ನೆಲಮಂಗಲ, ಆ.05: ಶೋಕಿ ಲೈಫ್‌ಸ್ಟೈಲ್‌ಗಾಗಿ ಹಣ ಮಾಡೋಕೆ ಬೈಕ್ ಕಳ್ಳತನಕ್ಕೆ(Bike Theft) ಇಳಿದು ಹಳ್ಳಿಗಾಡಿಗಳಿಗೆ ಮಾರಾಟ ಮಾಡುತ್ತಿದ್ದ ಕರ್ತನಾಕ್ ಕಳ್ಳರನ್ನ ಬಾಗಲಗುಂಟೆ ಪೊಲೀಸರು(Bagalgunte police) ಬಂಧಿಸಿದ್ದಾರೆ. ಬೆಂಗಳೂರಿನ ಲಗ್ಗೆರೆ ಮೂಲದ 29 ವರ್ಷಸ ಜೀವನ್, 30 ವರ್ಷದ ಲಕ್ಷಣ್ ಬಂಧಿತ ಆರೋಪಿಗಳು. ಇವರು ಬೈಕ್ಗಳನ್ನು ಕದ್ದು ಹಳ್ಳಿಗಳಲ್ಲಿ ಸಿಕ್ಕಷ್ಟು ರೇಟ್ಗೆ ಮಾರಾಟ ಮಾಡಿ ಬಂದ ಹಣದಲ್ಲಿ ಶೋಕಿ ಮಾಡ್ತಿದ್ದರು. ಹೀಗೆ ಕದ್ದು ಪರಾರಿಯಾಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಾಲ್ಯ ಸ್ನೇಹಿತರಾದ ಇವರಿಬ್ಬರು ಬೈಕ್ ಎಗರಿಸುವಲ್ಲಿ ನಿಸ್ಸೀಮರು, ಯಾವುದೇ ಬೈಕ್ ಆಗ್ಲಿ ಕ್ಷಣಾರ್ಧದಲ್ಲಿ ಎಗರಿಸಿ ಒಂದೆ ದಿನದಲ್ಲಿ ರಾಜ್ಯದ ವಿವಿಧ ಹಳ್ಳಿಗಳಿಗೆ ಸಾಗಿಸುವಷ್ಟು ನಿಪುಣತೆ ಹೊಂದಿದ್ದರು. ತಮ್ಮ ಶೋಕಿ ಬಿಂದಾಸ್ ಲೈಫ್ ಸ್ಟೈಲ್‌ಗೆ ಆಸೆ ಬಿದ್ದು ಕಳ್ಳತನ ಮಾಡುತ್ತಿದ್ದ ಇವರಿಬ್ಬರನ್ನ ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಕೇವಲ ಬೈಕ್ ಮಾತ್ರ ಅಲ್ಲ ಟಾರ್ಗೆಟ್ ಇಟ್ಟು ಹೊಡುದ್ರೆ ಬೈಕ್ ಸಿಕ್ಕಿಲ್ಲ ಅಂದ್ರೆ ಕಾರ್ ಸ್ಟೀರಿಯೋ ಸಿಸ್ಟಂ ಎಗರಿಸಿ ಎಸ್ಕೇಪ್ ಆಗ್ತಿದ್ದವರು ಸದ್ಯ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: ಪ್ರಿಯತಮನಿಂದ ಯುವತಿ ಮೇಲೆ ರಾಡ್ನಿಂದ ಹಲ್ಲೆ; ಆರೋಪಿ ಬಂಧನ, ಕಾರಣ ಇಲ್ಲಿದೆ ನೋಡಿ
ಬ್ಯಾಡರಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಯಶವಂತಪುರ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಈ ಖದೀಮರು ಕದ್ದ ಬೈಕ್‌ಗೆ ನಂಬರ್ ಪ್ಲೇಟ್ ಬದಲಾಯಿಸಿ ಬೇರೆ ಜಿಲ್ಲೆಗಳ ಹಳ್ಳಿ ಪ್ರದೇಶಗಳಿಗೆ ಮನಸಿಗೆ ಬಂದ ಬೆಲೆಗೆ ಮಾರಾಟ ಮಾಡ್ತಾ ಇದ್ರು. ಫೈನಾನ್ಸ್‌ನಲ್ಲಿ ಜಪ್ತಿ ಆಗಿರುವ ಬೈಕ್, ಡಾಕ್ಯುಮೆಂಟ್ ಲೇಟ್ ಆಗುತ್ತೆ ಎಂದು ಸಿಕ್ಕಷ್ಟು ದುಡ್ಡಿಗೆ ಮಾರಾಟ ಮಾಡಿ ಬಂದ ಹಣವನ್ನ ಮಜಾ ಮಾಡ್ತಿದ್ದರು. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ, ನೈಟ್ ರೌಂಡ್ಸ್‌ನಲ್ಲಿದ್ದ ಇನ್ಸ್ ಪೆಕ್ಟರ್ ಸಂದೀಪ್ ಅವರ ಕೌರಿಗೆ ಸಿಕ್ಕಿಬಿದ್ದಿದ್ದಾರೆ.
ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು ಬಂಧಿತರಿಂದ ಹತ್ತು ಬೈಕ್, ಟೈಯರ್, ಫಾರ್ಚ್ಯುನರ್ ಕಾರಿನ ಸ್ಟೀರಿಯೋ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ