊಂದಿರುವ ಭಾರತ ಅನೇಕ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್ಗಳ ನೆಚ್ಚಿನ ತಾಣವಾಗಿದೆ. ಹೀಗಾಗಿ ದೇಶದ ಮಾರುಕಟ್ಟೆಗೆ ಕಡಿಮೆ ಎಂದರೂ ವಾರಕ್ಕೆ ಮೂರರಿಂದ ನಾಲ್ಕು ಹೊಸ ಫೋನ್ಗಳು ಲಗ್ಗೆಯಿಡುತ್ತವೆ. ತಿಂಗಳಿಗೆ ಸುಮಾರು 15 ರಿಂದ 20 ಫೋನ್ ಬಿಡುಗಡೆ ಆಗುತ್ತವೆ. ಅದರಲ್ಲೂ ಭಾರತದಲ್ಲಿ ಬಜೆಟ್ ಬೆಲೆಯ (Budget Smartphone) ಅಂದರೆ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದೇ ಕಾರಣಕ್ಕೆ ಶವೋಮಿ, ರಿಯಲ್ ಮಿ, ಸ್ಯಾಮ್‌ಸಂಗ್ ಮತ್ತು ಮೋಟೋರೊಲಾ ದಂತಹ ಜನಪ್ರಿಯ ಕಂಪನಿಗಳು ಮಧ್ಯಮ ಶ್ರೇಣಿಯಲ್ಲಿ ಅನೇಕ ಫೋನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ 20,000 ರೂ. ವರೆಗಿನ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸಂಚಲನ ಸೃಷ್ಟಿಸಿವೆ. ಹಾಗಾದ್ರೆ ಇತ್ತೀಚೆಗಷ್ಟೆ 20,000 ರೂ. ಒಳಗೆ ಬಿಡುಗಡೆ ಆಗಿ ಸದ್ಯ ಭರ್ಜರಿ ಸೇಲ್ ಕಾಣುತ್ತಿರುವ ಸ್ಮಾರ್ಟ್‌ಫೋನ್ ಪರಿಚಯ ನೋಡೋಣ.
ರಿಯಲ್ ಮಿ 9 5G SE ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1,080 x 2,412 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ನೀಡಲಾಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಇದೆ. 30W ಕ್ವಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಬೆಲೆ 19,999 ರೂ. ಗಳಿಂದ ಪ್ರಾರಂಭವಾಗುತ್ತದೆ.
ರೆಡ್ಮಿ ನೋಟ್ 11 ಪ್ರೊ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೋ G96 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಬೆಲೆ 17,999 ರೂ. ಗಳಿಂದ ಪ್ರಾರಂಭವಾಗುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Instagram: ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ
ಪೋಕೋ X4 ಪ್ರೊ 5G ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವೂ ಇದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ 18,999 ರೂ. ಗಳಿಗೆ ನಿಮ್ಮದಾಗಿಸಬಹದು.
ಐಕ್ಯೂ Z6 5G ಸ್ಮಾರ್ಟ್‌ಫೋನ್ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸೆನ್ಸಾರ್ ಹೊಂದಿದೆ. 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ 3P9 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಆರಂಭಿಕ ಬೆಲೆ 15,999 ರೂ. ಆಗಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Sat, 4 June 22