ಹೊಸಕೋಟೆ: ಸರ್ಕಾರಿ ಭೂಮಿಯಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದ 38 ವಾಣಿಜ್ಯ ಮಳಿಗೆಗೆಳು ಒಂದೇ ಗಂಟೆಯಲ್ಲಿ ನೆಲಸಮ

ಹೊಸಕೋಟೆ ನಗರದ ಕೆಇಬಿ ವೃತ್ತದಲ್ಲಿರುವ ಅಂಗಡಿ ಮುಂಗಟ್ಟುಗಳಿಗಾಗಿ ಹೊಸಕೋಟೆ ನಗರಸಭೆ ಸದಸ್ಯೆ ಸುಗುಣ ಅವರ ಪತಿ ಮೋಹನ್ ಮತ್ತು ಸಹೋದರ ರವಿ ಮುಕ್ಕಾಲು ಎಕರೆ ಅರಣ್ಯ ಇಲಾಖೆ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ರು. ಅವುಗಳನ್ನ ಬಾಡಿಗೆಗೆ ನೀಡಿ ಆ ಮೂಲಕ ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯವನ್ನು ಪಡೆಯುತ್ತಿದ್ರು.

ಹೊಸಕೋಟೆ: ಸರ್ಕಾರಿ ಭೂಮಿಯಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದ 38 ವಾಣಿಜ್ಯ ಮಳಿಗೆಗೆಳು ಒಂದೇ ಗಂಟೆಯಲ್ಲಿ ನೆಲಸಮ
38 ವಾಣಿಜ್ಯ ಮಳಿಗೆಗೆಳು ಒಂದೇ ಗಂಟೆಯಲ್ಲಿ ನೆಲಸಮ
Follow us
| Updated By: ಗಣಪತಿ ಶರ್ಮ

Updated on:Oct 27, 2023 | 6:25 PM

ಹೊಸಕೋಟೆ, ಅಕ್ಟೋಬರ್ 27: ಹೆಬ್ಬಾಗಿಲಿನಂತಿರುವ ನಗರವಾದ್ದರಿಂದ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದುಮ, ಅಡಿ ಭೂಮಿ ಸಹ ಬಂಗಾರಕ್ಕಿಂತ ಹೆಚ್ಚಿನ ಬೆಲೆ ಬಾಳುತ್ತಿದೆ. ಹೀಗಿದ್ದರೂ ಹಲವು ದಶಕಗಳಿಂದ ಸರ್ಕಾರಿ ಭೂಮಿ ಮೂಲಕವೇ ಅದೊಂದು ಕುಟುಂಬ ಲಕ್ಷ ಲಕ್ಷ ಆದಾಯಗಳಿಸುತ್ತಿತ್ತು. ಶುಕ್ರವಾರ ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದ ಜೆಸಿಬಿಗಳು ನಗರಸಭೆ ಸದಸ್ಯೆಯ ಕುಟುಂಬದ ಆಧಾಯಕ್ಕೆ ಬ್ರೇಕ್ ಹಾಕಿವೆ. ಹೊಸಕೋಟೆ (Hoskote) ನಗರದ ಪ್ರಮುಖ ರಸ್ತೆಯೇ ಪುಲ್ ಬಂದ್ ಆಗಿದೆ. ರಸ್ತೆ ಬದಿಯಲ್ಲಿ ಒಂದಲ್ಲ ಎರಡಲ್ಲ ಹತ್ತಲ್ಲ ಇಪ್ಪತ್ತಲ್ಲ ಬರೋಬ್ಬರಿ 38 ಅಂಗಡಿಗಳ ಮೇಲೆ ಜೆಸಿಬಿಯ ವಕ್ರದೃಷ್ಟಿ ಬಿದ್ದಿದ್ದು, ಒಂದೊಂದು ನಿಮಿಷಕ್ಕೂ ಒಂದೊಂದು ಅಂಗಡಿ ನೆಲಸಮವಾಗುತ್ತಿದ್ದರೆ (Anti Encroachment drive) ಇತ್ತ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶದ ಜ್ವಾಲೆಯನ್ನೇ ಉಗುಳಿತ್ತಿದ್ದಾರೆ.

ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಕೆಇಬಿ ವೃತ್ತದಲ್ಲಿರುವ ಅಂಗಡಿ ಮುಂಗಟ್ಟುಗಳಿಗಾಗಿ ಹೊಸಕೋಟೆ ನಗರಸಭೆ ಸದಸ್ಯೆ ಸುಗುಣ ಅವರ ಪತಿ ಮೋಹನ್ ಮತ್ತು ಸಹೋದರ ರವಿ ಮುಕ್ಕಾಲು ಎಕರೆ ಅರಣ್ಯ ಇಲಾಖೆ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ರು. ಅವುಗಳನ್ನ ಬಾಡಿಗೆಗೆ ನೀಡಿ ಆ ಮೂಲಕ ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯವನ್ನು ಪಡೆಯುತ್ತಿದ್ರು. ಹೀಗಾಗಿ 1980 ರಿಂದಲೇ ಈ ಬಗ್ಗೆ ಕೇಸ್ ಹಾಕಿ ಅರಣ್ಯ ಇಲಾಖೆ ವ್ಯಾಜ್ಯ ನಡೆಸಿಕೊಂಡು ಬಂದಿದ್ದು ಹೈಕೋರ್ಟ್ ಮೆಟ್ಟಿಲು ಸಹ ಏರಿದ್ರು. ಕಳೆದ ತಿಂಗಳು ಹೈಕೋರ್ಟ್ ನಲ್ಲಿ ವಾದ ವಿವಾದ ಆಲಿಸಿದ ನ್ಯಾಯಾಲಯ ಅರಣ್ಯ ಇಲಾಖೆ ಪರ ಆದೇಶ ಮಾಡಿದೆ. ಹೀಗಾಗಿ ಇಂದು ಬೆಳ್ಳಂ ಬೆಳಗ್ಗೆ ಮೂರು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿದ ಹೊಸಕೋಟೆ ವಲಯ ಅರಣ್ಯಾಧೀಕಾರಿ ವರುಣ್ ಕುಮಾರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೊಬಸ್ತ್ ನಲ್ಲಿ 38 ಅಂಗಡಿಗಳನ್ನ ಡೆಮಾಲಿಷನ್ ಮಾಡುವ ಮೂಲಕ ಒತ್ತುವರಿ ತೆರವುಗೊಳಿಸಿದ್ರು.

ಬೆಳಗ್ಗೆ ಏಕಾಏಕಿ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಂಗಡಿಗಳಲ್ಲಿದ್ದ ಸಾಮಾನುಗಳನ್ನ ಹೊರ ಹಾಕಿ ತೆರವು ಕಾರ್ಯ ಮಾಡಿದ್ದು ಒಂದೊಂದು ಅಂಗಡಿ ನೆಲಸಮವಾಗ್ತಿತ್ತು. ಜೊತೆಗೆ ನಗರಸಭೆ ಸದಸ್ಯೆ ಸುಗುಣ ಹಾಗೂ ಅವರ ಪತಿ ಮೋಹನ್ ಅರಣ್ಯ ಇಲಾಖೆ ಅಧಿಕಾರಿಗಳ ಏಕಾಏಕಿ ತೆರವು ಕಾರ್ಯ ವಿರುದ್ದ ಆಕ್ರೋಶ ಹೊರ ಹಾಕಿದ್ರು. ಕಳೆದ ಹಲವು ವರ್ಷಗಳಿಂದ ನಾವು ಇದೇ ಜಮೀನಿನಲ್ಲಿದ್ದು, ಪ್ರೌಢಶಾಲೆಗೆ ನಮ್ಮ ಹಿರಿಯರು ಜಮೀನು ಕೊಟ್ಟಿದ್ದ ಕಾರಣ ಇಲ್ಲಿ ನಮಗೆ ಜಮೀನು ನೀಡಿದ್ರು. ಆದ್ರೆ ಇದೀಗ ಸರ್ವೆ ಸಹ ಮಾಡದೆ ಏಕಾಏಕಿ ಬಂದು ತೆರವು ಮಾಡುವ ಮೂಲಕ ರಾಜಕೀಯ ಪಿತೂರಿ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರ ಹಾಕಿದ್ರು. ಇನ್ನೂ ಕುಟುಂಬಸ್ಥರು ಆಕ್ರೋಶ ಹೊರ ಹಾಕ್ತಿದ್ದಂತೆ ವಾಸದ ಮನೆಗೆ ಒಂದು ವಾರ ಗಡುವು ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನ ತಾತ್ಕಾಲಿವಾಗಿ ನಿಲ್ಲಿಸಿದ್ರು.

ಇದನ್ನೂ ಓದಿ: ನೆಲಮಂಗಲ: ಬಾಯ್ಲರ್ ಸ್ಫೋಟ: ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಾಯ

ಒಟ್ಟಾರೆ ಹಲವು ವರ್ಷಗಳಿಂದ ವಿವಾದದ ಗೂಡಾಗಿದ್ದ ಹೊಸಕೋಟೆ ಅರಣ್ಯ ಇಲಾಖೆಯ ಕೋಟಿ ಕೋಟಿ ಮೌಲ್ಯದ ಜಮೀನು ಇಂದು ಬೆಳಗ್ಗೆ ಜೆಸಿಬಿಗಳ ಘರ್ಜನೆ ಮೂಲಕ ಮರಳಿ ಅರಣ್ಯ ಇಲಾಖೆಯ ವಶವಾಗಿದೆ. ಇನ್ನೂ ಇದೇ ರೀತಿ ಹೊಸಕೋಟೆಯಲ್ಲಿ ಸಾಕಷ್ಟು ಕಡೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು ಎಲ್ಲೆಡೆ ಇದೇ ರೀತಿ ತೆರವು ಕಾರ್ಯ ಹಮ್ಮಿಕೊಳ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:25 pm, Fri, 27 October 23