AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರದಲ್ಲಿ ಡ್ರಗ್ಸ್ ಸಪ್ಲೈ ಮಾಡುವುದರ ಬಗ್ಗೆ ಮಾಹಿತಿ ಬಾಯ್ಬಿಟ್ಟ ಆರೋಪಿ ಗಂಗಾಧರ್, ಕೆಲ ಸಜಾ ಬಂಧಿ ಕೈದಿಗಳು ವಶಕ್ಕೆ

ಪರಪ್ಪನ ಅಗ್ರಹಾರ ಸಿಬ್ಬಂದಿ ಗಂಗಾಧರ್, ತಾನು ಯಾವ ರೀತಿ ಕೈದಿಗಳಿಗೆ ಡ್ರಗ್ಸ್ ನೀಡುತ್ತಿದ್ದೆ ಎಂಬುದರ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾನೆ. ಗಂಗಾಧರ್ ಮಾತ್ರೆ ನೀಡುವ ನೆಪದಲ್ಲಿ ಕೈದಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಕೆಲ ಸಜಾ ಬಂಧಿ ಕೈದಿಗಳಿಗೆ ಡ್ರಗ್ಸ್ ಸಪ್ಲೈ ಆಗ್ತಿತ್ತು. ಶರ್ಟ್ ಜೇಬಿನಲ್ಲಿ ಮಾತ್ರೆಗಳ ಶೀಟನ್ನ ಇಟ್ಟುಕೊಂಡು, ಒಳು ಉಡುಪಿನಲ್ಲಿ ಡ್ರಗ್ಸ್ ಬಚ್ಟಿಟ್ಟುಕೊಂಡು ಕೈದಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ.

ಪರಪ್ಪನ ಅಗ್ರಹಾರದಲ್ಲಿ ಡ್ರಗ್ಸ್ ಸಪ್ಲೈ ಮಾಡುವುದರ ಬಗ್ಗೆ ಮಾಹಿತಿ ಬಾಯ್ಬಿಟ್ಟ ಆರೋಪಿ ಗಂಗಾಧರ್, ಕೆಲ ಸಜಾ ಬಂಧಿ ಕೈದಿಗಳು ವಶಕ್ಕೆ
ಸೆಂಟ್ರಲ್ ಜೈಲು
TV9 Web
| Updated By: ಆಯೇಷಾ ಬಾನು|

Updated on:Feb 16, 2022 | 9:41 AM

Share

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು(Parappana Agrahara Jail) ಅನೇಕ ಅಕ್ರಮ ಚಟುವಟಿಕೆಗಳ ಆಗರವಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಾದಕ ಸಪ್ಲೈ(Drugs) ಮಾಡಲು ಹೋಗಿ ಗಂಗಾಧರ್ ಎಂಬ ಸಿಬ್ಬಂದಿ ಅರೆಸ್ಟ್ ಆಗಿದ್ದರು. ಸದ್ಯ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸರು ಆರೋಪಿ ಗಂಗಾಧರ್ನನ್ನು 14 ದಿನಗಳ ಕಾಲ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದು ಅನೇಕ ಮಾಹಿತಿಗಳು ಹೊರ ಬಿದ್ದಿವೆ. ಡ್ರಗ್ಸ್ ಸರಬರಾಜು ಜೈಲಿನಲ್ಲಿ ಹೇಗೆಲ್ಲಾ ಆಗ್ತಿತ್ತು ಅನ್ನೋದನ್ನ ಆರೋಪಿ ಬಾಯ್ಬಿಟ್ಟಿದ್ದಾನೆ.

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಹಿನ್ನಲೆ ಈಗಾಗ್ಲೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಮಧ್ಯೆ ಸಿಬ್ಬಂದಿಯಿಂದಲೇ ಡ್ರಗ್ಸ್ ಸರಬರಾಜು ಆಗುತ್ತಿರುವ ವಿಚಾರವನ್ನ ಪೊಲೀಸ್ರು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯ ಕೈದಿಗಳಿಗೆ ಡ್ರಗ್ಸ್ ಸಪ್ಲೈ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿ ಗಂಗಾಧರ್ನನ್ನು ವಿಚಾರಣೆ ನಡೆಸಿದ್ದು ಅನೇಕ ಮಾಹಿತಿಗಳು ಬಯಲಾಗಿವೆ.

ಪರಪ್ಪನ ಅಗ್ರಹಾರ ಸಿಬ್ಬಂದಿ ಗಂಗಾಧರ್, ತಾನು ಯಾವ ರೀತಿ ಕೈದಿಗಳಿಗೆ ಡ್ರಗ್ಸ್ ನೀಡುತ್ತಿದ್ದೆ ಎಂಬುದರ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾನೆ. ಗಂಗಾಧರ್ ಮಾತ್ರೆ ನೀಡುವ ನೆಪದಲ್ಲಿ ಕೈದಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಕೆಲ ಸಜಾ ಬಂಧಿ ಕೈದಿಗಳಿಗೆ ಡ್ರಗ್ಸ್ ಸಪ್ಲೈ ಆಗ್ತಿತ್ತು. ಶರ್ಟ್ ಜೇಬಿನಲ್ಲಿ ಮಾತ್ರೆಗಳ ಶೀಟನ್ನ ಇಟ್ಟುಕೊಂಡು, ಒಳು ಉಡುಪಿನಲ್ಲಿ ಡ್ರಗ್ಸ್ ಬಚ್ಟಿಟ್ಟುಕೊಂಡು ಕೈದಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ. ತಪಾಸಣೆ ವೇಳೆ ಮಾತ್ರೆಯ ಶೀಟ್ ತೆಗೆದು ಸಜಾ ಬಂಧಿ ಕೈದಿಗಳಿಗೆ ಅಂತೇಳಿ ಒಳ ಹೋಗ್ತಿದ್ದ. ನಾಲ್ಕೈದು ಬಾರಿ ಇದೇ ರೀತಿ ಜೈಲಿನ ಒಳಗೆ ಡ್ರಗ್ಸ್ ತೆಗೆದುಕೊಂಡು ಹೋಗಿರೋದು ಬೆಳಕಿಗೆ ಬಂದಿದೆ. ಜೈಲಿನ ಒಳಗಿದ್ದ ಓರ್ವ ಸಜಾ ಬಂಧಿ ಕೈದಿಯ ಸ್ನೇಹಿತನಿಂದ ಗಂಗಾಧರ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಜೈಲಿನೊಳಗೆ ಒಂದು ಬಾರಿ ಡ್ರಗ್ಸ್ ನೀಡುವುದಕ್ಕೆ ₹5,000 ಪಡೆಯುತ್ತಿದ್ದ. ಗಂಗಾಧರ್ ಸಜಾ ಬಂಧಿ ಕೈದಿಗೆ ನೀಡುತ್ತಿದ್ದ ಡ್ರಗ್ಸ್ನ ಸಜಾ ಬಂಧಿ ಕೈದಿಗಳು ಚಿಕ್ಕ ಚಿಕ್ಕ ಪ್ಯಾಕೇಟ್ಗಳನ್ನಾಗಿ ಮಾಡಿ ರೌಡಿಶೀಟರ್ಗಳಿಗೆ ಮತ್ತು ಕೆಲ ಕೈದಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು.

ಇದನ್ನೇ ಕೆಲ ಸಜಾ ಬಂಧಿ ಕೈದಿಗಳು ವಾರಕ್ಕೊಮ್ಮೆ ಜೈಲಿನಲ್ಲಿ ಬ್ಯುಸಿನಸ್ ಮಾಡಿಕೊಂಡಿದ್ದರು. ಸದ್ಯ ಪೊಲೀಸರು ನಾಲ್ಕೈದು ಮಂದಿ ಸಜಾ ಬಂಧಿ ಕೈದಿಗಳನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರಿಂದ ಸಜಾ ಬಂಧಿ ಕೈದಿಗಳ ವಿಚಾರಣೆ ನಡೆಯುತ್ತಿದೆ. ಜೈಲಿನಲ್ಲಿ ಡ್ರಗ್ ಮಾರಾಟದ ಬಗ್ಗೆ ಕೈದಿಗಳು ಬಾಯ್ಬಿಟ್ಟಿದ್ದಾರೆ. ಡ್ರಗ್ಸ್ ಮತ್ತು ಗಾಂಜಾ ಡೀಲ್ ಮಾಡ್ತಿದ್ದ ಓರ್ವ ಸಜಾ ಬಂಧಿ ಕೈದಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Parappana Agrahara Jail: ಜಯಲಲಿಲಾ ಆಪ್ತೆ ಶಶಿಕಲಾಗೆ ನೆರವು ನೀಡಿದ ಪರಪ್ಪನ ಅಗ್ರಹಾರ ಜೈಲು ಪೊಲೀಸರಿಗೆ ಸಂಕಷ್ಟ

Published On - 9:40 am, Wed, 16 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ